ಕೃಷ್ಣನ ತರಲೆ-ತಮಾಷೆಗೆ 'ಕೌಸಲ್ಯಾ ಸುಪ್ರಜಾ ರಾಮ' ಎಂದ ಶಶಾಂಕ್!

'ಲವ್ ಮಾಕ್ಟೇಲ್' ಹಿಟ್ ಆಗಿದ್ದೇ ಆಗಿದ್ದು, ಡಾರ್ಲಿಂಗ್ ಕೃಷ್ಣ ಒಂದರ ಹಿಂದೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಲೇ ಇದ್ದಾರೆ. ಅದರಲ್ಲೂ 'ಲವ್ ಮಾಕ್ಟೇಲ್ 2' ಹಿಟ್ ಆದ್ಮೇಲೆ ಕೃಷ್ಣ ಕರಿಯರ್ ಮತ್ತಷ್ಟು ಎತ್ತರಕ್ಕೆ ಹೋಗಿದೆ.

ಕೆಲವು ದಿನಗಳ ಹಿಂದಷ್ಟೆ ಡಾರ್ಲಿಂಗ್ ಕೃಷ್ಣ ಅಭಿನಯದ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಬಿಗ್ ಸ್ಕ್ರೀನ್ ಮೇಲೆ ಕೃಷ್ಣ ಕಥೆಗಳನ್ನೇ ಹೇಳಿ ರಂಜಿಸಿದ್ದ ಶಶಾಂಕ್ ಈ ಸಿನಿಮಾದ ನಿರ್ದೇಶಕರು. ಈಗಾಗಲೇ ಸಿನಿಮಾ ಮುಹೂರ್ತನೂ ಆಗಿ, ಸೆಟ್ಟೇರಿದೆ. ಆದರೆ ಟೈಟಲ್ ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಈಗ ಅದೂ ರಿವೀಲ್ ಆಗಿದೆ.

ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ ಟೈಟಲ್ ಏನು?

ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ ಟೈಟಲ್ ಏನು?

ಕಳೆದ ಕೆಲವು ದಿನಗಳಿಂದ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಷನ್‌ ಸಿನಿಮಾ ಟೈಟಲ್‌ಗಾಗಿ ಕಾದು ಕೂತಿತ್ತು ಚಿತ್ರರಂಗ. ಟೈಟಲ್ ಏನಿರಬಹುದು? ಇಬ್ಬರೂ ಸೇರಿಕೊಂಡು ಎಂಥಾ ಸಿನಿಮಾ ಮಾಡಬಹುದು ಅನ್ನೋ ಕುತೂಹಲಕ್ಕೀಗ ತೆರೆಬಿದ್ದಿದೆ. ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಟೈಟಲ್‌ ರಿವೀಲ್ ಆಗಿದೆ. ಇಂದು (ಅಕ್ಟೋಬರ್ 16) ಶಶಾಂಕ್ ಹಾಗೂ ಕೃಷ್ಣ ಇಬ್ಬರೂ ಸೇರಿ ವಿಶಿಷ್ಠವಾಗಿ ಟೈಟಲ್ ರಿವೀಲ್ ಮಾಡಿದ್ದಾರೆ. ಅಂದ್ಹಾಗೆ ಇವರಿಬ್ಬರ ಮೊದಲ ಕಾಂಬಿನೇಷನ್ ಸಿನಿಮಾದ ಟೈಟಲ್ 'ಕೌಸಲ್ಯಾ ಸುಪ್ರಜಾ ರಾಮ'.

ಕೃಷ್ಣಗೆ ಇಬ್ಬರು ಹೀರೊಯಿನ್ ಸಿಗ್ತಾರಾ?

ಕೃಷ್ಣಗೆ ಇಬ್ಬರು ಹೀರೊಯಿನ್ ಸಿಗ್ತಾರಾ?

ಟೈಟಲ್‌ ನೋಡಿ ಕೃಷ್ಣ ಬಯಸಿದ್ದು ಒಂದು. ಆದರೆ, ಶಶಾಂಕ್ ಹೇಳಿದ್ದು ಇನ್ನೊಂದು. ಇದೊಂಥರ ಹೇಳಿನೂ ಹೇಳದೆ ಇರೋ ಸನ್ನಿವೇಶ. ಟೈಟಲ್ ನೋಡಿ ಡಾರ್ಲಿಂಗ್ ಕೃಷ್ಣ ಇಬ್ಬರು ನಾಯಕಿಯರು ಇರುತ್ತಾರಾ? ಅಂದ್ರೆ, ಶಶಾಂಕ್ ಟೈಟಲ್‌ನ ಅಸಲಿ ಅರ್ಥ ಹೇಳಿ ಸುಮ್ಮನಾಗಿದ್ದಾರೆ. ಟೈಟಲ್ ಅನೌನ್ಸ್ ಮಾಡುವುದಕ್ಕೆ ತಮಾಷೆಯದ್ದೊಂದು ವಿಡಿಯೋ ಮಾಡಿರೋ ತಂಡ ಸಿನಿಮಾ ಹೇಗಿರುತ್ತೆ ಅನ್ನೋ ಸುಳಿವು ಕೊಟ್ಟಿದ್ದಾರೆ. ಅಸಲಿಗೆ 'ಕೌಸಲ್ಯಾ ಸುಪ್ರಜಾ ರಾಮ' ಸ್ಟೋರಿಯಲ್ಲಿ ಸ್ವಲ್ಪ ತರ್ಲೆ, ಸ್ವಲ್ಪ ತಮಾಷೆ ಇರುತ್ತೆ ಅನ್ನೋದು ಕನ್ಫರ್ಮ್ ಆಗಿದೆ. ಆದರೆ, ಇಬ್ಬರು ನಾಯಕಿಯರು ಇರುತ್ತಾರಾ? ಅನ್ನೋದು ಮಾತ್ರ ಇನ್ನೂ ಸಸ್ಪೆನ್ಸ್.

ಬಿಸಿ ಪಾಟೀಲ್-ಶಶಾಂಕ್ ಕಾಂಬಿನೇಷನ್

ಬಿಸಿ ಪಾಟೀಲ್-ಶಶಾಂಕ್ ಕಾಂಬಿನೇಷನ್

ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್‌ನನ್ನು ಬಿಸಿ ಪಾಟೀಲ್ ಹಾಗೂ ಶಶಾಂಕ್ ಇಬ್ಬರೂ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಕೃಷಿ ಸಚಿವ ಬಿಸಿ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹಾಗೂ ಶಶಾಂಕ್ ಸಿನಿಮಾಸ್ ಜಂಟಿಯಾಗಿ ನಿರ್ಮಾಣ ಮಾಡಲಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ 'ಲವ್ 360' ಮೂಲಕ ಹೊಸಬರ ಸಿನಿಮಾ ಮಾಡಿ ಗೆದ್ದಿರೋ ನಿರ್ದೇಶಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಕೃಷ್ಣ ಸಿಕ್ಕಾಪಟ್ಟೆ ಬ್ಯುಸಿ

ಕೃಷ್ಣ ಸಿಕ್ಕಾಪಟ್ಟೆ ಬ್ಯುಸಿ

ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಆಗಿತ್ತು. ಈಗ 'ದಿಲ್ ಪಸಂದ್' ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇದರೊಂದಿಗೆ 'ಶುಗರ್ ಪ್ಯಾಕ್ಟರಿ', 'ಮಿಸ್ಟರ್ ಬ್ಯಾಚುಲರ್', 'ಲವ್ ಮಿ ಔರ್ ಹೇಟ್ ಮಿ' ನಿರ್ಮಾಣದ ಹಂತದಲ್ಲಿದೆ. ಈಗ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಕೂಡ ಶುರುವಾಗಿದೆ. ಮುಂದಿನ ವರ್ಷ ಡಾರ್ಲಿಂಗ್ ಕೃಷ್ಣ ಒಪ್ಪಿಕೊಂಡ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಬಹುದು.

More from Filmibeat

English summary
Shashank And Darling Krishna Combination Movie Title Kausalya Supraja Rama, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X