ನಂ.1 ಟ್ರೆಂಡಿಂಗ್‌ನಲ್ಲಿ 'ರಾಜ್ ವಿಷ್ಣು': ಶರಣ್-ಚಿಕ್ಕಣ್ಣನಿಗೆ ಪ್ರೇಕ್ಷಕರು ಫಿದಾ!

By Suneel

ತಮಿಳಿನ 'ರಜನಿ ಮುರುಘನ್' ಸಿನಿಮಾದ ಕನ್ನಡ ರಿಮೇಕ್ ಚಿತ್ರ 'ರಾಜ್ ವಿಷ್ಣು' ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಗಳಾದ ಶರಣ್ ಮತ್ತು ಚಿಕ್ಕಣ್ಣ ಇಬ್ಬರೂ ನಟಿಸಿರುವ ಈ ಚಿತ್ರದ ಟ್ರೈಲರ್ ಈಗ ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ.['ರಾಜ್ ವಿಷ್ಣು' ಆಗಿ ಬಂದಿದ್ದಾರೆ ಅಧ್ಯಕ್ಷ-ಉಪಾದ್ಯಕ್ಷರು!]

ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಮನರಂಜನೆ ಚಿತ್ರಗಳನ್ನು ನೀಡುತ್ತಿರುವ ನಟ ಶರಣ್ 'ನಟರಾಜ ಸರ್ವೀಸ್' ನಂತರ ಅಭಿನಯಿಸಿರುವ ಚಿತ್ರ 'ರಾಜ್ ವಿಷ್ಣು'. ಈ ಚಿತ್ರದಲ್ಲಿ ಡಾ.ರಾಜ್ ಅಭಿಮಾನಿಯಾಗಿ ಶರಣ್ ಮತ್ತು ವಿಷ್ಣುವರ್ಧನ್ ಅಭಿಮಾನಿಯಾಗಿ ಚಿಕ್ಕಣ್ಣ ಕಾಣಿಸಿಕೊಳ್ಳುತ್ತಿದ್ದು, ಶರಣ್ ರವರಿಗೆ ಮತ್ತೆ ಬಿಗ್ ಬ್ರೇಕ್ ಕೊಡುವ ಎಲ್ಲಾ ಭರವಸೆಯನ್ನು ಟ್ರೈಲರ್ ನೀಡಿದೆ.

Sharan, Chikkanna Starrer 'Raj Vishnu' Trailer No 1 trending in Youtube

'ರಾಜ್ ವಿಷ್ಣು' ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಆದ ಮೂರೇ ದಿನಕ್ಕೆ 3.8 ಲಕ್ಷ ವೀಕ್ಷಣೆ ಪಡೆದಿದ್ದು, ಇಂದು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ಒಂದನೇ ಸ್ಥಾನದಲ್ಲಿದೆ. ಟ್ರೈಲರ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು 'ರಾಜ್ ವಿಷ್ಣು' ಎಂಬ ಟೈಟಲ್ ಮತ್ತು 'ಅಧ್ಯಕ್ಷ' ಚಿತ್ರದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾಣಿಸಿಕೊಂಡಿದ್ದ ಶರಣ್-ಚಿಕ್ಕಣ್ಣ ಮತ್ತೆ ತೆರೆಮೇಲೆ ಒಟ್ಟಿಗೆ ಬರುತ್ತಿರುವುದು ಕಾರಣವಾಗಿದೆ.

ಈ ಹಿಂದೆ 'ಗಜ', 'ರಾಮ್', 'ಹುಡುಗರು', 'ಪವರ್***' ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಕೆ.ಮಾದೇಶ್ ರವರು 'ರಾಜ್ ವಿಷ್ಣು'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ವೈಭವಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ.

Sharan, Chikkanna Starrer 'Raj Vishnu' Trailer No 1 trending in Youtube

ರಾಮು ಫಿಲಂ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಇದೇ ತಿಂಗಳ 23ಕ್ಕೆ ಬಿಡುಗಡೆ ಆಗಲಿದೆ.

ನಂಬರ್ ಒನ್ ಟ್ರೆಂಡಿಂಗ್ ನಲ್ಲಿರುವ 'ರಾಜ್ ವಿಷ್ಣು' ಟ್ರೈಲರ್ ನೋಡಲು ಕ್ಲಿಕ್ ಮಾಡಿ

More from Filmibeat

English summary
Kannada Actors Sharan and Chikkanna starrer Kannada Movie 'Raj Vishnu' trailer is now in number one trending in YouTube. This Movie is directed by K.Madesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X