RCB ಮೊದಲ ಪಂದ್ಯದ ದಿನವೇ 'ಅವತಾರ ಪುರುಷ 2' ರಿಲೀಸ್; ಫ್ಯಾನ್ ಸಿಂಪಲ್ ಸುನಿ ಹೇಳಿದ್ದಿಷ್ಟು!

2024 ಮಾರ್ಚ್ ತಿಂಗಳು ಸಿಕ್ಕಾಪಟ್ಟೆ ಚಟುವಟಿಗಳು ನಡೆಯುತ್ತಿವೆ. ಒಂದ್ಕಡೆ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ. ಅದೇ ಇನ್ನೊಂದು ಕಡೆ ಬಹು ನಿರೀಕ್ಷಿತ ಇವೆಂಟ್ ಐಪಿಎಲ್ ಆರಂಭ ಆಗಲಿದೆ. ಮತ್ತೊಂದು ಕಡೆ ಲೋಕಸಭಾ ಚುನಾವಣೆಗೆ ತಯಾರಿಗಳು ನಡೆಯುತ್ತಿವೆ. ಹೀಗಿರುವಾಗ ಸಿನಿಮಾ ರಿಲೀಸ್ ಮಾಡುವುದಕ್ಕೆ ಹಿಂದೇಟು ಹಾಕುವವರೇ ಹೆಚ್ಚು.

ಇಂತಹ ಸಂದರ್ಭದಲ್ಲೂ ಕನ್ನಡದಲ್ಲಿ 'ಅವತಾರ ಪುರುಷ 2' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅದರೂ ಐಪಿಎಲ್ ಆರಂಭ ಆಗುವ ದಿನವೇ ಸಿನಿಮಾ ಶುರುವಾಗಲಿದೆ. ವಿಶೇಷ ಅಂದರೆ, ಐಪಿಎಲ್ 2024 ಮೊದಲ ಪಂದ್ಯವೇ ಹೈ ವೋಲ್ಟೇಜ್ ಮ್ಯಾಚ್ ಇದೆ. ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.

Sharan Ashika Ranganath movie Avatara Purusha 2 release on RCB first match

ಆರ್‌ಸಿಬಿ Vs ಚೆನ್ನೈ (RCB Vs Chennai) ಮ್ಯಾಚ್ ಅಂದ್ರೆ ಕ್ರಿಕೆಟ್ ಪ್ರಿಯರು ಒಂದು ಗಂಟೆ ಮುಂಚೆನೇ ಟಿವಿ ಮುಂದು ಕೂತು ಬಿಡ್ತಾರೆ. ಹೀಗಿದ್ಮೇಲೆ ಇನ್ನು ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಕನಸಿನ ಮಾತು. ಹೀಗಿದ್ದರೂ, ಧೈರ್ಯ ಮಾಡಿ ಅದೇ ದಿನ 'ಅವತಾರ ಪುರುಷ 2' ರಿಲೀಸ್ ಮಾಡುವುದಕ್ಕೆ ಏನು ಕಾರಣ? ಇದರ ಹಿಂದಿರೋ ಸ್ಟ್ರಾಟಜಿ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಅವತಾರ ಪುರುಷ 2' ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ. ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಸೇರಿದಂತೆ ಜನಪ್ರಿಯ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಮಂತ್ರ, ತಂತ್ರ ಹಿನ್ನೆಲೆಯಲ್ಲಿ ಸಾಗುವ ಕಥೆಯಾಗಿದ್ದರಿಂದ ಸಿನಿಮಾ ಮೇಲೆ ನಿರೀಕ್ಷೆಯಿದೆ. ಹೀಗಾಗಿ ಐಪಿಎಲ್ ವೇಳೆ ರಿಲೀಸ್ ಮಾಡಿದರೆ, ಸಿನಿಮಾದ ಕಲೆಕ್ಷನ್‌ಗೆ ಪೆಟ್ಟು ಬೀಳುವುದಿಲ್ಲವೇ? ಅನ್ನೋ ಪ್ರಶ್ನೆಗೆ ನಿರ್ದೇಶಕ ಸಿಂಪಲ್ ಸುನಿ ನಿರ್ಮಾಪಕ ಸ್ಟ್ರಾಟಜಿ ಏನು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ಪರೀಕ್ಷೆಗಳೆಲ್ಲ ಮುಗಿಸಿಕೊಂಡಿರುತ್ತಾರೆ. ಹಾಗೆ ಎಲ್ಲವನ್ನೂ ಫೈನಲ್ ಮಾಡಿಕೊಂಡು ಮಾರ್ಚ್ 22ಕ್ಕೆ ಅಂತ ಪುಷ್ಕರ್ ಸರ್ ಫೈನಲ್ ಮಾಡಿದ್ರು. ಅದಕ್ಕೆ ನಾವು ಸಹಮತ ನೀಡಿದ್ದೇವೆ. ಅವತಾರ ಪುರುಷ ಪಾರ್ಟ್ 1 ಅನ್ನು ಬೇರೆ ಸಮಯದಲ್ಲಿ ನೋಡಿದ್ದಾರೆ. ಮೊದಲನೇ ದಿನ ಥಿಯೇಟರ್‌ನಲ್ಲಿ ನೋಡಿದವರು, ಕೊನೆ ದಿನ ನೋಡಿದವರು, ಓಟಿಟಿಯಲ್ಲಿ, ಟಿವಿಯಲ್ಲಿ ಎಲ್ಲಾ ಕಡೆ ನೋಡಿದವರೂ ಪಾರ್ಟ್ 2 ನೋಡುತ್ತಾರೆ." ಎಂದು ಸಿಂಪಲ್ ಸುನಿ ಹೇಳಿದ್ದಾರೆ.

Sharan Ashika Ranganath movie Avatara Purusha 2 release on RCB first match

ಐಪಿಎಲ್ ಪಂದ್ಯಗಳು ನಡೆಯುವಾಗ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದು ಅನುಮಾನ. ಅದರಲ್ಲೂ ಆರ್‌ಸಿಬಿ ಪಂದ್ಯ ನಡೆಯುವಾಗ ಇದು ಅಸಾಧ್ಯ. ಅಷ್ಟೇ ಯಾಕೆ 'ಅವತಾರ ಪುರುಷ 2' ಸಿನಿಮಾದ ನಿರ್ದೇಶಕ ಸಿಂಪಲ್ ಸುನಿ ಕೂಡ ಆರ್‌ಸಿಬಿ ಫ್ಯಾನ್. ಈಗಾಗಲೇ ಚೆನ್ನೈಗೆ ಮ್ಯಾಚ್ ನೋಡುವುದಕ್ಕೆ ಹೋಗುವುದಾಗಿ ಹೇಳಿದ್ದಾರೆ. ಹೀಗಿರುವಾಗ ಮೊದಲ ದಿನವೇ ಸಿನಿಮಾಗೆ ಹೊಡೆತ ಕೊಡುವುದಿಲ್ಲವೇ?

"ಆರ್‌ಸಿಬಿ ಯಾವಾಗ ಗೆಲ್ಲುತ್ತೋ ಆಗ ಬರಬೇಕಿಲ್ಲ. ಆರ್‌ಸಿಬಿ ಯಾವಾಗ ಸೋಲುತ್ತೋ ಅವಾಗ ಬನ್ನಿ. ನಾವು ಅಲ್ಲಿಗೆ ಮ್ಯಾಚ್ ಮಾಡುತ್ತೇವೆ. ಆರ್‌ಸಿಬಿ ಮ್ಯಾಚ್ ಶುರುವಾಗೋದು ಮತ್ತು ನಮ್ಮ ಸಿನಿಮಾ ರಿಲೀಸ್ ಆಗೋದು ಎರಡೂ ಮಾರ್ಚ್ 22ಕ್ಕೇನೆ. ಪುಷ್ಕರ್ ಸರ್ ಬೇಜಾರು ಆಗುತ್ತಾರೆ. ನಾನು ಈಗಾಗಲೇ ಚೆನ್ನೈಗೆ ಟಿಕೆಟ್ ಬುಕ್ ಮಾಡಿದ್ದೇನೆ." ಎಂದು ಸುನಿ ಹೇಳಿದ್ದಾರೆ.

ಇದರೊಂದಿಗೆ ಶುಕ್ರವಾರ ಬೆಳಗ್ಗೆ, ಶನಿವಾರ, ಭಾನುವಾರ ಬಂದು ಸಿನಿಮಾ ನೋಡಿ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. "ಶುಕ್ರವಾರ ಮಾರ್ನಿಂಗ್ ಸಿನಿಮಾ ನೋಡಿ. ಸಂಜೆ ಮ್ಯಾಚ್ ನೋಡಿ. ಶನಿವಾರ ಥಿಯೇಟರ್‌ಗೆ ಬನ್ನಿ. ಭಾನುವಾರ ಬನ್ನಿ. ಐಪಿಎಲ್‌ಗೆ ಸಪೋರ್ಟ್ ಮಾಡುವವರು ದಯವಿಟ್ಟು ಸಿನಿಮಾಗೂ ಸಪೋರ್ಟ್ ಮಾಡಿ." ಎಂದು ಸಿಂಪಲ್ ಸುನಿ ಸಿನಿಮಾ ಪ್ರೇಮಿಗಳಿಗೆ ಕರೆ ನೀಡಿದ್ದಾರೆ.

More from Filmibeat

English summary
Sharan Ashika Ranganath movie Avatara Purusha 2 directed by Simple Suni releasing on March 22nd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X