ಶಾರುಖ್ ಖಾನ್ ಸಿನಿಮಾಗೆ ತಮಿಳು ನಿರ್ದೇಶಕ ಪಡೆಯುತ್ತಿರುವ ಬೆಚ್ಚಿಬೀಳಿಸುವ ಸಂಭಾವನೆ!
ಯಶ್ ಅಭಿನಯದ ಕೆಜಿಎಫ್ ಸಿನಿಮಾಗೆ ಠಕ್ಕರ್ ನೀಡಲು ಹೋಗಿ, ಶೂರುಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ದಯನೀಯವಾಗಿ ಸೋತಿದ್ದು ಗೊತ್ತೇ ಇದೆ,
ಇದಾದ ನಂತರ, ಹಲವು ಕಥೆಗಳು ಬಂದಿದ್ದರೂ, ಯಾವುದನ್ನೂ ಬಾಲಿವುಡ್ ಬಾದಶಾ, ಶಾರುಖ್ ಯಾವುದಕ್ಕೂ ಒಪ್ಪಿಗೆ ನೀಡಿರಲಿಲ್ಲ.
ಅವರ ಇತ್ತೀಚಿನ ಬಹುತೇಕ ಸಿನಿಮಾಗಳು ಅವರ ಒಡೆತನದ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವುದರಿಂದ, ಅಳೆದು ತೂಗಿ, ಸಿನಿಮಾ ಮಾಡಲು ನಿರ್ಧರಿಸಿದ್ದಾರಂತೆ.
ತಮ್ಮ ಅಭಿನಯದ ಹೊಸ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎಂದು ಶಾರುಖ್ ಖಾನ್ ಹೇಳಿದ್ದರು. ಆ ಸಿನಿಮಾವನ್ನು ತಮಿಳಿನ ಅತ್ಲೀ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ. ಈ ಸಿನಿಮಾ ನಿರ್ದೇಶನಕ್ಕೆ ಭಾರೀ ಸಂಭಾವನೆಯನ್ನು ಅವರು ಪಡೆಯುತ್ತಿದ್ದಾರಂತೆ.

ಗಲ್ಲಾಪೆಟ್ಟಿಗೆ ಲೂಟಿ ಮಾಡಿದ್ದ 'ರಾಜರಾಣಿ' ಸಿನಿಮಾ
33ವರ್ಷದ ಅತ್ಲೀ ಕುಮಾರ್, ತಮ್ಮ ಚೊಚ್ಚಲ ಸಿನಿಮಾದಲ್ಲೇ ತಮಿಳುನಾಡಿನಲ್ಲಿ ಜನಪ್ರಿಯಗೊಂಡಿದ್ದರು. 2013ರಲ್ಲಿ ಬಿಡುಗಡೆಯಾದ, ಇವರ ನಿರ್ದೇಶನದ 'ರಾಜರಾಣಿ' ಸಿನಿಮಾ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು. ಹಲವು ಪ್ರಶಸ್ತಿಗಳನ್ನು ಈ ಸಿನಿಮಾಗೆ ಅತ್ಲೀ ಪಡೆದುಕೊಂಡಿದ್ದರು.

ವಿಜಯ್ ಚಿತ್ರಬದುಕಿನ ಬಹುದೊಡ್ಡ ಹಿಟ್ ಸಿನಿಮಾ 'ತೇರಿ'
ಇದಾದ ನಂತರ, ವಿಜಯ್ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿದ್ದ 'ತೇರಿ' ಸಿನಿಮಾವನ್ನು ಅತ್ಲೀ ನಿರ್ದೇಶಿಸಿದ್ದರು. ಈ ಸಿನಿಮಾ, ವಿಜಯ್ ಚಿತ್ರಬದುಕಿನ ಬಹುದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾಯಿತು. ಇದು, ಅತ್ಲೀ ಸಿನಿಮಾ ವೃತ್ತಿ ಬದುಕಿಗೂ ತಿರುವು ನೀಡಿದ ಸಿನಿಮಾ.

ಶಾರುಖ್ ಖಾನ್ ಜೊತೆ ಈಗಾಗಲೇ ಅತ್ಲೀ ಮಾತುಕತೆ
ಸದ್ಯ, ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವುದು ಅತ್ಲೀ ಪಡೆಯುತ್ತಿರುವ ಸಂಭಾವನೆಯ ಬಗ್ಗೆ. ಶಾರುಖ್ ಖಾನ್ ಜೊತೆ ಈಗಾಗಲೇ ಅತ್ಲೀ ಮಾತುಕತೆ ಮುಗಿದಿದೆಯಂತೆ. ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡು ಅತ್ಲೀ, ಕಥೆ, ಚಿತ್ರಕಥೆ ಹಣೆದಿದ್ದು, ಸದ್ಯದಲ್ಲೇ ಈ ಬಗ್ಗೆ ಶಾರುಖ್ ಹೇಳಿಕೆ ನೀಡಲಿದ್ದಾರೆ ಎನ್ನುವ ಮಾಹಿತಿಯಿದೆ.

ಅತ್ಲೀ ಕುಮಾರ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ ಮೂವತ್ತು ಕೋಟಿ
ಬಾಲಿವುಡ್ ಅಂಗಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಶಾರುಖ್ ಖಾನ್ ಅವರ ಇನ್ನೂ ಹೆಸರಿಡದ ಸಿನಿಮಾಗೆ, ಅತ್ಲೀ ಕುಮಾರ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ ಮೂವತ್ತು ಕೋಟಿಯಂತೆ. ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲೇ ಈ ಸಿನಿಮಾ ಸೆಟ್ಟೇರಲಿದೆ.

ವಿಜಯ್ ಜೊತೆ ಅತ್ಲೀ ಬ್ಯಾಕ್ ಟು ಬ್ಯಾಕ್ ಸಿನಿಮಾ
ವಿಜಯ್ ಜೊತೆ ಅತ್ಲೀ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ತೇರಿ ನಂತರ ಮೆರ್ಶಲ್ ಬಿಡುಗಡೆಯಾಗಿತ್ತು. ಈಗ, ವಿಜಯ್, ನಯನತಾರ ಮುಖ್ಯಭೂಮಿಕೆಯಲ್ಲಿರುವ ಬಿಗಿಲ್ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆಯಾಗ್ಲಲಿದೆ. ಇದಾದ ನಂತರ, ಶಾರುಖ್ ಜೊತೆ ಚಿತ್ರೀಕರಣ ಆರಂಭವಾಗಬಹುದು.


Click it and Unblock the Notifications











