ಮತ್ತೆ ಅಧ್ಯಕ್ಷ - ಉಪಾಧ್ಯಕ್ಷರ ಸಮಾಗಮ:ಹಾರಾರ್ - ಕಾಮಿಡಿ 'ಛೂ ಮಂತರ್' ರಿಲೀಸ್‌ಗೆ ರೆಡಿ!
ಸ್ಯಾಂಡಲ್‌ವುಡ್‌ನ ಅಧ್ಯಕ್ಷ ಶರಣ್. ಉಪಾಧ್ಯಕ್ಷ ಚಿಕ್ಕಣ್ಣ. ಇಬ್ಬರು ಹಾಸ್ಯ ದಿಗ್ಗಜರು ಒಟ್ಟಿಗೆ ಸೇರದೆ ಅದೆಷ್ಟೋ ದಿನಗಳಾಗಿತ್ತು. ಆದ್ರೀಗ ಮತ್ತೀಗ ಅದೇ ಜೋಡಿ ತೆರೆಮೇಲೆ ಕಾಣಿಸಿಕೊಳ್ಳಲಿದೆ. ಅದುವೇ 'ಛೂ ಮಂತರ್'.
'ಛೂ ಮಂತರ್' ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಚಿಕ್ಕಣ್ಣ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಇಬ್ಬರು ದಿಗ್ಗಜರನ್ನು ಸಿಲ್ವರ್ ಸ್ಕ್ರೀನ್ ಮೇಲೆ ನೋಡುವುದಕ್ಕೆ ಸಿನಿಪ್ರಿಯರು ಕಾದು ಕೂತಿದ್ದಾರೆ.
ಶರಣ್ ಹಾಗೂ ಚಿಕ್ಕಣ್ಣ ಜೊತೆ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅದಿತಿ ಪ್ರಭುದೇವ, ನಟಿ ಮೇಘನಾ ಗಾಂವ್ಕರ್ ಹಾಗೂ ಪ್ರಭು ಮುಂಡ್ಕರ್ 'ಛೂ ಮಂತರ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಚಿತ್ರ ಎಂದ್ಮೇಲೆ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡುವುದಂತು ಖಚಿತ. ಅಂದ್ಹಾಗೆ 'ಕರ್ವ' ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಸಿನಿಮಾವನ್ನು ನಿರ್ಮಿಸಿದ್ದು, ಇದು ಈ ಸಂಸ್ಥೆಯ ಐದನೇ ಚಿತ್ರ.
'ಛೂ ಮಂತರ್' ಟೈಟಲ್ ಹೇಳುವಂತೆ ಹಾರರ್ ಕಾಮಿಡಿ ಕಥಾಹಂದರ ಹೊಂದಿರೋ ಸಿನಿಮಾ. ಈ ಸಿನಿಮಾದ ಟಾಕಿ ಪೋಷನ್ ಈಗಾಗಲೇ ಮುಗಿದಿದೆ. ಬೆಂಗಳೂರು, ಮೈಸೂರು, ಉತ್ತರಕಾಂಡ ಹಾಗೂ ಲಂಡನ್‌ನಲ್ಲಿ ಶೂಟಿಂಗ್ ನಡೆದಿದ್ದು, ಶೀಘ್ರದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಅನೂಪ್ ಕಟ್ಟುಕರನ್ ಅನ್ನೋ ಛಾಯಾಗ್ರಾಹಕ ಇದೇ ಮೊದಲ ಬಾರಿಗೆ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆಜಿಎಫ್ ಖ್ಯಾತಿಯ ಶಿವಕುಮಾರ್ ಹಾಗೂ ಮೋಹನ್ ಬಿ ಕೆರೆ ಆರ್ಟ್ ಡೈರೆಕ್ಷನ್ ಇದೆ.


Click it and Unblock the Notifications











