»   » ಶಿವಣ್ಣನ ಚಿತ್ರದಲ್ಲಿ ಸೊಂಟ ಬಳುಕಿಸಿದ ಶರ್ಮಿಳಾ ಮಾಂಡ್ರೆ.!

ಶಿವಣ್ಣನ ಚಿತ್ರದಲ್ಲಿ ಸೊಂಟ ಬಳುಕಿಸಿದ ಶರ್ಮಿಳಾ ಮಾಂಡ್ರೆ.!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿರುವ ವಿಚಾರ. ಆದ್ರೀಗ, ಲೇಟೆಸ್ಟ್ ವಿಷ್ಯ ಏನಪ್ಪಾ ಅಂದ್ರೆ, ಶರ್ಮಿಳಾ ಈ ಚಿತ್ರದಲ್ಲಿ ನಟನೆ ಮಾತ್ರವಲ್ಲ ಒಂದು ಸ್ಪೆಷಲ್ ನಂಬರಿಗೆ ಸೊಂಟ ಕೂಡ ಬಳುಕಿಸಿದ್ದಾರೆ.

ಅಂದ್ಹಾಗೆ, ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಶರ್ಮಿಳಾ ತನಿಖಾ ಪತ್ರಕರ್ತೆಯಾಗಿ ಬಣ್ಣ ಹಚ್ಚಿದ್ದಾರೆ. ಪತ್ರಕರ್ತೆಗೂ ಈ ಬೆಲ್ಲಿ ಡ್ಯಾನ್ಸ್ ಗೂ ಏನ್ ಸಬಂಧ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ. ಆದ್ರೆ, ಈ ಚಿತ್ರಕ್ಕೂ ಹಾಡಿಗೂ ಸಂಬಂಧವಿದೆ ಎನ್ನುವುದು ಮಾತ್ರ ಇಂಟ್ರೆಸ್ಟಿಂಗ್.['ನೀರ್ ದೋಸೆ' ನಿರ್ದೇಶಕರಿಗಾಗಿ 120 ಕೆ.ಜಿ ತೂಗಲು ಶರ್ಮಿಳಾ ರೆಡಿ]

Sharmiela Mandre Shakes Leg In Shiva Rajkumars Movie

ಇನ್ನು ಈ ಹಾಡು 'ಏಜೆಂಟ್ ವಿನೋದ' ಚಿತ್ರದಲ್ಲಿ ಕರೀನಾ ಕಪೂರ್ ಅವರ ಹಾಡನ್ನ ನೆನಪಿಸಲಿದೆಯಂತೆ. ಈ ಹಾಡಿಗಾಗಿ ಶರ್ಮಿಳಾ ಮಾಂಡ್ರೆ ಅವರ ಬೆಲ್ಲಿ ಡ್ಯಾನ್ಸ್ ತರಬೇತಿ ಕೂಡ ಪಡೆದಿದ್ದರಂತೆ.

Sharmiela Mandre Shakes Leg In Shiva Rajkumars Movie

'ರೋಸ್' ಖ್ಯಾತಿಯ ಸಹನಾ ಮೂರ್ತಿ 'ಲೀಡರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಸೆಂಚುರಿ ಸ್ಟಾರ್ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿಜಯ ರಾಘವೇಂದ್ರ, ಪ್ರಣಿತಾ, ದೀಪಿಕಾ ಕಾಮಯ್ಯ, ಗುರು ಜಗ್ಗೇಶ್, ಆಶಿಕಾ, ಶರ್ಮಿಳಾ, ಮಾಂಡ್ರೆ, ಶ್ರೀನಗರ ಕಿಟ್ಟಿ ಮಗಳು ಮುಂತಾದ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ವೀರಸಮರ್ಥ್ ಸಂಗೀತ ಸಂಯೋಜನೆ ಇದ್ದು, ಗುರುಪ್ರಶಾಂತ್ ರೈ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.[ಶಿವಣ್ಣನ 'ಲೀಡರ್' ಚಿತ್ರಕ್ಕೆ ಮಗದೊಂದು ಬಾರಿ ಶೀರ್ಷಿಕೆ ಕಂಟಕ.!]

English summary
Sharmiela Mandre Recently Shoot for a sexy belly dance number in Shiva Rajkumars Mass Leader.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada