ಎಲ್ಲೂ ಹೋಗಿಲ್ಲ ಅಣಜಿ ನಾಗರಾಜ್: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ 'ಭೀಮಾ ತೀರದಲ್ಲಿ' ಸುದ್ದು.. ಏನು ಸ್ಪೆಷಲ್?

ಉತ್ತರ ಕರ್ನಾಟಕದಲ್ಲಿ ರಕ್ತಚರಿತ್ರೆ ಬರೆದ ಕಥೆಗೆ ಸಿನಿಮಾ ರೂಪ ಕೊಡಲಾಗಿತ್ತು. ಅದುವೇ 'ಭೀಮಾ ತೀರದಲ್ಲಿ'. ಸ್ಯಾಂಡಲ್‌ವುಡ್‌ನಲ್ಲಿ ಇದೊಂದು ರಗಡ್, ರಿಯಲಿಸ್ಟಿಕ್ ಸಿನಿಮಾಗಳ ಸಾಲಿಗೆ ಸೇರಿಸಬಹುದಾದ ಸಿನಿಮಾ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದರು. ಹಿರಿಯ ನಿರ್ದೇಶಕ ಎನ್.ಓಂ ಪ್ರಕಾಶ್ ರಾವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.

'ಭೀಮಾ ತೀರದಲ್ಲಿ' ಆ ಕಾಲಕ್ಕೆ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ಆದರೆ, ಲೇಖಕ ರವಿ ಬೆಳಗೆರೆ ಹಾಗೂ ಸಿನಿಮಾ ತಂಡದ ನಡುವಿನ ವಿವಾದದಿಂದ ಥಿಯೇಟರ್‌ನಲ್ಲಿ ಸೊರಗುವಂತಾಗಿತ್ತು. ಹೀಗಾಗಿ ಅಣಜಿ ನಾಗರಾಜ್ ಮತ್ತೆ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ರಿ-ರಿಲೀಸ್ ಮಾಡುವುದಕ್ಕೆ ಹೊರಟಿದ್ದಾರೆ. ಹಾಗಂತ ಸುಮ್ಮನೆ ರಿಲೀಸ್ ಮಾಡುತ್ತಿಲ್ಲ. ಸಿನಿಮಾ ರಿ-ವರ್ಕ್ ಮಾಡಲಾಗಿದೆ. ಶೇ.15ರಷ್ಟು ಸಿನಿಮಾವನ್ನು ರಿ-ಶೂಟ್ ಮಾಡಲಾಗಿದೆ. ಇದೇ ತಿಂಗಳು ರಿಲೀಸ್ ಮಾಡುವುದಕ್ಕೆ ಓಡಾಡುತ್ತಿರುವ ಅಣಜಿ ನಾಗರಾಜ್ ಫಿಲ್ಮಿಬೀಟ್‌ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Senior Producer Anaji Nagaraj re-releasing Duniya Vijay starrer Bheema Theeradalli with changes

"ಭೀಮಾ ತೀರದಲ್ಲಿ ಸಿನಿಮಾ ರಿಲೀಸ್ ಮಾಡಿದಾಗ ರವಿ ಬೆಳಗೆರೆಯದ್ದು ಕಾಂಟ್ರವರ್ಸಿಯಾಗಿತ್ತು. ಹೀಗಾಗಿ ಆಗ ಸಿನಿಮಾ ಹೆಚ್ಚು ದಿನ ಪ್ರದರ್ಶನ ಮಾಡುವುದಕ್ಕೆ ಆಗಲಿಲ್ಲ. ಅಲ್ಲದೆ ಸಿನಿಮಾ 2.45 ಗಂಟೆಯಷ್ಟು ಉದ್ದವಿತ್ತು. ಈಗೀನ ಜನರೇಷನ್‌ಗೆ ಇಷ್ಟು ಉದ್ದದ ಸಿನಿಮಾ ಇಷ್ಟ ಆಗುವುದಿಲ್ಲ. ಈ ಕಾರಣಕ್ಕೆ ಸಿನಿಮಾವನ್ನು ಕಟ್ ಮಾಡಿ, ಲಂಡನ್‌ನಲ್ಲಿರುವ ಡಾಲ್ಭಿಯಲ್ಲಿ ಮಿಕ್ಸಿಂಗ್ ಮಾಡಿ, ಮತ್ತೆ ಎಡಿಟಿಂಗ್ ಮಾಡಿದ್ದೇವೆ. ಈ ಸಿನಿಮಾವನ್ನು ನೋಡಿ, ಈಗ ಜನರೇಷನ್ ಫಿಲ್ಮ್ ಮೇಕರ್ಸ್ ಕಲಿತುಕೊಳ್ಳಬಹುದು." ಎಂದು ಸಂದರ್ಶನದಲ್ಲಿ ಹಿರಿಯ ನಿರ್ದೇಶಕ ಅಣಜಿ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.

ಅಣಜಿ ನಾಗರಾಜ್ ಮಾಡಿರುವ ಹೊಸ ಪ್ರಯತ್ನಗಳ ಬಗ್ಗೆ ಫಿಲ್ಮಬೀಟ್ ಜೊತೆ ಹಂಚಿಕೊಂಡಿದ್ದಾರೆ. "ಇದೊಂದು ವಿಶಿಷ್ಟ ಪ್ರಯತ್ನ. 50-60 ಕೋಟಿ ಹಾಕಿದರೂ ಇಂತಹ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ಹಾಗೇ ಸಿನಿಮಾವನ್ನು ಮಾಡಿದ್ದೇವೆ. ಹಳೇ ಕಾಪಿಯನ್ನು ಇಟ್ಟುಕೊಂಡು, ಕೆಲವು ಭಾಗಗಳನ್ನು ಮತ್ತೆ ಹೊಸದಾಗಿ ಶೂಟ್ ಮಾಡಿ, ಕೇರಳದ ಮೋಹನ್‌ಲಾಲ್ ಸ್ಟುಡಿಯೋದಲ್ಲಿ ಅಟ್ಮಾಸ್ ಮಾಡಿಸಿದ್ದೇನೆ. ಸುಮಾರು ಶೇ.15ರಷ್ಟು ಸಿನಿಮಾವನ್ನು ರೀ ಶೂಟ್ ಮಾಡಿದ್ದೇನೆ." ಎನ್ನುತ್ತಾರೆ ಅಣಜಿ ನಾಗರಾಜ್.

Senior Producer Anaji Nagaraj re-releasing Duniya Vijay starrer Bheema Theeradalli with changes

ಅಣಜಿ ನಾಗರಾಜ್ ಈ ಸಿನಿಮಾವನ್ನು ರಿ-ರಿಲೀಸ್ ಮಾಡುವುದಕ್ಕೆ ಮಾಡಿದ ಪ್ರಯತ್ನಕ್ಕೆ ಸುಮಾರು 1 ಕೋಟಿ ರೂಪಾಯಿಯಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಅಂದ್ಹಾಗೆ, ಹೀಗೆ ಮಾಡಬಹುದೆಂದು ಅಣಜಿ ನಾಗರಾಜ್‌ಗೆ ಐಡಿಯಾ ಹೊಳೆದಿದ್ದು ಲಾಕ್‌ಡೌನ್ ಸಮಯದಲ್ಲಿ. 10 ರಿಂದ 20 ಲಕ್ಷ ರೂಪಾಯಿಗೆ ಸಿನಿಮಾ ಕೇಳುತ್ತಿದ್ದರು. ಹೀಗಾಗಿ "ನಾವು ಸಿನಿಮಾವನ್ನು ಉಳಿಸಿಕೊಂಡರೆ, ಸಿನಿಮಾ ನಮ್ಮನ್ನು ಉಳಿಸಿಕೊಳ್ಳುತ್ತೆ ಅಂದುಕೊಂಡಿದ್ದೆ" ಎಂದು ಅಣಜಿ ನಂಬಿದ್ದರು. ಇಂದು ಹಾಗೇ ಆಯ್ತು ಎಂದು ಹೇಳಿದ್ದಾರೆ.

ಸಿನಿಮಾವನ್ನು ಈ ತಿಂಗಳೇ ರಿಲೀಸ್ ಮಾಡುವುದಕ್ಕೆ ನಿರ್ಮಾಪಕ ಅಣಜಿ ನಾಗರಾಜ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಸೆನ್ಸಾರ್ ಕೂಡ ಆಗಿದೆ. ಅಲ್ಲದೆ ಮೂರು ಭಾಷೆಯಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಭೀಮಾ ತೀರದಲ್ಲಿ ಅಂತಿದ್ದರೆ, ತೆಲುಗಿನಲ್ಲಿ 'ಕಡಪ' ಅನ್ನೋ ಟೈಟಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ತಮಿಳಿನಲ್ಲಿ 'ಅಡಗಾದವನ್' ಎನ್ನುವ ಹೆಸರಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

"ಈಗಿನ ಜನರೇಷನ್‌ ಸಿನಿಮಾ ಮಾಡುವಾಗ ತುಂಬಾನೇ ತಪ್ಪು ಮಾಡುತ್ತಿದ್ದಾರೆ. ಇಂದು ಜನರನ್ನು ರೀಚ್ ಮಾಡುವುದು ಅಷ್ಟು ಸುಲಭವಿಲ್ಲ. ಈಗ ಅನ್ನೋದು ಕ್ವಾಲಿಟಿ ತುಂಬಾನೇ ಮುಖ್ಯ. ಇವತ್ತು ನಾವು ಸಿನಿಮಾವನ್ನು ಉಳಿಸಿಕೊಂಡರೆ, ನಾನು ಸಿನಿಮಾ ನಮ್ಮನ್ನು ಉಳಿಸಿಕೊಳ್ಳುತ್ತೆ ಎಂದು ಹೇಳಬಹುದು. ಅವತ್ತು ಭೀಮಾ ತೀರವನ್ನು ಚೆನ್ನಾಗಿ ಮಾಡಿ ಉಳಿಸಿಕೊಂಡಿದ್ದೆ. ಇವತ್ತು ಅದು ನನ್ನನ್ನು ಉಳಿಸಿಕೊಂಡಿದೆ" ಎಂದು ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.

More from Filmibeat

English summary
Senior Producer Anaji Nagaraj re-releasing Duniya Vijay starrer Bheema Theeradalli with changes;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X