ಇಟಲಿಯಲ್ಲಿ ಸ್ವಿಮ್ ಸೂಟ್ ತೊಟ್ಟು ಮಿಂಚಿದ ಶಿಲ್ಪಾ ಶೆಟ್ಟಿ: "ಸಂತೂರ್ ಅಮ್ಮನಿಗಿಂತ ಸತ್ಯವತಿನೇ ಮೇಲು" ಎಂದ ನೆಟ್ಟಿಗರು

ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಮೀರಿಸೋಕೆ ಯಾರಿಂದ ಸಾಧ್ಯ ಹೇಳಿ? ವಯಸ್ಸು 48 ದಾಟಿದರೂ ಈಕೆ ಇನ್ನೂ ಸೌಂದರ್ಯವತಿ. ನಿರಂತರ ಯೋಗ, ಫಿಟ್ನೆಸ್ ಅಂತ ಬ್ಯೂಟಿಯನ್ನೂ ಶಿಲ್ಪಾ ಶೆಟ್ಟಿ ಕಾಪಾಡಿಕೊಂಡು ಬಂದಿದ್ದಾರೆ. ಅದಕ್ಕೆ ಮದುವೆ ಆಗಿ ಮಕ್ಕಳಾದರೂ, ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ.

ಶಿಲ್ಪ ಶೆಟ್ಟಿಯನ್ನೀಗ ಕೇವಲ ಸಿನಿಮಾದಿಂದ ಮಾತ್ರ ಗುರುತಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಸಿನಿಮಾದ ಜೊತೆ ಜೊತೆಗೆ ಫ್ಯಾಷನ್, ಫಿಟ್ನೆಸ್‌ ಕ್ಷೇತ್ರದಲ್ಲೂ ಶಿಲ್ಪಾ ಶೆಟ್ಟಿ ಹೆಸರಿದೆ. ತನ್ನದೇ ಒಂದು ಟ್ರೆಂಡ್ ಅನ್ನು ಹುಟ್ಟಾಕುತ್ತಲೇ ಇರುತ್ತಾರೆ. ಕರಾವಳಿ ಬ್ಯೂಟಿಯ ಅಂದಕ್ಕೆ ಅದೆಷ್ಟೋ ಮಂದಿ ಇಂದಿಗೂ ಫ್ಯಾನ್ ಆಗಿಯೇ ಉಳಿದಿದ್ದಾರೆ.

Shilpa Shetty poses wearing a monokini in Italy, and fans say she is better than Santoor mother

ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ ಬಹಳ ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡು ಇಟಲಿ ಪ್ರವಾಸಕ್ಕೆ ತೆರಳಿದ್ದು, ಸ್ವಿಮ್ ಸೂಟ್‌ ತೊಟ್ಟು ಪೋಸ್ ಕೊಟ್ಟಿರೋ ಒಂದೇ ಒಂದು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೊನೊಕಿನಿ ತೊಟ್ಟು ಹುಡುಗರ ನಿದ್ದೆ ಕದ್ದ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಇಟಲಿಯಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹಾಲಿಡೇ ಮೂಡ್‌ನಲ್ಲಿರೋ ಶಿಲ್ಪಾ ಶೆಟ್ಟಿ ಮೊನೊಕಿನಿ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊ ಆಕೆಯ ಅಭಿಮಾನಿಗಳ ನಿದ್ದೆ ಕಡೆಸಿದೆ. ಸೌಂದರ್ಯ ಸಮರದಲ್ಲೂ 48ರ ಶಿಲ್ಪ ಶೆಟ್ಟಿ ಯುವ ನಟಿಯರಿಗೆ ಪೈಪೋಟಿ ಕೊಡುತ್ತಿದ್ದಾರೆ.

ಇಷ್ಟೇ ಅಲ್ಲದೆ ಇಟಲಿಯ ದೈವಿಕ ಸ್ಥಳದ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. 3000ದಷ್ಟು ಹಳೆಯದಾದ ಪವಿತ್ರ ನೀರಿನರು. ಭೂಮಿಯ ಅಂತಾರಳದಿಂದ ಬಿಸಿ ನೀರಿನ ಬುಗ್ಗೆಯು ಚಿಮ್ಮಿ ಹೊರಬರುತ್ತೆ. ಈ ನೀರಿನಲ್ಲಿ ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ತರುತ್ತದೆ. ಇದರಿಂದ ಆರೋಗ್ಯ ಪ್ರಯೋಜನಗಳು ಕೂಡ ಇವೆ ಎಂದು ಶಿಲ್ಪ ಶೆಟ್ಟಿ ಹೇಳಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದಾರೆ.

ಸಂತೂರ್ ಅಮ್ಮನಿಂತ ಬೆಟರ್

ಇತ್ತೀಚೆಗಷ್ಟೇ ಶಿಲ್ಪಾ ಶೆಟ್ಟಿ 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈಗ ಮೊನಿಕಿನಿಯಲ್ಲಿ ಶಿಲ್ಪಾ ಶೆಟ್ಟಿಯ ಫೋಟೊ ನೋಡಿ ಥ್ರಿಲ್ ಆಗಿದ್ದಾರೆ. ನಟಿಯ ಸೌಂದರ್ಯವನ್ನು ಹೊಗಳಿ ಕೆಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಇಬ್ಬರು "ಇಂತಹ ಫಿಗರೂ ನನಗೂ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಹೀಗಿರುವುದಕ್ಕೆ ತುಂಬಾ ಶ್ರಮ ಪಡಬೇಕು" ಎಂದು ನಟಿಯನ್ನು ಹೊಗಳಿದ್ದಾರೆ.

ಮತ್ತೊಬ್ಬರು " ಇವರಂತೂ ಸಂತೂರ್ ಅಮ್ಮನಿಗಿಂತಲೂ ಯಂಗ್ ಆಗಿ ಕಾಣಿಸುತ್ತಿದ್ದಾರೆ." ಎಂದಿದ್ದಾರೆ. ಇನ್ನೊಬ್ಬರು " ಇಂತಹ ಯೋಗ ಟ್ರೈನರ್ ಒಬ್ಬರು ಸಿಕ್ಕರೆ ಸಾಕು. ಯೋಗ ಮಾಡುವುದಕ್ಕೆ ಯಾಕೆ ನಾಚಿಕೊಳ್ಳಬೇಕು" ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ ಮಗದೊಬ್ಬ ನೆಟ್ಟಿಗರು "ಶಿಲ್ಪ ಶೆಟ್ಟಿ ಹಾಗೂ ಅನಿಲ್ ಕಪೂರ್ ಇಬ್ಬರಿಗೂ ವಯಸ್ಸಾಗುವುದಿಲ್ಲ" ಎಂದು ಕಮೆಂಟ್ ಮಾಡಿದ್ದಾರೆ.

'ಕೆಡಿ' ಸಿನಿಮಾದಲ್ಲಿ ಬ್ಯುಸಿ

ಶಿಲ್ಪ ಶೆಟ್ಟಿ ಮದುವೆ ಬಳಿಕ ಸುಮ್ಮನೆ ಕೂತಿಲ್ಲ. ಒಂದಿಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗುತ್ತಲೇ ಇರುತ್ತಾರೆ. ಸದ್ಯ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ 'ಕೆಡಿ'ಯಲ್ಲಿ ನಟಿಸುತ್ತಿದ್ದಾರೆ. 'ಸತ್ಯವತಿ' ಅನ್ನೋ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಮಿಂಚುತ್ತಿದ್ದಾರೆ

ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, 'ಕೆಜಿಎಫ್ 2' ಬಳಿಕ ಸಂಜಯ್ ದತ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1970ರ ದಶಕದಲ್ಲಿ ನಡೆಯುವ ಕಥೆಯಲ್ಲಿ ಕರಾವಳಿ ಬ್ಯೂಟಿಗೆ ಪಾತ್ರ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಚಿತ್ರರಂಗ ಕಾದು ಕೂತಿದೆ.

More from Filmibeat

English summary
Shilpa Shetty poses wearing a monokini in Italy, and fans say she is better than Santoor mother, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X