"ಕಳೆದು ಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗಿದೆ":ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಮಗಳ ಶುಭಾಶಯ!

ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹೀರೊ ಶಿವರಾಜ್‌ಕುಮಾರ್. ವಯಸ್ಸು 60 ದಾಟಿದರೂ, ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಬ್ಯಾಕ್ ಟು ಬ್ಯಾಕ್ ಸಿನಿಮಾ, ರಿಯಾಲಿಟಿ ಶೋ ಅಂತ ಶಿವಣ್ಣ ಸದಾ ಓಡಾಡುತ್ತಲೇ ಇರುತ್ತಾರೆ. ಹಾಗಂತ ಬರೀ ಕೆಲಸಗಾರ ಅಷ್ಟೇ ಅಲ್ಲ. ಫ್ಯಾಮಿಲಿಮ್ಯಾನ್ ಕೂಡ ಹೌದು.

ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ ಬೆಸ್ಟ್ ತಾರಾ ಜೋಡಿ. ಇದೇ ಜೋಡಿ ಇಂದು (ಮೇ 19) ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಜೋಡಿ ಇಂದು 37ನೇ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಿಕೊಳ್ಳುತ್ತಿದೆ.

Shiva Rajkumar and wife Geethas 37th Wedding Anniversary Daughter Niveditha Wish Goes Viral

ಇಬ್ಬರೂ ಇಬ್ಬರಿಗೊಬ್ಬರು ಪರಸ್ಪರ ಗೌರವ ಕೊಡುತ್ತಾರೆ. ಪತ್ನಿಯ ಕೆಲಸಕ್ಕೆ ಶಿವಣ್ಣ ಸದಾ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಹಾಲು ಜೇನಿನಂತೆ ಇಬ್ಬರು ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದಾರೆ. ಈ ಸುಸಂದರ್ಭದಲ್ಲಿ ಅಪ್ಪ-ಅಮ್ಮನಿಗೆ ದ್ವಿತೀಯ ಪುತ್ರಿ ನಿವೇದಿತಾ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

37 ವರ್ಷದ ದಾಂಪತ್ಯ ಜೀವನ

ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್. ಅಪ್ಪನಂತೆ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಟ. ಹಾಗಂತ ಪತ್ನಿ ಗೀತಾ ಶಿವರಾಜ್‌ಕುಮಾರ್ ಸುಮ್ಮನೆ ಕೂತಿಲ್ಲ. ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಶಕ್ತಿಧಾಮದಂತಹ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ಹಲವು ವರ್ಷಗಳಿಂದ ಶಿವಣ್ಣ ಸಿನಿಮಾ ವ್ಯವಹಾರಗಳಲ್ಲಿ ಗೀತಾ ಶಿವರಾಜ್‌ಕುಮಾರ್ ಕೂಡ ತೊಡಗಿಸಿಕೊಂಡಿದ್ದಾರೆ.

ಇವರಿಬ್ಬರು 1986, ಮೇ 19ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್‌ಕುಮಾರ್. ಹೀಗಾಗಿ ಇದೊಂದು ಹೈ ಪ್ರೊಫೈಲ್ ಮದುವೆಯಾಗಿತ್ತು. ಅಣ್ಣಾವ್ರ ಪುತ್ರ ಹಾಗೂ ಬಂಗಾರಪ್ಪನವರ ಪುತ್ರಿ ಮದುವೆ ರಾಜ್ಯವೇ ಮಾತಾಡಿಕೊಳ್ಳುವಷ್ಟು ಗ್ರ್ಯಾಂಡ್ ಆಗಿ ನಡೆದಿತ್ತು. ಅಲ್ಲಿಂದ ಇಲ್ಲಿವರೆಗೂ ಯಶಸ್ವಿ 37 ವರ್ಷ ಸುಖದಾಂಪತ್ಯ ಜೀವನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದ್ವಿತೀಯ ಪುತ್ರಿ ನಿವೇದಿತಾ ಅಪ್ಪ-ಅಮ್ಮನಿಗೆ ಶುಭಕೋರಿದ್ದಾರೆ.

ಪುತ್ರಿ ನಿವೇದಿತಾ ಶುಭಾಶಯ

ಅಪ್ಪ-ಅಮ್ಮನ ಬಗ್ಗೆ ದ್ವಿತೀಯ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಪ್ರೀತಿಯಿಂದ ನಾಲ್ಕು ಸಾಲುಗಳನ್ನು ಬರೆದಿದ್ದಾರೆ. ಈ ಮೂಲಕ ನೆಚ್ಚಿನ ಪೋಷಕರಿಗೆ ಫೇಸ್‌ಬುಕ್‌ನಲ್ಲಿ ಪ್ರೀತಿಯ ಸಾಲುಗಳ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.

"ನಿಮ್ಮಿಬ್ಬರ ಮಧ್ಯೆ ಇರೋ ಮುಗ್ಧ ಸ್ನೇಹ, ಸ್ನೇಹವನ್ನ ಮೀರಿ ಇರೋ ಪ್ರೀತಿ ನೋಡ್ತಾ ಇದ್ದರೆ ಕಳೆದು ಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗೆ ಕಾಣಿಸುತ್ತೆ. ಜನುಮದ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಅಮ್ಮ-ಮಗಳು ಇಬ್ಬರು ನಿರ್ಮಾಪಕಿಯರು

ಶಿವರಾಜ್‌ಕುಮಾರ್ ಸಿನಿಮಾ ನಿರ್ಮಾಣ ಅಂತೆಲ್ಲ ಯೋಚನೆ ಮಾಡಿದವರೇ ಅಲ್ಲ. ಆದರೆ, ಪತ್ನಿ ಹಾಗೂ ಮಗಳು ನಿವೇದಿತಾ ಇಬ್ಬರೂ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಪಕಿಯರಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ನಿವೇದಿತಾ ಶಿವರಾಜ್‌ಕುಮಾರ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದು, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದಕ್ಕೂ ಹಿಂದೆ ನಿವೇದಿತಾ ವೆಬ್ ಸೀರಿಸ್‌ಗಳನ್ನು ನಿರ್ಮಾಣ ಮಾಡಿದ್ದರು. ಇವರೊಂದಿಗೆ ಇಡೀ ಕುಟುಂಬವೂ ಶಿವಣ್ಣ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದೆ.

More from Filmibeat

English summary
Shiva Rajkumar and wife Geetha's 37th Wedding Anniversary Daughter Niveditha Wish Goes Viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X