»   » ಗೋಲ್ಡನ್ ಸ್ಟಾರ್ ಗಣೇಶ್ ಮಾರ್ಕೆಟ್ ಚೆಲುವಿನ ಚಿತ್ರಾನ್ನ

ಗೋಲ್ಡನ್ ಸ್ಟಾರ್ ಗಣೇಶ್ ಮಾರ್ಕೆಟ್ ಚೆಲುವಿನ ಚಿತ್ರಾನ್ನ

Posted By:
Subscribe to Filmibeat Kannada
Series of flop movies from Golden Star Ganesh
ಗೋಲ್ಡನ್ ಸ್ಟಾರ್ ಗಣೇಶ್ ಮಾರ್ಕೆಟ್ ಕುಸಿದಿದೆಯಾ? ಹೌದು ಎನ್ನುವುದಕ್ಕೆ ರೋಮಿಯೋ ದಂಥ ಪಕ್ಕಾ ಮನರಂಜನೆಯ ಚಿತ್ರ ಧಸಕ್ ಎಂದು ಒಂದೇ ವಾರದಲ್ಲಿ ಲಾಗಾಟಿ ಹೊಡೆದದ್ದೊಂದೇ ಸಾಕ್ಷಿ ಸಾಕು...

ಜನ ಕೆಲ ಮುಖಗಳನ್ನು, ಕೆಲ ನಿರ್ದೇಶಕರನ್ನು, ಕೆಲ ನಟರನ್ನು, ಕೆಲವೊಂದು ವಿಚಾರವನ್ನು ರಿಜೆಕ್ಟ್ ಮಾಡಿಬಿಟ್ಟಿರುತ್ತಾರೆ. ಆ ಸಾಲಿಗೆ ಗಣೇಶ್ ಅವರೂ ಸೇರಿದರಾ? ಅವರ ಸಾಲು ಸಾಲು ಚಿತ್ರಗಳ ಸೋಲು ಇದಕ್ಕೆ ಉತ್ತರವಾಗುತ್ತಿದೆ.

ಉಲ್ಲಾಸ ಉತ್ಸಾಹ, ಏನೋ ಒಂಥರಾ, ಮದುವೆ ಮನೆ, ಸ್ವಂತ ಬ್ಯಾನರ್ ನಲ್ಲಿ ಬಂದ ಕೂಲ್, ರೋಮಿಯೋ ಚಿತ್ರಗಳು ಗಣೇಶ್ ಗೆ ಏನೋ ಒಂಥರಾ ಉಲ್ಲಾಸ ಉತ್ಸಾಹ ತರಲೇ ಇಲ್ಲ.

ಹೀಗೆ ಎಲ್ಲಾ ಚಿತ್ರವೂ ಚಿತ್ರಮಂದಿರದಿಂದ ಮೂರೇ ವಾರದಲ್ಲಿ ಎಗರಿಹೋಯಿತು. ಈಗ ಗಣೇಶ್ ಚಾಲೆಂಜಿಂಗ್ ಆಗಿ ತೆಗೆದುಕೊಂಡು, ಜಿಂದಾ ಯಾ ಮುರ್ದಾ ಎಂದು ಸತ್ವಪರೀಕ್ಷೆಗೆ ಹೊರಟಿರುವ ಚಿತ್ರವೇ ಶ್ರಾವಣಿ ಸುಬ್ರಮಣ್ಯ.

ಈ ಚಿತ್ರದಲ್ಲಿ ಗಣೇಶ್ ಅಮೂಲ್ಯಾ ಜೊತೆ ಮತ್ತೆ ಕಾಣಿಸಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಗಣೇಶ್ ಈ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಹೇಳಿ? ಒಳ ಒಪ್ಪಂದದ ಪ್ರಕಾರ ಗಣೇಶ್‍ಗೆ ಕೇವಲ ಐವತ್ತನಾಲ್ಕು ಲಕ್ಷ ಕೊಡಲಾಗಿದೆ ಎನ್ನುವ ಸುದ್ದಿಯಿದೆ.

ಇನ್ನೊಂದು ಮೂಲದ ಪ್ರಕಾರ ಗಣೇಶ್‍ಗಿಂತ ಮೊದಲು ಈ ಚಿತ್ರಕ್ಕೆ ನಾಯಕನ್ನಾಗಿ ಮಾಡಲು ದಿಗಂತ್ ಅವರಿಗೆ ಆಫರ್ ಹೋಗಿತ್ತಂತೆ. ಅದು ಗಣೇಶ್‍ಗೆ ಗೊತ್ತಾದ ಕೂಡಲೇ ಸಂಬಂಧಪಟ್ಟವರಿಗೆ ಫೋನ್ ಮಾಡಿ, ಸಂಭಾವನೆಗಿಂತ ಹೆಚ್ಚಾಗಿ ತಾನು ಆ ಪಾತ್ರ ಮಾಡಲೇಬೇಕು ಎಂದು ಕೇಳಿಕೊಂಡಿದ್ದಾರೆ.

ಅಂದರೆ, ಆಟೋರಾಜ ಚಿತ್ರದಲ್ಲಿ ಅಜಯ್ ರಾವ್ ಹೀರೋ ಆಗಬೇಕಿತ್ತು. ಕೊನೆಗೆ ಆ ಪಾತ್ರವನ್ನು ಗಣೇಶ್ ನಿರ್ಮಾಪಕ ಕೊಬ್ಬರಿ ಮಂಜು ಥ್ರೂ ತನ್ನ ಕಡೆ ತಿರುಗಿಸಿಕೊಂಡರು ನೋಡಿ ಹಾಗೆ.

ಅದೇ ರೀತಿ ಶ್ರಾವಣಿ ಚಿತ್ರಕ್ಕೂ ಗಣೇಶ್ ಬುಕ್ ಆದರು. ಅದೇನೇ ಇದ್ದರೂ ಗಣೇಶ್‍ಗೆ ಶ್ರಾವಣಿ ಸುಬ್ರಹಣ್ಯ ಕಟ್ಟಕಡೆಯ ಅವಕಾಶ.

ಆ ಚಿತ್ರವೂ ಜೈ ಆಗಿಬಿಟ್ಟರೆ ಗಣೇಶ್ ಹಿರಿಯ ಅಥವಾ ಪೋಷಕ ನಟರಾಗಿ ಭಡ್ತಿ ಪಡೆಯಬೇಕಾಗ ಬಹುದೇನೋ? ಹಾಗಾಗ ಬಾರದೆಂದು ಆಶಿಶೋಣ.

English summary
Golden star Ganesh's recent movies not doing good in box office. He is acting again with Amulya in a film Shravani Subramanya.
Please Wait while comments are loading...