'ಲವ್ 360' ಟೈಟಲ್ ಇಡೋಕೆ ಪ್ರೇರಣೆ ಒಬ್ಬ ಕ್ರಿಕೆಟರ್: ರಿಲೀಸ್‌ಗೂ ಮುನ್ನವೇ ಪ್ರೀಮಿಯರ್ ಫುಲ್!

ನಾಳೆ (ಆಗಸ್ಟ್ 19) ಸ್ಯಾಂಡಲ್‌ವುಡ್‌ಗೆ ಹೊಸ ಹೀರೊ ಪರಿಚಯ ಆಗುತ್ತಿದ್ದಾರೆ. ವಿಶೇಷ ಅಂದರೆ, ಈ ಹೀರೊ ಪರಿಚಯ ಮಾಡಿಸುತ್ತಿರೋದು ನಿರ್ದೇಶಕ ಶಶಾಂಕ್. ಈಗಾಗಲೇ 'ಮೊಗ್ಗಿನ ಮನಸು',' ಕೃಷ್ಣನ್ ಲವ್ ಸ್ಟೋರಿ', ಕೃಷ್ಣ ಲೀಲಾದಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ಶಶಾಂತ್ ಹೊಸ ಹೀರೊನಾ ಇಂಟ್ರುಡ್ಯೂಸ್ ಮಾಡುತ್ತಿದ್ದಾರೆ.

2022ರಲ್ಲಿ ಸ್ಯಾಂಡಲ್‌ವುಡ್ ಯಶಸ್ಸಿನ ತುತ್ತತುದಿಯಲ್ಲಿದೆ. ದೊಡ್ಡ ದೊಡ್ಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಎದ್ದಿವೆ. ಈ ಮಧ್ಯೆ ಹೊಸಬರ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಅದುವೇ 'ಲವ್ 360'. ಶಶಾಂಕ್ ತಾವೇ ನಿರ್ಮಿಸಿ, ನಿರ್ದೇಶಿಸಿರುವ ಈ ಸಿನಿಮಾ ಟ್ರೈಲರ್ ಹಾಗೂ ಹಾಡುಗಳಿಂದ ಅಂತೂ ಸದ್ದು ಮಾಡಿದೆ. ಹೀಗಾಗಿ 'ಲವ್ 360' ಸಿನಿಮಾದ ಬಾಕ್ಸಾಫೀಸ್‌ ರಿಸಲ್ಟ್‌ಗಾಗಿ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಬಿಡುಗಡೆಗೆ ಇನ್ನೊಂದು ದಿನ ಇದೆ ಅನ್ನುವಾಗಲೇ 'ಲವ್ 360' ಸಿನಿಮಾದ ಟೈಟಲ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಸಲಿಗೆ ನಿರ್ದೇಶಕ ಶಶಾಂಕ್‌ಗೆ ಈ ಟೈಟಲ್ ಸಿಕ್ಕಿದ್ದು ಒಬ್ಬ ಕ್ರಿಕೆಟ್ ಆಟಗಾರ ಆಟದಿಂದ ಅನ್ನೋದು ವಿಶೇಷ. ಅಸಲಿಗೆ ಆಟಗಾರ ಯಾರು? ಸಿನಿಮಾಗೆ ರೆಸ್ಪಾನ್ಸ್ ಹೇಗಿದೆ? ಅನ್ನೋದನ್ನು ನಿರ್ದೇಶಕ ಶಶಾಂಕ್ ಫಿಲ್ಮಿಬೀಟ್‌ ಜೊತೆ ಹಂಚಿಕೊಂಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ಶಶಾಂಕ್ ಸಿನಿಮಾ ಟೈಟಲ್‌ಗೆ ಎಬಿಡಿ ಪ್ರೇರಣೆ!

ಶಶಾಂಕ್ ಸಿನಿಮಾ ಟೈಟಲ್‌ಗೆ ಎಬಿಡಿ ಪ್ರೇರಣೆ!

'ಲವ್ 360' ಅನ್ನೋ ಒಂದು ಸಿನಿಮಾ ಬರ್ತಿದೆ ಅನ್ನೋದು ಗೊತ್ತಿತ್ತು. ಆ ಸಿನಿಮಾ ನಿರ್ದೇಶನ ಮಾಡಿದ್ದು ಶಶಾಂಕ್ ಅನ್ನೋದೂ ಗೊತ್ತಿತ್ತು. ಆದರೆ, ಲವ್ ಮುಂದೆ 360 ಯಾಕೆ ಬಂತು ಅನ್ನೋ ಬಗ್ಗೆ ಮಾತ್ರ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಇನ್ನೇನು ಬಿಡುಗಡೆ ಒಂದು ದಿನ ಇರುವಾಗಲೇ ಟೈಟಲ್ ಸೀಕ್ರೆಟ್ ರಿವೀಲ್ ಆಗಿದೆ. " ಕ್ರಿಕೆಟ್ ಲ್ಯಾಂಗ್ವೇಜ್‌ನಲ್ಲಿ ಎಬಿಡಿಯನ್ನು ಮಿಸ್ಟರ್ 360 ಅಂತಾನೇ ಕರೆಯುತ್ತಾರೆ. ಅವರು ಮೈದಾನಕ್ಕೆ ಇಳಿದರೆ ಎಲ್ಲಾ ಆಂಗಲ್‌ನಲ್ಲೂ ಬ್ಯಾಟ್ ಬೀಸುತ್ತಾರೆ. ಅದನ್ನು ನೋಡುವಾಗ ನನಗೆ ಟೈಟಲ್ ಸ್ಟ್ರೈಕ್ ಆಯ್ತು." ಎನ್ನುತ್ತಾರೆ ನಿರ್ದೇಶಕ ಶಶಾಂಕ್.

ಲವ್ 360ಗೂ ಸಿನಿಮಾಗೂ ಸಂಬಂಧ ಏನು?

ಲವ್ 360ಗೂ ಸಿನಿಮಾಗೂ ಸಂಬಂಧ ಏನು?

ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ ಆಟದ ಪ್ರೇರಣೆಯಿಂದ ಟೈಟಲ್ ಇಟ್ಟಿದ್ದೇನೋ ನಿಜ. ಆದರೆ, ಎಬಿಡಿಗೂ ಈ ಸಿನಿಮಾಗೂ ಏನು ಸಂಬಂಧ? ಅನ್ನೋ ಪ್ರಶ್ನೆ ಮೂಡುವುದಂತೂ ಸತ್ಯ. "ನಮ್ಮ ಹೀರೊ ಕೂಡ ಎಲ್ಲಾ ಆಂಗಲ್‌ನಲ್ಲೂ ಆ ಹುಡುಗಿಯನ್ನು ಲವ್ ಮಾಡುತ್ತಾನೆ. ಯಾವ ಆಂಗಲ್‌ನಿಂದ ನೋಡಿದರೂ ಅಲ್ಲಿ ಪ್ರೀತಿನೇ ಸಿಗೋದು. ಲವ್ 360 ಅಂದರೆ ಕಂಪ್ಲೀಟ್ ಲವರ್ ಅಂತ. ಅದಕ್ಕೆ ಈ ಟೈಟಲ್ ಇಟ್ಟಿದ್ದೇವೆ. ಯಾವುದೇ ಹುಡುಗಿಯಾದರೂ ನಾನು ಪ್ರೀತಿಸುವ ಹುಡುಗ ಈಗ ಇರಬೇಕು ಅಂತ ಅಂದ್ಕೊಳ್ತಾರೆ. " ಅಂತ ಸಮಜಾಯಿಷಿ ಕೊಡುತ್ತಾರೆ ಶಶಾಂಕ್.

 ಪೇಯ್ಡ್ ಪ್ರೀಮಿಯರ್ ಹೌಸ್‌ಫುಲ್

ಪೇಯ್ಡ್ ಪ್ರೀಮಿಯರ್ ಹೌಸ್‌ಫುಲ್

ಶಶಾಂಕ್ ನಿರ್ದೇಶನ 'ಲವ್ 360' ಸಿನಿಮಾ ರಿಲೀಸ್ ದಿನ ಹೇಗೆ ರೆಸ್ಪಾನ್ಸ್ ಸಿಗುತ್ತೋ ಗೊತ್ತಿಲ್ಲ. ಆದರೆ, ಬಿಡುಗಡೆಗೂ ಮುನ್ನವೇ ಪೇಯ್ಡ್ ಪ್ರೀಮಿಯರ್ ಶೋ ಇಡಲಾಗಿದೆ. ಹೊಸ ಹೀರೊ ಆಗಿದ್ದರಿಂದ ಆರಂಭದಲ್ಲಿ ಜಿಟಿ ಮಾಲ್ ಪಿವಿಆರ್‌ನಲ್ಲಿ ಒಂದು ಶೋ ಇಡಲಾಗಿತ್ತು. ಅದು ನಿನ್ನೆನೇ (ಆಗಸ್ಟ್ 18) ಹೌಸ್‌ಫುಲ್ ಆಗಿದೆ. ಇನ್ನು ಬಹು ಬೇಡಿಕೆಯ ಮೇರೆಗೆ ವೀರೇಶ್ ಸಿನಿಮಾದಲ್ಲಿ ಇನ್ನೊಂದು ಶೋ ಹಾಕಿದೆ ಚಿತ್ರತಂಡ. ಬುಕ್ ಮೈ ಶೋ ಮಾಹಿತಿ ಪ್ರಕಾರ ಆ ಶೋ ಕೂಡ ಬಹುತೇಕ ಪುಲ್ ಆಗಿದೆ.

ಹೊಸ ಹೀರೊ ಸಿನಿಮಾ ಶುಭ ಸೂಚನೆ

ಹೊಸ ಹೀರೊ ಸಿನಿಮಾ ಶುಭ ಸೂಚನೆ

ಹೊಸ ಹೀರೊಗೆ ಪೇಯ್ಡ್ ಪ್ರೀಮಿಯರ್ ಮಾಡಿದ ಉದಾಹರಣೆಗಳೇ ಇಲ್ಲ. ಬಹುಬೇಡಿಕೆ ಮೇರೆ ಒಂದು ಹಾಕಿದ್ದೆವು. ಅದೂ ಪುಲ್ ಆಯ್ತು. ಎರಡನೇ ಶೋ ಕೂಡ ಫುಲ್ ಆಗಿದೆ. ಹೀಗಾಗಿ ನಾಳೆ ( ಆಗಸ್ಟ್ 19) ರಿಲೀಸ್ ಆಗುತ್ತಿರುವ ಸಿನಿಮಾ ಕೂಡ ಸಖತ್ ರೆಸ್ಪಾನ್ಸ್ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ ಚಿತ್ರತಂಡವಿದೆ.

More from Filmibeat

English summary
Shashank Directed Love 360 Movie Title Is Inspired by AB De Villiers, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X