ಶಕ್ತಿಧಾಮ ಮಕ್ಕಳೊಂದಿಗೆ ಸಿನಿಮಾ ವೀಕ್ಷಿಸಿದ ಶಿವಣ್ಣ: 'ಬೈರಾಗಿ 2' ಬಗ್ಗೆ ಸುಳಿವು!

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ ಸಿನಿಮಾ 'ಬೈರಾಗಿ' ರಿಲೀಸ್ ಆಗಿದೆ. ಎಂಟು ತಿಂಗಳ ಬಳಿಕ ಸೆಂಚುರಿ ಸ್ಟಾರ್ ಸಿನಿಮಾ ರಿಲೀಸ್ ಆಗಿದ್ದರು ಅವರು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಅಪ್ಪು ಅಗಲಿದ ಬಳಿಕ ತೆರೆಕಂಡ ಶಿವಣ್ಣನ ಮೊದಲ ಸಿನಿಮಾವಿದು.

'ಬೈರಾಗಿ' ಮಲ್ಟಿಸ್ಟಾರ್ ಕಾಸ್ಟ್‌ ಇರುವ ಸಿನಿಮಾ. ಮತ್ತೆ ಶಿವಣ್ಣನನ್ನು ರಗಡ್ ಅವತಾರದಲ್ಲಿ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಶಿವಣ್ಣ ಕೂಡ 'ಬೈರಾಗಿ' ಸಿನಿಮಾಗೆ ಭರ್ಜರಿ ಪ್ರಚಾರ ಮಾಡಿದ್ದು, ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ಕಂಡು ಖುಷಿಯಾಗಿದ್ದಾರೆ.

ಇನ್ನೊಂದು ಕಡೆ ಮೈಸೂರಿನಲ್ಲಿ ತಾವೇ ನಡೆಸುತ್ತಿರುವ ಶಕ್ತಿಧಾಮದ ಮಕ್ಕಳನ್ನು 'ಬೈರಾಗಿ' ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದರು. ಅವರೊಂದಿಗೆ ಕೂತು ಸಿನಿಮಾ ವೀಕ್ಷಣೆ ಮಾಡಿದ್ದರು. ಈ ವೇಳೆ ಶಿವಣ್ಣ ಹಾಗೂ ನಿರ್ದೇಶಕರಿಬ್ಬರೂ 'ಬೈರಾಗಿ 2' ಬಗ್ಗೆ ಸುಳಿವು ನೀಡಿದ್ದಾರೆ.

ಶಕ್ತಿಧಾಮ ಮಕ್ಕಳಿಗೆ ಸಿನಿಮಾ ತೋರಿಸಿದ ಶಿವಣ್ಣ

ಶಕ್ತಿಧಾಮ ಮಕ್ಕಳಿಗೆ ಸಿನಿಮಾ ತೋರಿಸಿದ ಶಿವಣ್ಣ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 123ನೇ ಸಿನಿಮಾ 'ಬೈರಾಗಿ'. ಈ ಸಿನಿಮಾ ಬಗ್ಗೆ ದೊಡ್ಮೆನೆ ಅಭಿಮಾನಿಗಳಿಗೆ ನಿರೀಕ್ಷೆಯಿತ್ತು. ಅದರಂತೆಯೇ 'ಬೈರಾಗಿ' ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ಕಾರಣಕ್ಕೆ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಮೈಸೂರಿನಲ್ಲಿರುವ ಶಕ್ತಿಧಾಮದ ಮಕ್ಕಳಿಗೆ 'ಬೈರಾಗಿ' ಸಿನಿಮಾ ತೋರಿಸಿದ್ದಾರೆ. ಅವರೊಂದಿಗೆ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಕೂಡ ಬಂದು ಮಕ್ಕಳೊಂದಿಗೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಮಕ್ಕಳ ಜೊತೆ ಸಿನಿಮಾ ನೋಡ್ಬೇಕು

ಮಕ್ಕಳ ಜೊತೆ ಸಿನಿಮಾ ನೋಡ್ಬೇಕು

"ಮಕ್ಕಳೊಂದಿಗೆ ಸಿನಿಮಾ ನೋಡಬೇಕು ಅಂದುಕೊಂಡೆವು. ಶೂಟಿಂಗ್ ಇರಲಿಲ್ಲ. 'ವೇದ' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಇದೇ ವೇಳೆ 'ಬೈರಾಗಿ' ರಿಲೀಸ್ ಆಗಿತ್ತಲ್ಲ. ಹಾಗಾಗಿ ಮೈಸೂರಿನಲ್ಲಿ ಮಕ್ಕಳೊಂದಿಗೆ ಸಿನಿಮಾ ನೋಡೋಣ ಎಂದುಕೊಂಡಿದೆ. ಬಹಳ ಖುಷಿಯಾಗಿದೆ ರೆಸ್ಪಾನ್ಸ್ ಕೇಳಿ. ಸಿಂಪಲ್ ಸಿನಿಮಾ ಆಗಿದ್ದರೂ ಎಲ್ಲಾ ಪಾತ್ರಕ್ಕೂ ಒಂದು ನ್ಯಾಯವಿದೆ. ಒಳ್ಳೆಯ ಸಂದೇಶವಿದೆ. ಫ್ಯಾಮಿಲಿ ಸಮೇತ ಬಂದು ನೋಡಬೇಕಾದ ಸಿನಿಮಾ. ಹೆಣ್ಣು ಮಕ್ಕಳು ಬಂದು ನೋಡಲೇಬೇಕಾದ ಸಿನಿಮಾ." ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

'ಬೈರಾಗಿ 2' ಶಿವಣ್ಣ ಕ್ಲ್ಯೂ

'ಬೈರಾಗಿ 2' ಶಿವಣ್ಣ ಕ್ಲ್ಯೂ

ಶಕ್ತಿಧಾಮ ಮಕ್ಕಳೊಂದಿಗೆ ಸಿನಿಮಾ ನೋಡಲು ಬಂದಿದ್ದ ಶಿವರಾಜ್‌ಕುಮಾರ್ 'ಬೈರಾಗಿ'ಗೆ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಖುಷಿಯಾಗಿದ್ದಾರೆ. ಇದೇ ವೇಳೆ ಬೈರಾಗಿ ಪಾರ್ಟ್ ಬಗ್ಗೆ ಸುಳಿವು ನೀಡಿದ್ದಾರೆ.

"ಬೈರಾಗಿ 2 ಬರಬಹುದು" ಎಂದು ಹೇಳುತ್ತಾ ಸ್ಮೈಲ್ ಕೊಟ್ಟಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್.

ವಿಜಯ್ ಮಿಲ್ಟನ್ ಹೇಳಿದ್ದೇನು?

ವಿಜಯ್ ಮಿಲ್ಟನ್ ಹೇಳಿದ್ದೇನು?

" ಕರ್ನಾಟಕದಲ್ಲಿ ಒಂದು ಒಳ್ಳೆ ಸ್ವಾಗತ ಸಿಕ್ಕಿದೆ. ತಮಿಳಿನಲ್ಲಿ ನಾನು 30 ಸಿನಿಮಾಗಳನ್ನುಮಾಡಿದ್ದೇನೆ. ಇದು ನಾನು ಮೊದಲು ನಿರ್ದೇಶಿಸಿದ ಕನ್ನಡ ಸಿನಿಮಾ ಆಗಿತ್ತು. ಸಿನಿಮಾ ನೋಡಿದವರು ಸುಮ್ಮನೆ ಚೆನ್ನಾಗಿದೆ ಎನ್ನುತ್ತಿಲ್ಲ. ದೊಡ್ಡ ಧ್ವನಿಯಲ್ಲಿ ಚೆನ್ನಾಗಿದೆ ಎನ್ನುತ್ತಿದ್ದಾರೆ. ಬಹಳ ದಿನಗಳ ಬಳಿಕ ಸಿನಿಮಾ ನೋಡುತ್ತೇವೆ ಎನ್ನುತ್ತಿದ್ದಾರೆ. ಆದರಷ್ಟು ಬೇಗ ನಾವು 'ಬೈರಾಗಿ 2' ಅನ್ನು ಅನೌನ್ಸ್ ಮಾಡಲಿದ್ದೇವೆ." ಎಂದು ನಿರ್ದೇಶಕ ವಿಜಯ್ ಮಿಲ್ಟನ್ ಹೇಳಿದ್ದಾರೆ.

More from Filmibeat

English summary
Shiva Rajkumar and Director Vijay Milton Hinted Bairagee 2. After Watching Movie With Shakthidhama Children In Mysore, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X