'ಸಿರಿ ಲಂಬೋದರ ವಿವಾಹ'ಕ್ಕೆ ಮುಹೂರ್ತ: ಫೆಬ್ರವರಿ 17ಕ್ಕೆ ಫಿಕ್ಸ್

ಸ್ಯಾಂಡಲ್‌ವುಡ್ ಮಂದಿ ವಿಭಿನ್ನ ಟೈಟಲ್ ಇಡೋದ್ರಲ್ಲಿ ಎಕ್ಸ್‌ಪರ್ಟ್ ಆಗಿಬಿಟ್ಟಿದ್ದಾರೆ. ಒಂದೊಂದು ಸಿನಿಮಾಗಳೂ ಒಂದೊಂದು ಡಿಫ್ರೆಂಟ್ ಟೈಟಲ್ ಇಟ್ಕೊಂಡು ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಇಲ್ಲೊಂದು ಸಿನಿಮಾ ಕೂಡ ಹಾಗೇ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿದೆ.

ಕಿರುತೆರೆ ಕಲಾವಿದರು ಮದುವೆ ಸಂಭ್ರಮದಲ್ಲಿದ್ದಾರೆ. ಅಂದ್ಹಾಗೆ ಫೆಬ್ರವರಿ 17ರಂದು 'ಸಿರಿ ಲಂಬೋದರ ವಿವಾಹ'ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟಕ್ಕೂ ಇದು ರಿಯಲ್ ಲೈಫ್ ಮದುವೆ ಅಲ್ಲ. ಬದಲಾಗಿ, ಇದೊಂದು ಸಿನಿಮಾ ಟೈಟಲ್.

ಬಹುತೇಕ ಕಿರುತೆರೆಯಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿರುವ ಕಲಾವಿದರೆಲ್ಲರೂ ಸೇರಿ ರೆಡಿ ಮಾಡಿರುವ ಸಿನಿಮಾ. ಶಾರ್ಟ್ ಅಂಡ್ ಸ್ವೀಟ್ ಆಗಿ ಈ ಸಿನಿಮಾವನ್ನು ಎಸ್‌ಎಲ್‌ವಿ ಅಂತ ಕರೆಯುತ್ತಿದ್ದಾರೆ. ಸದ್ಯ ಈ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.

Serial Artists Kannada Movie Siri Lamboodara Vivaha Aka SLV Releasing On Feb 17th

'ಸಿರಿ ಲಂಬೋದರ ವಿವಾಹ' ಸಿನಿಮಾದ ಟೀಸರ್ ಅನ್ನು ರಮೇಶ್ ಅರವಿಂದ್ ರಿಲೀಸ್ ಮಾಡಿದ್ದರು. ವಿದೇಶದಲ್ಲಿ ಈ ಸಿನಿಮಾದ ಪ್ರೀಮಿಯರ್ ಕೂಡ ನಡೆದಿದೆ. ವಿದೇಶಿ ಕನ್ನಡಿಗರು ನಮ್ಮ ಚಿತ್ರವನ್ನು ಮನಸಾರೆ ಮೆಚ್ಚಿ ಕೊಂಡಿದ್ದಾರೆ. ಇದರ ಹಿಂದೆನೇ ಸಿನಿಮಾ ಟ್ರೈಲರ್ ಕೂಡ ಬಿಡುಗಡೆಯಾಗಿದೆ.

ಈ ಸಿನಿಮಾವನ್ನು ಸೌರಭ್ ಕುಲಕರ್ಣಿ ನಿರ್ದೇಶನ ಮಾಡಿದ್ದಾರೆ. ಇವರಿಗೆ ಸಿಹಿಕಹಿ ಚಂದ್ರು, ಶಾಲಿನಿ, ಬೇಬಿ ವಂಶಿಕಾ ಸೇರಿದಂತೆ ಅನೇಕ ಗಣ್ಯರು ಪ್ರೋತ್ಸಾಹ ನೀಡಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಂಜನ್ ಎ ಭಾರದ್ವಾಜ್ ನಟಿಸಿದ್ದರೆ, ನಾಯಕಿ ದಿಶಾ ರಮೇಶ್ ಕಾಣಿಸಿಕೊಂಡಿದ್ದಾರೆ. ಇದೊಂದು ಕಂಟೆಂಟ್ ಬೇಸ್ಟ್ ಸಿನಿಮಾ ಕೂಡ ಹೌದು.

Serial Artists Kannada Movie Siri Lamboodara Vivaha Aka SLV Releasing On Feb 17th

ಹೊಸಬರ ಸಿನಿಮಾಗಳನ್ನು ಪ್ರೇಕ್ಷಕರು ನೋಡಲು ಮನಸ್ಸು ಮಾಡುತ್ತಿಲ್ಲ. ಈ ಕಾರಣಕ್ಕೆ ಇಡೀ ಚಿತ್ರತಂಡ 'ಸಿರಿ ಲಂಬೋದರ ವಿವಾಹ' ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ.

More from Filmibeat

English summary
Serial Artists Kannada Movie Siri Lamboodara Vivaha Aka SLV Releasing On Feb 17th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X