ಅಗಲಿದ ಅನಂತ್ ಕುಮಾರ್ ರಿಗೆ ಗಣೇಶ್ ದಂಪತಿ ಅಂತಿಮ ನಮನ

ಭಾರತೀಯ ಜನತಾ ಪಕ್ಷ ಕಂಡ ಬಲಿಷ್ಟ ನಾಯಕ, ಜನಪ್ರಿಯ ರಾಜಕಾರಣಿ ಅನಂತ್ ಕುಮಾರ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ರಾಜಕೀಯ ವ್ಯಕ್ತಿಗಳ ಜೊತೆಗೆ ಸಿನಿಮಾರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಜ್ಯ ಬಿಜೆಪಿ ಮಹಿಳಾ ಮೋರ್ಚ ಉಪಾಧ್ಯಕ್ಷೆ ಆಗಿರುವ ಶಿಲ್ಪಾ ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

shilpa ganesh and ganesh pays condolence to ananth kumar by tweets

''ಅನಂತ್ ಕುಮಾರ್ ಅವರ ಮರಣದಿಂದ ನಾನು ದುಃಖಿತಳಾಗಿದ್ದೇನೆ. ಬಿಜಿಪಿ ಪಕ್ಷವನ್ನು ಬಲಪಡಿಸಲು ಹಾಗೂ ದೇಶ ಸೇವೆ ಮಾಡಲು ತಮ್ಮ ಜೀವನವನ್ನೇ ಅವರು ಮುಡಿಪಾಗಿಟ್ಟಿದ್ದರು.'' ಎಂದು ಟ್ವೀಟ್ ಮಾಡಿದ್ದಾರೆ.

ಜೊತೆಗೆ ಶಿಲ್ಪಾ ಗಣೇಶ್ ಪತಿ, ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಅನಂತ್ ಕುಮಾರ್ ಅವರ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ಅನಂತ್ ಕುಮಾರ್ ಒಬ್ಬ ವಿಭಿನ್ನ ವ್ಯಕ್ತಿತ್ವ ಹೊಂದಿರುವ ನಾಯಕರು. ಅವರ ಇಡೀ ಕುಟುಂಬ ಹಾಗೂ ಅವರ ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ.'' ಎಂದಿದ್ದಾರೆ.

ಅಂದಹಾಗೆ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 12ರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಕಡೆಯ ಹಂತದಲ್ಲಿ ಲಂಡನ್ ಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ.

More from Filmibeat

English summary
State Vice President Mahila Morcha-BJP Karnataka Shilpa Ganesh and actor Ganesh tweets pays his condolance to union minister Ananth Kumar for his demise this morning.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X