ರಾಮ್ ಚರಣ್ ಸಿನಿಮಾಗೆ ಶಿವಣ್ಣನ ಮನೆಯಲ್ಲೇ ನಡೀತು ಲುಕ್ ಟೆಸ್ಟ್: ಕ್ಯಾನ್ಸರ್ ಫ್ರೀ ಬಳಿಕ RC 16ಗೆ ಎಂಟ್ರಿ
ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಅನಾರೋಗ್ಯ ಬೆನ್ನಲ್ಲೇ ಒಂದಿಷ್ಟು ದಿನ ಶೂಟಿಂಗ್‌ಗೆ ಬ್ರೇಕ್ ಕೊಟ್ಟಿದ್ದರು. ಒಪ್ಪಿಕೊಂಡ ಸಿನಿಮಾಗಳಿಂದ ದೂರು ಉಳಿದಿದ್ದರು. ಅಮೆರಿಕಗೆ ತೆರಳಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಒಂದು ದಿನಗಳು ಯುಎಸ್‌ನಲ್ಲಿಯೇ ಇದ್ದು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿ ಹಿಂತಿರುಗಿದ್ದಾರೆ.
ಮೊದಲೇ ಹೇಳಿದಂತೆ ಶಿವಣ್ಣ ಸಂಪೂರ್ಣ ಗುಣಮುಖರಾಗಿ ಹಿಂತಿರುಗುತ್ತಿದ್ದಂತೆ ರಾಮ್ ಚರಣ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದರಂತೆ ಮತ್ತೆ ಕೆಲಸ ಆರಂಭ ಮಾಡಿದ್ದ ಬೆನ್ನಲ್ಲೇ ರಾಮ್ ಚರಣ್ ನಟಿಸುತ್ತಿರುವ 16ನೇ ಸಿನಿಮಾಗೆ ಲುಕ್ ಟೆಸ್ಟ್ ಕೊಟ್ಟಿದ್ದಾರೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

'ಉಪ್ಪೇನ'ದಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಆರ್‌ಸಿ 16ಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಶಿವಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣನ ಭಾಗದ ದೃಶ್ಯಗಳನ್ನು ಶೂಟ್ ಮಾಡುವುಕ್ಕೂ ಮುನ್ನ ಸಿನಿಮಾದ ನಿರ್ದೇಶಕ ಬಿಚ್ಚಿ ಬಾಬು ಸನಾ ಲುಕ್ ಟೆಸ್ಟ್ ಮಾಡಿದ್ದಾರೆ. ಶಿವಣ್ಣ ಲುಕ್ ಟೆಸ್ಟ್ ಹೇಗಿತ್ತು? ಶಿವಣ್ಣ ಹಾಗೂ ರಾಮ್ ಚರಣ್ ಮೊದಲ ಕಾಂಬಿನೇಷನ್ ಹೇಗಿರುತ್ತೆ? ಇದೆಲ್ಲದಕ್ಕೂ ಈ ಲುಕ್ ಟೆಸ್ಟ್ ಮೇಕಿಂಗ್ ಉತ್ತರ ಕೊಡಬಹುದು.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇಸ್ ಬ್ಯಾಕ್. ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದ ಶಿವಣ್ಣ ಈ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಈಗಾಗಲೇ ಒಪ್ಪಿಕೊಂಡಿದ್ದ ಒಂದೊಂದೇ ಸಿನಿಮಾವನ್ನು ಮತ್ತೆ ಕೈಗೆತ್ತಿಕೊಳ್ಳುತ್ತಿದ್ದಾರೆ. ಮತ್ತೆ ಬಣ್ಣ ಹಚ್ಚುವುದಕ್ಕೆ ಉತ್ಸಾಹದಿಂದ ರೆಡಿಯಾಗಿದ್ದಾರೆ. ಅಮೆರಿಕಗೆ ತೆರಳುವುದಕ್ಕೂ ಮುನ್ನವೇ ಒಪ್ಪಿಕೊಂಡಿದ್ದ ಸಿನಿಮಾ ಆರ್ ಸಿ 16. ಈ ಸಿನಿಮಾ ವಿಶೇಷ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಬೇಕಿತ್ತು. ಅಷ್ಟರಲ್ಲೇ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಪೋಸ್ಟ್‌ಪೋನ್ ಮಾಡಲಾಗಿತ್ತು.
ರಾಮ್ ಚರಣ್ ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು ಸನಾ ಶಿವಣ್ಣ ಗುಣಮುಖರಾಗಿ ಬರುವವರೆಗೂ ಕಾದ್ದಿದ್ದು, ಈಗ ಲುಕ್ ಟೆಸ್ಟ್ ಮಾಡಿದ್ದಾರೆ. ನಾಗಾವರದಲ್ಲಿರುವ ಶಿವಣ್ಣನ ಮನೆಗೆ ಅವರ ತಂಡ ಸಮೇತ ಬಂದು ಗೆಟಪ್ ಹಾಕಿ ಅವರಿಗೆ ಲುಕ್ ಟೆಸ್ಟ್ ಮಾಡಲಾಗಿದೆ. ಈ ವಿಷಯವನ್ನು ಸ್ವತ: ನಿರ್ಮಾಣ ಸಂಸ್ಥೆಯೇ ಒಂದು ವಿಡಿಯೋ ಮಾಡಿ ರಿಲೀಸ್ ಮಾಡಿದೆ. ವೃದ್ಧಿ ಸಿನಿಮಾಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಲುಕ್ ಟೆಸ್ಟ್ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ.
ರಾಮ್ ಚರಣ್, ಜಾಹ್ನವಿ ಕಪೂರ್ ನಟಿಸುತ್ತಿರುವ 'ಆರ್ ಸಿ 16' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಜೈಲರ್' ಬಳಿಕ ಶಿವರಾಜ್‌ಕುಮಾರ್‌ಗೆ ಪರ ಭಾಷೆಯ ಸಿನಿಮಾಗಳಲ್ಲೂ ಬೇಡಿಕೆ ಹೆಚ್ಚಾಗಿದ್ದು, ತಮಿಳು ಹಾಗೂ ತೆಲುಗು ಭಾಷೆಯ ಚಿತ್ರರಂಗದಿಂದ ಒಳ್ಳೊಳ್ಳೆ ಆಫರ್‌ಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲಿ ರಾಮ್ ಚರಣ್ ಸಿನಿಮಾ ಕೂಡ ಒಂದು.
ಲುಕ್ ಟೆಸ್ಟ್ ಬಳಿಕ ಶಿವಣ್ಣ ಶೀಘ್ರದಲ್ಲಿ ಶೂಟಿಂಗ್‌ಗೆ ಹಾಜರಾಗಲಿದ್ದಾರೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಅಂದ್ಹಾಗೆ ಈ ಸಿನಿಮಾದಲ್ಲಿ ತೆಲುಗಿನ ಹಿರಿಯ ನಟ ಜಗಪತಿ ಬಾಬು, ಮಿರ್ಜಾಪುರ್ ಖ್ಯಾತಿಯ ದಿವ್ಯಂದು ಸೇರಿದಂತೆ ಇನ್ನೂ ಹಲವು ಮಂದಿ ನಟರು ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ವೃದ್ಧಿ ಸಿನಿಮಾಸ್, ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.


Click it and Unblock the Notifications











