ಆಯನೂರು, ಕಿಮ್ಮನೆ ವಿರುದ್ದ ತಿರುಗಿಬಿದ್ದ ಕಲಾವಿದರು

ಹದಿನಾರನೇ ಲೋಕಸಭೆಗೆ ಚುನಾವಣಾ ಪ್ರಚಾರದ ಕಾವು ಏರುತ್ತಿದ್ದಂತೇ, ವಾಕ್ಸಮರ ಕೂಡಾ ತಾರಕಕ್ಕೇರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕಲಾವಿದರು ರಾಜಕಾರಣಿಗಳ ಹೇಳಿಕೆಗಳ ವಿರುದ್ದ ತಿರುಗಿ ಬಿದ್ದಿರುವುದು ಗಮನಿಸಬೇಕಾದ ಅಂಶ.

ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಪರ ಪ್ರಚಾರ ನಡೆಸುತ್ತಿರುವ ಅವರ ಪತಿ ಶಿವರಾಜ್ ಕುಮಾರ್ ವಿರುದ್ದ ಬಿಜೆಪಿ ಧುರೀಣ ಆಯನೂರು ಮಂಜುನಾಥ್ ಮತ್ತು ಸಚಿವ ಕಿಮ್ಮನೆ ರತ್ನಾಕರ ನೀಡಿರುವ ಹೇಳಿಕೆಗಳನ್ನು ಕಲಾವಿದರು ಒಕ್ಕೂರಿಲಿನಿಂದ ಖಂಡಿಸಿದ್ದಾರೆ. (ಶಿವಮೊಗ್ಗದಲ್ಲಿ ಕೇಳಿಬಂದ ಪಂಚಿಂಗ್ ಡೈಲಾಗ್ ಗಳು)

ಬೇರೆ ಬೇರೆ ಪಕ್ಷಗಳಿಗೆ ಪ್ರಚಾರ ನಡೆಸುತ್ತಿರುವ ಕಲಾವಿದರು, ರಾಜಕಾರಣಿಗಳು ಕಲಾವಿದರನ್ನು ಟೀಕಿಸುವುದು ಸರಿಯಲ್ಲ. ಬಣ್ಣ ಹಚ್ಚುವುದು ನಮ್ಮ ಕಸುಬು. ಅದಕ್ಕೆ ನಮಗೆ ಹೆಮ್ಮೆಯಿದೆ. ಆಯನೂರು ಆಗಲಿ ಕಿಮ್ಮನೆ ಆಗಲಿ ಕಲಾವಿದರ ಬಗ್ಗೆ ಹೇಳಿಕೆ ನೀಡುವಾಗ ಜವಾಬ್ದಾರಿಯುತವಾಗಿ ಮಾತಾನಾಡಲಿ ಎಂದಿದ್ದಾರೆ.

ಜೋಗಿ ಸ್ಟೈಲಿನಲ್ಲಿ ಮತ ಯಾಚಿಸೋಕೆ ಸಂಸತ್ತು ಅನ್ನುವುದು ಮನರಂಜನೆಯ ತಾಣವೇ. ಹಾಡ್ಕೊಂಡು, ಡ್ಯಾನ್ಸ್ ಮಾಡ್ಕೊಂಡು ಮತಯಾಚಿಸುತ್ತಿದ್ದಾರಲ್ಲಾ, ಶಿವಮೊಗ್ಗದ ರಾಜಕೀಯ ಎಲ್ಲಿಗೆ ಬಂದು ನಿಂತಿತು ಎಂದು ಆಯನೂರು ಮಂಜುನಾಥ್, ಶಿವಣ್ಣ ವಿರುದ್ದ ಹೇಳಿಕೆ ನೀಡಿದ್ದರು.

ಹಾಗೆಯೇ, ಶಿವರಾಜ್ ಕುಮಾರ್ ಹಿಂದೆ ಸಾಕಷ್ಟು ಜನ ಓಡಾಡುತ್ತಿದ್ದಾರೆ. ಅವರೆಲ್ಲಾ ಓಟ್ ಹಾಕುವವರಲ್ಲ. ಜೋಗಿ ಡೈಲಾಗ್, ಡಾನ್ಸ್ ನೋಡಲು ಬಂದವರು. ಬಂಗಾರಪ್ಪನವರು ಅನಾರೋಗ್ಯಕ್ಕೆ ಈಡಾಗಿದ್ದಾಗ ಈ ಶಿವರಾಜ್ ಕುಮಾರ್, ಗೀತಾ ಎಲ್ಲಿ ಹೋಗಿದ್ದರು. ಆಗ ಬಾರದ ಇವರು ಈಗ ಬಂಗಾರಪ್ಪ ಫೋಟೋ ಹಿಡಿದು ಈಗ ಓಡಾಡುತ್ತಿದ್ದಾರೆ ಎಂದು ಸಚಿವ ಕಿಮ್ಮನೆ ರತ್ನಾಕರ ತೀರ್ಥಹಳ್ಳಿಯಲ್ಲಿ ವ್ಯಂಗ್ಯವಾಡಿದ್ದರು.

ಆಯನೂರು ಮತ್ತು ಕಿಮ್ಮನೆ ಹೇಳಿಕೆ ವಿರುದ್ದ ಕಲಾವಿದರು ಏನು ಹೇಳಿದ್ದಾರೆ? ಸ್ಲೈಡಿನಲ್ಲಿ

ಎಸ್ ನಾರಾಯಣ್

ಎಸ್ ನಾರಾಯಣ್

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಪರ ಪ್ರಚಾರಕ್ಕೆ ಬಂದಿದ್ದ ನಿರ್ದೇಶಕ, ನಟ, ನಿರ್ಮಾಪಕ ಎಸ್ ನಾರಾಯಣ್ , ನಾವು ಬೇರೆ ಬೇರೆ ಪಕ್ಷದ ಪರವಾಗಿ ಪ್ರಚಾರಕ್ಕೆ ಬಂದಿರಬಹುದು. ಆದರೆ ಮೂಲತಃ ನಾವೆಲ್ಲಾ ಕಲಾವಿದರು. ಆಯನೂರು ಮತ್ತು ಕಿಮ್ಮನೆ ರತ್ನಾಕರ ಅವರು ಮಾತಿನ ಮೇಲೆ ನಿಗಾ ಇಟ್ಟುಕೊಂಡು ಮಾತನಾಡಲಿ.

ಶಶಿಕುಮಾರ್

ಶಶಿಕುಮಾರ್

ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುದ್ದು ಹನುಮೇಗೌಡ ಪರ ಪ್ರಚಾರಕ್ಕೆ ಬಂದ ಮಾಜಿ ಸಂಸದ ಶಶಿಕುಮಾರ್, ನಾನು ಬಣ್ಣದ ಲೋಕದಿಂದ ರಾಜಕೀಯಕ್ಕೆ ಬಂದವನು. ಇಂದಿಗೂ ನನ್ನ ಉಸಿರು ಸಿನಿಮಾ. ಜನರನ್ನು ರಂಜಿಸುವುದು ಕಲಾವಿದರ ಧರ್ಮ. ಅವರಿಬ್ಬರು ಶಿವಣ್ಣ ವಿರುದ್ದ ಹೇಳಿಕೆಗೆ ನನ್ನ ತೀವ್ರ ಆಕ್ಷೇಪವಿದೆ.

ಜಗ್ಗೇಶ್

ಜಗ್ಗೇಶ್

ನಾವೆಲ್ಲಾ ಕಲಾದೇವಿಯ ಮಕ್ಕಳು. ನಾವು ಜೀವನದಲ್ಲಿ ಇಷ್ಟು ಎತ್ತರಕ್ಕೆ ಬಂದಿದ್ದು ಸಿನಿಮಾದಿಂದ. ಆಯನೂರು ಮತ್ತು ಕಿಮ್ಮನೆ ಅವರ ಹೇಳಿಕೆಯಿಂದ ನನಗೆ ನೋವಾಗಿದೆ - ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರ ಪರ ಪ್ರಚಾರ ಮಾಡುತ್ತಾ, ನವರಸನಾಯಕ ಜಗ್ಗೇಶ್

ಶಿವರಾಂ

ಶಿವರಾಂ

ನಾನು ಕ್ಷೇತ್ರದ (ಬಿಜಾಪುರ) ಜೆಡಿಎಸ್ ಅಭ್ಯರ್ಥಿಯಾಗಿದ್ದರೂ, ಆಯನೂರು ಮತ್ತು ಕಿಮ್ಮನೆ ರತ್ನಾಕರ ಹೇಳಿಕೆಯನ್ನು ಖಂಡಿಸುತ್ತೇನೆ. ನಾನೂ ಸಿನಿಮಾದಲ್ಲಿ ನಟಿಸಿದ್ದೇನೆ, ಕಲಾವಿದರ ಬಗ್ಗೆ ಕೇವಲವಾಗಿ ಮಾತನಾಡುವುದು ತಪ್ಪು.

ದುನಿಯಾ ವಿಜಯ್

ದುನಿಯಾ ವಿಜಯ್

ನಾವೆಲ್ಲಾ ಸಿನಿಮಾ ಲೋಕದವರು. ಆತ್ಮೀಯತೆಯಿಂದ ನಮಗೆ ಸ್ನೇಹಿತರಾಗಿರುವ ಅಭ್ಯರ್ಥಿಗಳು ಕರೆದಾಗ ಪ್ರಚಾರಕ್ಕೆ ಹೋಗಿ ನಮ್ಮಿಂದಾಗುವ ಸಹಾಯ ಮಾಡುತ್ತೇವೆ. ಇದಕ್ಕೆ ರಾಜಕಾರಣಿಗಳು ಕಲಾವಿದರ ಬಗ್ಗೆ ಮಾತನಾಡುವುದು ತಪ್ಪು - ಬಿಜಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾ ದುನಿಯಾ ವಿಜಯ್.

ಲೂಸ್ ಮಾದ ಯಾನೆ ಯೋಗೀಶ್

ಲೂಸ್ ಮಾದ ಯಾನೆ ಯೋಗೀಶ್

ನಾನು ಶಿವಣ್ಣನ ಮೇಲಿನ ಅಭಿಮಾನಕ್ಕೆ ಬಂದಿದ್ದೇವೆ. ನಾವು ಮುಖಕ್ಕೆ ಬಣ್ಣ ಹಾಕುತ್ತೇವೆ, ಆದರೆ ಜನರಿಗೆ ಮೋಸ ಮಾಡಲ್ಲ - ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾ ಲೂಸ್ ಮಾದ ಯೋಗಿ

More from Filmibeat

English summary
Several artist condemned Kimmane Ratnakar and Ayanur Manjunath statement on Shivaraj Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X