ಮೇ 13ಕ್ಕೆ 'ಕಸ್ತೂರಿ ಮಹಲ್' ರಿಲೀಸ್: ದೆವ್ವವಾಗಿ ಕಾಡಲಿರೋ ಶಾನ್ವಿ

ಸ್ಯಾಂಡಲ್‌ವುಡ್ ಮಾಸ್ಟರ್ ಪೀಸ್ ಬ್ಯೂಟಿ ಶಾನ್ವಿ ಶ್ರೀವಾಸ್ತವ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕಸ್ತೂರಿ ಮಹಲ್' ಇದೇ ಶುಕ್ರವಾರ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದೆ. ಈ ಹಿಂದೆ ಹಾರರ್ ಸಿನಿಮಾ 'ಚಂದ್ರಲೇಖ' ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದ ಶಾನ್ವಿ ಶ್ರೀವತ್ಸವ್ ಇದೀಗ 'ಕಸ್ತೂರಿ ಮಹಲ್' ಸಿನಿಮಾ ಮೂಲಕ ದೆವ್ವವಾಗಿ ಮತ್ತೊಮ್ಮೆ ನಿಮ್ಮನ್ನು ಹೆದರಿಸೋಕೆ ಬರುತ್ತಿದ್ದಾರೆ.

ಖ್ಯಾತ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿರುವ 50ನೇ ಸಿನಿಮಾ 'ಕಸ್ತೂರಿ ಮಹಲ್.' ಈ ಚಿತ್ರದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ನಿರೀಕ್ಷೆ ಹೆಚ್ವಿಸಿವೆ. ಟೀಸರ್, ಟ್ರೈಲರ್ ಹಾಗೂ ಹಾಡು ಪ್ರತಿಯೊಂದು ಪ್ರೇಕ್ಷಕರಿಗೆ ಥ್ರಿಲ್ ನೀಡಿವೆ.

Shanvi Srivastava Starrer Kasturi Mahal Releasing On May 13th

ಮೂರು ವರ್ಷದ ಬಳಿಕ ಶಾನ್ವಿ ಹಾರಾರ್ ಕಥಾಹಂದರದ 'ಕಸ್ತೂರಿ ಮಹಲ್' ಮೂಲಕ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದೆ. ಹೀಗಾಗಿ ಸಹಜವಾಗಿಯೇ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ. 'ಕಸ್ತೂರಿ ಮಹಲ್' ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ದಿನೇಶ್ ಬಾಬು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

Shanvi Srivastava Starrer Kasturi Mahal Releasing On May 13th

ಶ್ರೀಭವಾನಿ ಆರ್ಟ್ಸ್ ಬ್ಯಾನರ್ ನಡಿ ರವೀಶ್ ಆರ್ ಸಿ ನಿರ್ಮಾಣ 'ಕಸ್ತೂರಿ ಮಹಲ್' ಸಿನಿಮಾದಲ್ಲಿ ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ವತ್ಸಲಾ ಮೋಹನ್, ರಂಗಾಯಣ ರಘು ಮತ್ತು ನೀನಾಸಂ ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುಮಿನೇನಿ ವಿಜಯ್ ಸಂಗೀತವಿರುವ ಸಿನಿಮಾಗೆ ಪಿಕೆಎಚ್ ದಾಸ್ ಛಾಯಾಗ್ರಹಣವಿದ್ದು,‌ ಮೇ 13ಕ್ಕೆ ಸಿನಿಮಾ ತೆರೆಗೆ ಬರ್ತಿದೆ.

More from Filmibeat

English summary
Shanvi Srivastava Starrer Kasturi Mahal Releasing On May 13th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X