ರಮ್ಯಾಗೆ ಮಹಾ ಮಂಗಳಾರತಿ ಮಾಡಿದ ಶಿಲ್ಪಾ ಗಣೇಶ್

By Harshitha

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಮತ್ತೆ ಗರಂ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಮಹಾ ಮಂಗಳಾರತಿ ಮಾಡಿದ್ದಾರೆ.

ಅದಾಗಲೇ ಫೇಸ್ ಬುಕ್ ನಲ್ಲಿ ಎರಡು ಮೂರು ಬಾರಿ ರಮ್ಯಾ ವಿರುದ್ಧ ಶಿಲ್ಪಾ ಗಣೇಶ್ ಸಿಡಿದೆದ್ದಿದ್ದರು. ಇದೀಗ ಪ್ರಧಾನಿ ಮೋದಿ ಬಗ್ಗೆ ರಮ್ಯಾ ಟ್ವೀಟ್ ಮಾಡಿರುವ ಕಾರಣ ಶಿಲ್ಪಾ ಗಣೇಶ್ ಗರಂ ಆಗಿದ್ದಾರೆ.

Recommended Video

ಮೋದಿ ಕುರಿತು ರಮ್ಯಾ ಟ್ವೀಟ್ : ಸೆಲೆಬ್ರಿಟಿಗಳಿಂದ ಖಡಕ್ ಉತ್ತರ | Oneindia Kananda

''ರಮ್ಯಾ ಹೆಸರಲ್ಲೇ ರಮ್ ಇದೆ. ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ಗೊತ್ತಿರುತ್ತೆ'' ಎಂದು ರಮ್ಯಾ ಅವರ ನಶೆಯ ಟ್ವೀಟ್ ಬಗ್ಗೆ ಶಿಲ್ಪಾ ಗಣೇಶ್ ಗುಟುರು ಹಾಕಿದ್ದಾರೆ. ಮುಂದೆ ಓದಿರಿ...

ರಮ್ಯಾ ಮಾಡಿದ ಟ್ವೀಟ್ ಏನು.?

ರಮ್ಯಾ ಮಾಡಿದ ಟ್ವೀಟ್ ಏನು.?

ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣದಲ್ಲಿ ''ರೈತರೇ ನಮ್ಮ ಪ್ರಮುಖ (TOP) ಆದ್ಯತೆ. TOP ಅಂದ್ರೆ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಹೇಳಿಕೆಯನ್ನ ಟೀಕಿಸಲು ಮುಂದಾದ ರಮ್ಯಾ ನೀವು ನಶೆಯಲ್ಲಿ (POT) ಇದ್ದಾಗ ಹೀಗೆ ಆಗೋದು'' ಎಂದು ಟ್ವೀಟ್ ಮಾಡಿದ್ದರು. ಈಗ ಇದೇ ಟ್ವೀಟ್ ಶಿಲ್ಪಾ ಗಣೇಶ್ ಕೆಂಗಣ್ಣಿಗೆ ಗುರಿಯಾಗಿದೆ.

ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ...

ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ...

ರಮ್ಯಾ ಮಾಡಿದ ನಶೆ ಟ್ವೀಟ್ ನೋಡಿ, ''ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ'' ಎಂದು ಶಿಲ್ಪಾ ಗಣೇಶ್ ಟ್ವೀಟ್ ಮಾಡಿದ್ದಾರೆ.

ಹೆಸರಲ್ಲೇ ರಮ್ ಇದೆ.!

ಹೆಸರಲ್ಲೇ ರಮ್ ಇದೆ.!

''ರಮ್ಯಾ ಹೆಸರಲ್ಲೇ ರಮ್ ಇದೆ. ಟೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ'' ಎಂದಿದ್ದಾರೆ ಶಿಲ್ಪಾ ಗಣೇಶ್

ವಿವಾದದ ಸುಳಿಯಲ್ಲಿ ರಮ್ಯಾ

ವಿವಾದದ ಸುಳಿಯಲ್ಲಿ ರಮ್ಯಾ

ರಮ್ಯಾ ವಿರುದ್ಧ ಶಿಲ್ಪಾ ಗಣೇಶ್ ಜೊತೆಗೆ ಜಗ್ಗೇಶ್ ಕೂಡ ತಿರುಗೇಟು ನೀಡಿದ್ದಾರೆ. ಅಲ್ಲದೇ, ಬಿಜೆಪಿ ನಾಯಕರು ಕೂಡ ರಮ್ಯಾ ವಿರುದ್ಧ ಹರಿಹಾಯ್ದಿದ್ದಾರೆ.

More from Filmibeat

English summary
BJP Mahila Morcha State Vice President, Shilpa Ganesh has taken her twitter account to criticize Ramya for her POT comment against PM Narendra Modi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X