ಪಾಂಡ್ಯ ಬ್ರದರ್ಸ್‌ನಿಂದ ಯಶ್ ಭೇಟಿ.. ಸುದೀಪ್ ಮನೆಯಲ್ಲಿ ಶಿಖರ್ ಧವನ್: ಸ್ಯಾಂಡಲ್‌ವುಡ್‌ನಲ್ಲಿ ಏನಾಗ್ತಿದೆ?

ಹಿಂದಿನಿಂದಲೂ ಸಿನಿಮಾರಂಗಕ್ಕೂ ಕ್ರಿಕೆಟ್‌ಗೂ ಬಿಡಲಾರದ ನಂಟಿದೆ. ಸಿನಿಮಾ ಮಂದಿಯ ಕಾರ್ಯಕ್ರಮಕ್ಕೆ ಕ್ರಿಕೆಟಿಗರು ಬರೋದು, ಕ್ರಿಕೆಟಿಗರ ಕಾರ್ಯಕ್ರಮದಲ್ಲಿ ಸಿನಿಮಾ ಮಂದಿ ಕಾಣಿಸಿಕೊಳ್ಳುವುದು ನಡೆಯುತ್ತಲೇ ಇರುತ್ತೆ.

ಈ ಸಂಸ್ಕೃತಿ ಬಾಲಿವುಡ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಆದ್ರೀಗ ದಕ್ಷಿಣ ಭಾರತಕ್ಕೂ ವ್ಯಾಪಿಸಿದೆ. ಕಳೆದ ಕೆಲವು ದಿನಗಳಲ್ಲಿ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳನ್ನು ಕ್ರಿಕೆಟ್ ಜಗತ್ತಿನ ಸೂಪರ್‌ಸ್ಟಾರ್‌ಗಳು ಭೇಟಿ ಮಾಡುತ್ತಿದ್ದಾರೆ.

ಅದರಲ್ಲೂ ಸ್ಯಾಂಡಲ್‌ವುಡ್‌ನ ದಿಗ್ಗಜರ ಜೊತೆ ಸ್ಟಾರ್ ಕ್ರಿಕೆಟಿಗರು ಕಾಣಿಸುತ್ತಿರೋದು ಕುತೂಹಲ ಕೆರಳಿಸಿದೆ. ಯಶ್, ಸುದೀಪ್ ಜೊತೆ ಟೀಂ ಇಂಡಿಯಾ ಆಟಗಾರರು ಪರ್ಸನಲ್ ಆಗಿ ಭೇಟಿ ಮಾಡಿದ್ದಾರೆ. ಅಸಲಿಗೆ ಈ ಭೇಟಿಯ ಹಿನ್ನೆಲೆ ಏನು? ಅನ್ನೋ ಕುತೂಹಲ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಗಿದೆ.

ಕಿಚ್ಚನ ಮನೆಯಲ್ಲಿ ಶಿಖರ್ ಧವನ್

ಕಿಚ್ಚನ ಮನೆಯಲ್ಲಿ ಶಿಖರ್ ಧವನ್

ಕಿಚ್ಚ ಸುದೀಪ್‌ಗೆ ಕ್ರಿಕೆಟ್ ಅಂದ್ರೆ, ಬಲುಪ್ರೀತಿ. ಅದು ಇತ್ತೀಚೆಗೆ ಶುರುವಾಗಿದ್ದಲ್ಲ ಅನ್ನೋದು ಗೊತ್ತೇ ಇದೆ. ಭಾರತೀಯ ಕ್ರಿಕೆಟರ್‌ಗಳಷ್ಟೇ ಅಲ್ಲ, ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟರ್‌ಗಳ ಜೊತೆನೂ ಸುದೀಪ್‌ಗೆ ಲಿಂಕ್ ಇದೆ. ಅದರಲ್ಲೂ 'ವಿಕ್ರಾಂತ್ ರೋಣ' ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾರೆ ಅಂದುಕೊಂಡಿದ್ದರು. ಆದ್ರೀಗ ಕ್ರಿಕೆಟ್ ಕಡೆಗೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಭಾರತ ತಂಡದ ಕ್ರಿಕೆಟ್ ಆಟಗಾರ ಶಿಖರ್ ಧವನ್ ಬೆಂಗಳೂರಿನ ಜೆಪಿ ನಗರದಲ್ಲಿರೋ ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟಿದ್ದಾರೆ.

ಶಿಖರ್ ಧವನ್ ಭೇಟಿ ಬಗ್ಗೆ ಕಿಚ್ಚನ ಟ್ವೀಟ್

ಭಾರತೀಯ ಕ್ರಿಕೆಟ್ ಆಟಗಾರ ಹಾಗೂ ಕಿಚ್ಚ ಸುದೀಪ್ ಭೇಟಿಯ ಹಿನ್ನೆಲೆಯೇನು? ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ, ತಮ್ಮ ಮನೆಯಲ್ಲಿ ಶಿಖರ್ ಧವನ್ ಭೇಟಿ ಮಾಡಿದ್ದನ್ನು ಕಿಚ್ಚ ಸುದೀಪ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಶಿಖರ್ ಧವನ್ ಜೊತೆ ಅವರದ್ದೇ ಸ್ಟೈಲ್‌ನಲ್ಲಿ ಕಿಚ್ಚ ಪೋಸ್‌ ಕೊಟ್ಟ ಫೋಟೊಗಳನ್ನು ಶೇರ್ ಮಾಡಿದ್ದು, " ಎಂತಹ ಅದ್ಭುತ ಹಾಗೂ ಪರ್ಫೆಕ್ಟ್ ರಾತ್ರಿ. ನನ್ನ ಆತ್ಮೀಯ ಸಹೋದರ ಶಿಖರ್‌ ಧವನ್‌ನಿಗೆ ಮುಂಬರುವ ಐಪಿಎಲ್‌ ಪಂದ್ಯಗಳಿಗೆ ಓಳ್ಳೆಯದಾಗಲಿ." ಸುದೀಪ್ ಟ್ವೀಟ್ ಮಾಡಿದ್ದಾರೆ.

ಪಾಂಡ್ಯ ಬ್ರದರ್ಸ್‌ನಿಂದ ಯಶ್ ಭೇಟಿ

ಪಾಂಡ್ಯ ಬ್ರದರ್ಸ್‌ನಿಂದ ಯಶ್ ಭೇಟಿ

ಕಿಚ್ಚ ಸುದೀಪ್ ಅನ್ನು ಶಿಖರ್ ಧವನ್ ಭೇಟಿ ಮಾಡುವ ಮುನ್ನ ಪಾಂಡ್ಯ ಬ್ರದರ್ಸ್ ಯಶ್ ಭೇಟಿ ಮಾಡಿದ್ದರು. ಕ್ರಿಕೆಟಿಗೆ ಹಾರ್ದಿಕ್ ಪಾಂಡ್ಯ ಹಾಗೂ ಅವರ ಸಹೋದರ ಕ್ರುನಾಲ್ ಪಾಂಡ್ಯ ಇಬ್ಬರೂ ರಾಕಿ ಭಾಯ್ ಯಶ್ ಭೇಟಿ ಮಾಡಿರೋ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಆಗಲೂ ಈ ಭೇಟಿ ಆಕಸ್ಮಿಕವೋ ಅಥವಾ ಏನಾದರೂ ಹೊಸ ಪ್ಲ್ಯಾನ್ ಇದೆಯಾ? ಅಂತ ನೆಟ್ಟಿಗರು ಚರ್ಚೆಯಾಗಿತ್ತು.

Jr.Ntr ಭೇಟಿ ಮಾಡಿದ್ದ ಟೀಂ ಇಂಡಿಯಾ ಆಟಗಾರು

Jr.Ntr ಭೇಟಿ ಮಾಡಿದ್ದ ಟೀಂ ಇಂಡಿಯಾ ಆಟಗಾರು

ಭಾರತ ಹಾಗೂ ನ್ಯೂಜಿಲ್ಯಾಂಡ್ ಏಕದಿನ ಪಂದ್ಯದ ವೇಳೆ ಭಾರತ ತಂಡದ ಕೆಲ ಆಟಗಾರರು ಜೂ.ಎನ್‌ಟಿಆರ್ ಅನ್ನು ಭೇಟಿ ಮಾಡಿದ್ದರು. ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಯಜ್ವೇಂದ್ರ ಚಹಾಲ್,ಇಶಾನ್ ಕಿಶಾನ್, ಶಾರ್ದುಲ್ ಠಾಕೂರ್ ಹೈದರಾಬಾದ್‌ನಲ್ಲಿ ಭೇಟಿ ಮಾಡಿದ್ದರು.

More from Filmibeat

English summary
Shikar Dhawan Visited Sudeep at His Residence; Kichcha Best wishes for the upcoming IPL, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X