"ಸಿನಿಮಾದವನು ಸಿನಿಮಾ ಬಗ್ಗೆನೇ ಯೋಚನೆ ಮಾಡಿದ್ರೆ ರಿಷಬ್, ರಕ್ಷಿತ್ ಆಗ್ತಾರೆ"; ಶಿಷ್ಯ ದೀಪಕ್
2006 ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹೊಸಬರು ಯಶಸ್ಸು ಕಂಡ ವರ್ಷ. ಇವರಲ್ಲಿ 'ಶಿಷ್ಯ' ಸಿನಿಮಾ ಖ್ಯಾತಿಯ ದೀಪಕ್ ಕೂಡ ಒಬ್ಬರು. ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬರ ಹೊಸ ಪ್ರತಿಭೆಯನ್ನು ಪರಿಚಯಿಸಿತ್ತು. ಹೊಸ ಪ್ರತಿಭೆಯ ಸಿನಿಮಾವನ್ನು ಕನ್ನಡಿಗರು ಕೂಡ ಕೈ ಹಿಡಿದರು. 'ಶಿಷ್ಯ' ರಿಲೀಸ್ ಆಗುತ್ತಿದ್ದಂತೆ ದೀಪಕ್ ಸ್ಟಾರ್ ಆಗಿಬಿಟ್ಟರು.
ಈ ಸಿನಿಮಾ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ 'ಶಿಷ್ಯ' ದೀಪಕ್ ಎಂದೇ ಜನಪ್ರಿಯರಾದರು. ಇವರು ಜೂನಿಯರ್ ಶಂಕರ್‌ನಾಗ್ ಎಂದೇ ಅಭಿಮಾನಿಗಳಿಗೆ ಚಿರಪರಿಚಿತ. ಅಂದ್ಹಾಗೆ ಶಂಕರ್‌ನಾಗ್ ಅವರಂತೆ ಕಾಣುತ್ತಾರೆಂದು ಮೊದಲು ಗುರುತಿಸಿದ್ದೇ ಅಣ್ಣಾವ್ರು. 'ಶಿಷ್ಯ' ಯಶಸ್ಸಿನ ಹಿಂದೇನೆ, 'ಮಾಗಡಿ', 'ಬೆಳ್ಳಿ', '18th ಕ್ರಾಸ್' ಅಂತಹ ಸಿನಿಮಾಗಳನ್ನು ಮಾಡಿದರು. ಅವು ಯಶಸ್ಸು ಕಾಣಲಿಲ್ಲ. ಇತ್ತೀಚೆಗೆ 'ವೀರಂ', 'ಏಕ್ ಲವ್ ಯಾ' ಅಂತಹ ಸಿನಿಮಾಗಳಲ್ಲಿಯೂ ನಟಿಸಿದ್ದರು.

ಮೊದಲ ಸಿನಿಮಾದಲ್ಲಿಯೇ ಯಶಸ್ಸು ಸಿಕ್ಕಿದ್ದರೂ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಅವರು ಕ್ಯಾರಿ ಆಗಲಿಲ್ಲ. ದೀಪಕ್ ಎಲ್ಲಿ ಸೋತರು? ಚಿತ್ರರಂಗದಲ್ಲಿ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲವೇ? ಯಾರಾದರೂ ತುಳಿಯುವುದಕ್ಕೆ ಪ್ರಯತ್ನ ಪಟ್ಟರೇ? ಆಗ ಚಿತ್ರರಂಗದಲ್ಲಿ ಇವರ ಬಗ್ಗೆ ಹರಡಿದ್ದ ಅಪಪ್ರಚಾರವೇನು? 'ಮೆಜೆಸ್ಟಿಕ್' ಸಿನಿಮಾ ಮೊದಲ ಅಪ್ರೋಚ್ ಮಾಡಿದ್ಯಾರಿಗೆ? ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ವಿಷ್ಯ ಯಾಕೆ ಎತ್ತಿದ್ರು? ಈ ಎಲ್ಲಾ ಪ್ರಶ್ನೆಗಳಿಗೂ ದೀಪಕ್ 'ಕರ್ನಾಟಕ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆಂದು ನೋಡುವುದಾರೇ,
ಮೆಜೆಸ್ಟಿಕ್ ಮೊದಲು ಯಾರಿಗೆ ಹೋಗಿತ್ತು?
ಈ ಸಂದರ್ಶನದಲ್ಲಿ ತಮ್ಮ ಬಾಲ್ಯದಿಂದ ವೃತ್ತಿ ಬದುಕಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ದರ್ಶನ್ ಹಾಗೂ ಸುದೀಪ್ ಮೈಮನಸ್ಸಿಗೆ ಕಾರಣವಾದ 'ಮೆಜೆಸ್ಟಿಕ್' ಸಿನಿಮಾದ ಬಗ್ಗೆ ಮಹತ್ವ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. 'ಮೆಜೆಸ್ಟಿಕ್' ಸಿನಿಮಾ ಮೊದಲು ಯಾರಿಗೆ ಹೋಗಿತ್ತು? ಆಮೇಲೆ ಏನಾಯ್ತು? ಅನ್ನೋದನ್ನು ಹೇಳಿದ್ದಾರೆ.
"ಮೆಜೆಸ್ಟಿಕ್ ಸಿನಿಮಾಗೆ ಸುದೀಪ್ ಸರ್ ಅವರನ್ನು ಕೇಳಿದ್ದು ಸತ್ಯ. ಆಗ ಅವರದ್ದು ಡೇಟ್ಸ್ ಇರಲಿಲ್ಲ. ಆಗ ಅವರು ವಾಲಿ ಎನ್ನುವ ಸಿನಿಮಾ ಮಾಡುತ್ತಿದ್ದರು. ಆನಂತರ ದರ್ಶನ್ ಅವರು. ಆಗ ದರ್ಶನ್ ಅವರು ಸೀರಿಯಲ್ ಮಾಡುತ್ತಿದ್ದರು. ಅವರನ್ನು ಸಜೆಸ್ಟ್ ಮಾಡಿದ್ದು ಅಣಜಿ ನಾಗರಾಜ್ ಅವರು. ತೂಗುದೀಪ ಶ್ರೀನಿವಾಸ್ ಅವರ ಮಗ ಇದ್ದಾರೆ. ಅವರನ್ನು ಟ್ರೈ ಮಾಡಬಹುದು ಎಂದಿದ್ದರು. ಆಗ ಚಾಕಲೇಟ್ ಬಾಯ್ ತರ ಕಾಣುತ್ತಿದ್ದರು. ಆದರೆ, ಮೆಜೆಸ್ಟಿಕ್ ಪಾತ್ರವೇ ಬೇರೆ ತರ ಇತ್ತು. ಅದೇ ಮೇಕಪ್ ಮಾಡಿ ಆಕ್ಟ್ ಮಾಡಿಸಿದಾಗ ನಟನೆ ಅದ್ಭುತವಾಗಿತ್ತು." ಎಂದು ಶಿಷ್ಯ ದೀಪಕ್ ಹೇಳಿದ್ದಾರೆ.
ಕಿಚ್ಚ-ದರ್ಶನ್‌ಗೆ ಸರಿಸಮಾನಾಗಿದ್ದ ದೀಪಕ್
ಶಿಷ್ಯ ಬಳಿಕ ದೀಪಕ್‌ಗೆ ಬೇಡಿಕೆ ಹೇಗಿತ್ತು? ಸ್ಯಾಟಲೈಟ್ ರೈಟ್ಸ್ ಹೇಗಿತ್ತು? ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ದೀನಾ ಎನ್ನುವ ಡ್ರೀಮ್ ಸಿನಿಮಾವನ್ನು ಪ್ಲಾನ್ ಮಾಡಿಕೊಂಡು ಅವತ್ತಿನ ಕಾಲಕ್ಕೆ 2007-2008ರಲ್ಲಿ 1 ಕೋಟಿ 36 ಲಕ್ಷ ಖರ್ಚು ಮಾಡಿದ್ವಿ. ಅಂದಿನ ಕಾಲಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕರು ಹೊಸಬರಾಗಿದ್ದರು. ಹೀಗಾಗಿ ಬ್ಯುಸಿನೆಸ್‌ಗೆ ನಾನೇ ಕೂರುತ್ತಿದ್ದೆ. ಆಗ ಸ್ಯಾಟಲೈಟ್ ರೈಟ್ಸ್ ದರ್ಶನ್ ಅವರಿಗೆ ₹55 ಲಕ್ಷ, ಸುದೀಪ್ ಸರ್‌ಗೆ ₹55-₹54 ಲಕ್ಷ ನಾನು ₹52 ಲಕ್ಷದಲ್ಲಿ ಇದ್ದೆ. ಅದು ಒಂದಿಷ್ಟು ಜನಕ್ಕೆ ಕಣ್ಣು ಬಿತ್ತು. ಆ ಸಿನಿಮಾವನ್ನು ರಿಲೀಸ್ ಆಗುವುದಕ್ಕೆ ಬಿಡಲಿಲ್ಲ. ಅದು ನನ್ನನ್ನು ಡಿಪ್ರೆಷನ್‌ಗೆ ತೆಗೆದುಕೊಂಡು ಹೋಯ್ತು." ಎಂದಿದ್ದಾರೆ.

ರಿಷಬ್ ಶೆಟ್ಟಿ-ರಕ್ಷಿತ್ ಶೆಟ್ಟಿ ಆಗ್ತಾರೆ
"ರಿಷಬ್ ಸರ್ ಒಂದು ಮಾತು ಹೇಳಿದ್ರು. ಅವರು ಮೊದಲನೇ ಸಿನಿಮಾ ಮಾಡಿದಾಗ ರಕ್ಷಿತ್ ಅವರು ಎಷ್ಟೇ ಸೌಕರ್ಯವಾಗಿದ್ದರೂ, 1.20 ಕೋಟಿ ಸಾಲ ಮಾಡಿಕೊಂಡರು. ಅಲ್ಲಿಂದ ಅವರಿಬ್ಬರೂ ಏನೋ ಮಾಡುತ್ತೇವೆ ಅಂತ ಏನೋ ಕಟ್ಟಿಕೊಂಡರಲ್ಲ ಅದು ಮುಖ್ಯ. ಇಲ್ಲಿ ಸಿನಿಮಾದವರು ಸಿನಿಮಾ ಬೇರೆ ಎಲ್ಲವೂ ಯೋಚನೆ ಮಾಡುತ್ತಾರೆ. ಅದೇ ಒಬ್ಬ ಸಿನಿಮಾದವನು ಸಿನಿಮಾ ಬಗ್ಗೆನೇ ಯೋಚನೆ ಮಾಡಿಕೊಂಡು ಬಂದರೆ, ಒಂದು ಕಾಂತಾರ ಆಗುತ್ತೆ. ಒಬ್ಬ ರಿಷಬ್ ಸರ್ ಆಗುತ್ತಾರೆ. ಒಬ್ಬ ರಕ್ಷಿತ್ ಸರ್ ಆಗುತ್ತಾರೆ." ಎಂದಿದ್ದಾರೆ.
ಶಿವಣ್ಣ ಹೇಳಿದ್ದೇನು?
"ಬೇರೆ ಯಾರೂ ಬೇಡ ಶಿವಣ್ಣ ಹೇಳಿಬಿಟ್ರು. ಏನಮ್ಮ ನಿನ್ನ ಬಗ್ಗೆ ಏನೆಲ್ಲ ಹೇಳ್ತಾರಲ್ಲಮ್ಮ. ಏನಪ್ಪ ಇದು. ಗೊತ್ತಿಲ್ಲ ಅಣ್ಣ ಅಂದೆ. ಮಹೇಶ್ ಸರ್ ಹೇಳಿದ್ರು. ವೀರಂ ಮಾಡುವಾಗ ಎಲ್ಲರೂ ಹೇಳಿದರು. ಇದನ್ನೇ ಬೆನ್ನಿಗೆ ಚೂರಿ ಹಾಕೋದು ಅಂತ ಹೇಳೋದು" ಎಂದು ಶಿಷ್ಯ ದೀಪಕ್ ಹೇಳಿದ್ದಾರೆ.


Click it and Unblock the Notifications











