Shilpa Shetty as Satyavati: 'KD' ಸಾಮ್ರಾಜ್ಯಕ್ಕೆ ಎಂಟ್ರಿ ಕೊಟ್ಟ ಸತ್ಯವತಿ.. ಸೀರೆ, ಕೂಲಿಂಗ್ ಗ್ಲಾಸ್ ಚಿಂದಿ ಲುಕ್!

ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'KD' ಸಿನಿಮಾಗೆ ಶಿಲ್ಪಾ ಶೆಟ್ಟಿ ಬರ್ತಾರೆ ಅನ್ನೋದ ಸುದ್ದಿ ಇತ್ತು. ಕೆಲವು ದಿನಗಳ ಹಿಂದಷ್ಟೇ ಶಿಲ್ಪಾ ಶೆಟ್ಟಿ ಸಿನಿಮಾ ಸೆಟ್ಟಿಗೆ ಎಂಟ್ರಿ ಕೊಟ್ಟು ಶೂಟಿಂಗ್ ಮುಗಿಸಿ ಹೋಗಿದ್ದಾರೆ. ಆಗ ಶಿಲ್ಪಾ ಶೆಟ್ಟಿನೇ ಸತ್ಯವತಿ ಅಂತಾನೂ ಹೇಳಿದ್ದೆವು. ಅದೇ ಲುಕ್ ಈಗ ರಿವೀಲ್ ಆಗಿದೆ.

ಕೆಲವು ದಿನಗಳ ಹಿಂದಷ್ಟೇ ಜೋಗಿ ಪ್ರೇಮ್ 'ಕೆಡಿ' ಸಾಮ್ರಾಜ್ಯಕ್ಕೆ ಸತ್ಯವತಿಯ ಎಂಟ್ರಿ ಕೊಟ್ಟಿದ್ದಾರೆಂದು ಸುಳಿವು ನೀಡಿದ್ದರು. ಯುಗಾದಿ ಹಬ್ಬದಂದು ಆ ನಟಿಯನ್ನು ರಿವೀಲ್ ಮಾಡುವುದಾಗಿಯೂ ಹೇಳಿದ್ದರು. ನುಡಿದಂತೆ ಶಿಲ್ಪಾ ಶೆಟ್ಟಿ ಲುಕ್ ಈಗ ರಿವೀಲ್ ಆಗಿದೆ.

Shilpa Shetty is welcomed as Satyavati by the KD team, starring Dhruva Sarja,directed by Jogi Prem

ಹಲವು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಅವರನ್ನು ನೋಡಲು ಮತ್ತೆ ಕಾಯುತ್ತಿರೋ ಅಭಿಮಾನಿಗಳಿಗೆ ಹಬ್ಬದಂದೇ ಬೇವಿನ ಜೊತೆ ಬೆಲ್ಲವೂ ಸಿಕ್ಕಂತಾಗಿದೆ. ಶಿಲ್ಪಾಶೆಟ್ಟಿಯ ರೆಟ್ರೋ ಲುಕ್ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ.

'KD' ಅಡ್ಡಕ್ಕೆ ಬಂದೋದ 'ಸತ್ಯವತಿ'

ಜೋಗಿ ಪ್ರೇಮ್ ಅಂದ್ರೇನೆ ಹಾಗೇ, ಕೆಲವು ವಿಷಯಗಳನ್ನು ಗುಟ್ಟಾಗಿ ಇಟ್ಟಿರುತ್ತಾರೆ. ಇದೀಗ ಶಿಲ್ಪಾ ಶೆಟ್ಟಿ ಬಂದೋಗಿರೋದು ಕೂಡ ರಹಸ್ಯವಾಗಿಯೇ ಇತ್ತು. ಮೂಲಗಳ ಪ್ರಕಾರ, ಶಿಲ್ಪಾ ಶೆಟ್ಟಿ ಈಗಾಗಲೇ 'ಕೆಡಿ' ಅಡ್ಡಾಗೆ ಎಂಟ್ರಿ ಕೊಟ್ಟು ಆಗಿದೆ. ಮೂರು ದಿನ ಶೂಟಿಂಗ್ ಮುಗಿಸಿ ಮತ್ತೆ ಮುಂಬೈಗೆ ತೆರಳಿಸಿದ್ದಾರೆ.

ಶಿಲ್ಪಾ ಶೆಟ್ಟಿ ರೆಟ್ರೋ ಲುಕ್ ಮಸ್ತಾಗಿದೆ. ಕೂಲಿಂಗ್ ಗ್ಲಾಸ್ ತೊಟ್ಟು, ರೆಟ್ರೋ ಗೆಟಪ್‌ನಲ್ಲಿ ಸೀರೆಯುಟ್ಟು, ಅದೇ ಗ್ಲಾಮರ್ ಲುಕ್ ಕೊಟ್ಟಿದ್ದಾರೆ. ಬಾಲಿವುಡ್‌ ನಟಿಯ ಸತ್ಯವತಿ ಅವತಾರಕ್ಕೆ ಪಾಸಿಟಿವ್ ಓಪಿನಿಯನ್ ಸಿಗುತ್ತಿವೆ. ಆದರೆ, ಶಿಲ್ಪಾ ಶೆಟ್ಟಿ ಪಾತ್ರ ಹೇಗಿರುತ್ತೆ? ಯಾರಿಗೆ ಜೋಡಿ? ಇಂತಹ ಪ್ರಶ್ನೆಗಳಿಗೆ ಈಗಲೇ ಉತ್ತರ ಸಿಗೋದು ಡೌಟು.

Shilpa Shetty is welcomed as Satyavati by the KD team, starring Dhruva Sarja,directed by Jogi Prem

17 ವರ್ಷಗಳ ಬಳಿಕ ಸತ್ಯವತಿ ಮೂಲಕ ಎಂಟ್ರಿ

ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋದು ಸಿನಿಪ್ರಿಯರಿಗಂತೂ ಖುಷಿಕೊಟ್ಟಿದೆ. ಇದು ಶಿಲ್ಪಾ ಶೆಟ್ಟಿಗೆ ನಾಲ್ಕನೇ ಸಿನಿಮಾ. ಈಗಾಗಲೇ ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ.

2005ರಲ್ಲಿ ತೆರೆಕಂಡ 'ಆಟೋ ಶಂಕರ್' ಶಿಲ್ಪಾ ಶೆಟ್ಟಿ ನಟಿಸಿದ ಕೊನೆಯ ಸಿನಿಮಾವಾಗಿತ್ತು. 1998ರಲ್ಲಿ ಶಿಲ್ಪ ಶೆಟ್ಟಿ 'ಪ್ರೀತ್ಸೋದ್ ತಪ್ಪಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ರು. ಹಾಗೇ 'ಒಂದಾಗೋಣ ಬಾ'ದಲ್ಲೂ ನಟಿಸಿದ್ದರು. ಈಗ ಸತ್ಯವತಿಯಾಗಿ ಮತ್ತೆ ಸಿನಿಪ್ರಿಯರಿಗೆ ಹುಚ್ಚು ಹಿಡಿಸಲು ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ.

'ಕೆಡಿ' ಪ್ಯಾನ್ ಇಂಡಿಯಾ ಸಿನಿಮಾ

ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಧ್ರುವ ಸರ್ಜಾ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಅಕ್ಷರಶ: 'ಕೆಡಿ' ಲುಕ್ ಕೊಟ್ಟು ಈಗಾಗಲೇ ಸಿನಿಪ್ರೇಮಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಫಸ್ಟ್ ಲುಕ್ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಬೇರೆ ಚಿತ್ರರಂಗದ ದಿಗ್ಗಜರಿದ್ದಾರೆ. ಬಾಲಿವುಡ್‌ನಿಂದ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಇದ್ದರೆ, ತಮಿಳು ಚಿತ್ರರಂಗದಿಂದ ವಿಜಯ್ ಸೇತುಪತಿ ಚಿತ್ರತಂಡ ಸೇರಿಕೊಳ್ಳುತ್ತಿದ್ದಾರೆ. ಇನ್ನು ಉಳಿದವರು ಇನ್ನಷ್ಟೇ ರಿವೀಲ್ ಆಗಬೇಕಿದೆ.

More from Filmibeat

English summary
Shilpa Shetty is welcomed as Satyavati by the KD team, starring Dhruva Sarja,directed by Jogi Prem. She already finished 3 days of shoot, coming back on next schedule, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X