ಶರ್ಮಿಳಾ ಮಾಂಡ್ರೆ ಕಾರು ಅಪಘಾತ: ಪೊಲೀಸರಿಗೆ ಕಾರಣ ನೀಡಿದ ನಟಿ

ನಟಿ ಶರ್ಮಿಳಾ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಐಶಾರಾಮಿ ಕಾರು ಶನಿವಾರ ನಸುಕಿನ ವೇಳೆ ವಸಂತ್‌ ನಗರ ಫ್ಲೈಓವರ್ ಬಳಿ ಅಪಘಾತಾಗಿದೆ.

ಲಾಕ್‌ಡೌನ್‌ ಸಮಯದಲ್ಲಿ ಅವರು ಹೊರಗೆ ಬಂದಿದ್ದು ಏಕೆ? ಅವರ ಬಳಿ ಪೊಲೀಸರು ಅವಶ್ಯಕ ವಸ್ತು ಸರಬರಾಜುದಾರರಿಗೆ ನೀಡುವ ಪಾಸ್ ಬಂದದ್ದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಂದು ನಟಿ ಶರ್ಮಿಳಾ ಮಾಂಡ್ರೆ ಅವರು ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದು, ಅಪಘಾತ ಆದದ್ದು ಹೇಗೆ? ತಾವೇಕೆ ಆ ಸರಿ ಹೊತ್ತಲ್ಲಿ ಹೊರಗೆ ಹೋಗಿದ್ದೆ, ಗೆಳೆಯರೇಕೆ ತಮ್ಮ ಜೊತೆಯಲ್ಲಿದ್ದರು ಎಂಬೆಲ್ಲದಕ್ಕೂ ಉತ್ತರ ನೀಡಿದ್ದಾರೆ. ಶರ್ಮಿಳಾ ನೀಡಿರುವ ಉತ್ತರಗಳು ನಿಜವೇ ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ.

ಪಾರ್ಟಿಮಾಡಲು ಹೋಗಿರಲಿಲ್ಲ

ಪಾರ್ಟಿಮಾಡಲು ಹೋಗಿರಲಿಲ್ಲ

''ನಾನು ಪಾರ್ಟಿ ಮಾಡಲು ಹೊರಗೆ ಹೋಗಿರಲಿಲ್ಲ, ನನಗೆ ಹೊಟ್ಟೆ ನೋವುತ್ತಿತ್ತು, ಔಷಧ ತರಲೆಂದು ಹೊರಗೆ ಹೋಗಿದ್ದೆ'' ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.

ಪಾಸ್ ಹೊಂದಿದ್ದವರನ್ನು ಸಹಾಯಕ್ಕೆ ಕರೆದೆ: ಶರ್ಮಿಳಾ

ಪಾಸ್ ಹೊಂದಿದ್ದವರನ್ನು ಸಹಾಯಕ್ಕೆ ಕರೆದೆ: ಶರ್ಮಿಳಾ

'ನನ್ನ ಬಳಿ ಪಾಸ್ ಇರಲಿಲ್ಲ, ಹಾಗಾಗಿ ಪಾಸ್ ಹೊಂದಿದ್ದ ಥಾಮಸ್ ಮತ್ತು ಲೋಕೇಶ್ ಸಹಾಯ ಕೇಳಿದೆ ಹಾಗಾಗಿ ಅವರು ಬಂದರು, ನಾನು ಹಿಂದಿನ ಸೀಟಿನಲ್ಲಿ ಇದ್ದೆ, ಕಾರನ್ನು ಸ್ನೇಹಿತ ಥಾಮಸ್ ಓಡಿಸುತ್ತಿದ್ದ'' ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.

ಶರ್ಮಿಳಾ ಕುತ್ತಿಗೆಗೆ ಪೆಟ್ಟಾಗಿದೆ

ಶರ್ಮಿಳಾ ಕುತ್ತಿಗೆಗೆ ಪೆಟ್ಟಾಗಿದೆ

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಯಿತು. ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ, ಗೆಳೆಯರಿಗೂ ಹಲವು ಗಾಯಗಳಾಗಿವೆ ಎಂದು ಶರ್ಮಿಳಾ ಮಾಂಡ್ರೆ ಪೊಲೀಸರಿಗೆ ಹೇಳಿದ್ದಾರೆ.

ಅಪಘಾತವಾದಾಗ ಕಾರಿನಲ್ಲಿ ಯಾರ್ಯಾರಿದ್ದರು?

ಅಪಘಾತವಾದಾಗ ಕಾರಿನಲ್ಲಿ ಯಾರ್ಯಾರಿದ್ದರು?

ಅಪಘಾತಕ್ಕೆ ಈಡಾಗಿರುವ ಕಾರು ಥಾಮಸ್ ಎಂಬುವರಿಗೆ ಸೇರಿದೆ. ಅಪಘಾತವಾದಾಗ ಕಾರಿನಲ್ಲಿ ಶರ್ಮಿಳಾ ಮಾಂಡ್ರೆ, ಡಾನ್ ಥಾಮಸ್, ಲೋಕೇಶ್, ಶಿಫಾ ಜೋಹರ್ ಎಂಬುವರು ಇದ್ದರು ಎಂದು ಪೊಲೀಸರಿಗೆ ಹೇಳಿಕೆ ನೀಡಲಾಗಿದೆ.

More from Filmibeat

English summary
Actress Sharmila Mandre appeared in front of police and gave statement regarding accident happened Saturday early morning.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X