ಫಲಿತಾಂಶದ ಬಳಿಕ ರಮ್ಯಾ ಹೊಟ್ಟೆ ಉರಿಸ್ತಿದ್ದಾರೆ ಶಿಲ್ಪಾ ಗಣೇಶ್

Recommended Video

ರಮ್ಯಾಗೆ ಸರಿಯಾಗಿ ಮಾತಿನ ಗುದ್ದು ನೀಡಿದ ಶಿಲ್ಪಾ ಗಣೇಶ್

ಲೋಕಸಭಾ ಮಹಾಸಮರದ ತೀರ್ಪು ಬಂದಿದೆ. ಭಾರತದ ತುಂಬ ಕಮಲ ಅರಳಿದೆ. ಮೋದಿ ಮತ್ತೆ ಭಾರತದ ಸಾರಥಿಯಾಗಿದ್ದಾರೆ. ಬಿಜೆಪಿ ಪಕ್ಷದವರ ಹಾಗೂ ಮೋದಿ ಅಭಿಮಾನಿಗಳ ಖುಷಿಗೆ ಲೆಕ್ಕವೇ ಇಲ್ಲದಂತಾಗಿದೆ.

ಕರ್ನಾಟಕದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು, ಕಾಂಗ್ರೆಸ್ ನಾಯಕರಿಗೆ ತೀವ್ರ ಮುಖಭಂಗವಾಗಿದೆ. ಗೆದ್ದ ಖುಷಿಯ ನಡುವೆಯೇ ನಿರ್ಮಾಪಕಿ ಹಾಗೂ ಬಿಜೆಪಿ ಪಕ್ಷದ ನಾಯಕಿ ಶಿಲ್ಪಾ ಗಣೇಶ್ ನಟಿ ರಮ್ಯಾಗೆ ಗೇಲಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಹಾಗೂ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ನಡುವೆ ಆಗಾಗ ಮಾತಿನ ವಾರ್ ನಡೆಯುತ್ತಿರುತ್ತದೆ. ಈಗ ಶಿಲ್ಪಾ ಗಣೇಶ್ ಮತ್ತೆ ರಮ್ಯಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

ರಮ್ಯಾ ಎಲ್ಲಿದಿಯಮ್ಮಾ?

ರಮ್ಯಾ ಎಲ್ಲಿದಿಯಮ್ಮಾ?

'ನಿಖಿಲ್ ಎಲ್ಲಿದ್ದಿಯಪ್ಪ...?' ಸ್ಟೈಲ್ ನಲ್ಲಿ ರಮ್ಯಾ ಎಲ್ಲಿದಿಯಮ್ಮಾ? ಎಂದು ಶಿಲ್ಪಾ ಗಣೇಶ್ ಪ್ರಶ್ನೆ ಮಾಡಿದ್ದಾರೆ. ಚುನಾವಣೆಗೂ ಹಿಂದೆ ಮೋದಿ ಹಾಗೂ ಬಿಜೆಪಿ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದ ರಮ್ಯಾ ಈಗ ಎಲ್ಲಿ ಎಂದು ಕೇಳಿದ್ದಾರೆ. ತಮ್ಮ ಗೆಲುವನ್ನು ಸಂಭ್ರಮಿಸಿವುದರ ಜೊತೆಗೆ ಈ ರೀತಿ ಪ್ರತಿಸ್ಪರ್ಧಿಗಳಿಗೆ ಹೊಟ್ಟೆ ಉರಿಸುತ್ತಿದ್ದಾರೆ.

ಶಿಲ್ಪಾ ಗಣೇಶ್ ಟ್ವೀಟ್

ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಶಿಲ್ಪಾ ''ರಮ್ಯಾ ಎಲ್ಲಿದಿಯಮ್ಮಾ?. ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್?, ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ನಿಮ್ಮ ತಲೆಬುಡವಿಲ್ಲದ ಟ್ವೀಟ್ ಗಳು? ಎಲ್ಲೋಯ್ತು. ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು.'' ಎಂದಿದ್ದಾರೆ.

ಮೌನವಾದ ರಮ್ಯಾ

ಮೌನವಾದ ರಮ್ಯಾ

ಶಿಲ್ಪಾ ಗಣೇಶ್ ಅವರ ಈ ಮಾತುಗಳಿಗೆ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಚುನಾವಣಾ ಫಲಿತಾಂಶದಿಂದ ರಮ್ಯಾ ಆಘಾತಗೊಂಡಿದ್ದಾರೋ ಆಥವಾ ಅವರಿಗೆ ಈ ಕ್ಷಣಕ್ಕೆ ಏನೂ ಹೇಳುವುದು ತಿಳಿಯುತ್ತಿಲ್ಲೋ ಗೊತ್ತಿಲ್ಲ ಆದರೆ, ರಮ್ಯಾ ಮಾತ್ರ ಸೈಲೆಂಟ್ ಆಗಿದ್ದಾರೆ.

ಮೋದಿಗೆ ರಮ್ಯಾ ಅಭಿನಂದನೆ

ಶಿಲ್ಪಾ ಗಣೇಶ್ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದರೂ ರಮ್ಯಾ ಬಿಜಿಪಿಗೆ ಅಭಿನಂದನೆ ಸಲ್ಲಿಸುವುದನ್ನು ಮರೆತಿಲ್ಲ. ಚುನಾವಣಾ ಫಲಿತಾಂಶದ ನಂತರ ಭಾರಿ ಬಹುಮತ ಪಡೆದ ಮೋದಿ ಹಾಗೂ ಬಿಜಿಪಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯ ತಿಳಿಸಿದ್ದಾರೆ. ಒಂದೇ ಸಾಲಿನಲ್ಲಿ ವಿಶ್ ಮಾಡಿದ್ದಾರೆ.

More from Filmibeat

English summary
Bharatiya Janata Party karnataka mahila morcha vice president Shilpa Ganesh asking Ramya Yellidiyamma after the lok sabha elections results.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X