ದರ್ಶನ್ ಆರೋಗ್ಯ ವಿಚಾರಿಸಿದ ಶಿವರಾಜ್ ಕುಮಾರ್

Recommended Video

ದರ್ಶನ್ ಆರೋಗ್ಯ ವಿಚಾರಿಸಿದ ಶಿವರಾಜ್‌ಕುಮಾರ್..! | Filmibeat Kannada

ಕಾರು ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆರೋಗ್ಯವನ್ನ ವಿಚಾರಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಮೈಸೂರಿಗೆ ಆಗಮಿಸಿದ್ದರು.

ಆಸ್ಪತ್ರೆಯಲ್ಲಿ ದರ್ಶನ್ ಅವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ಶಿವರಾಜ್ ಕುಮಾರ್, ''ನಾನು ದರ್ಶನ್ ಜೊತೆ ಮಾತನಾಡಿದೆ. ಅವರು ಚೆನ್ನಾಗಿದ್ದಾರೆ. ದರ್ಶನ್ ಗೆ ಚಾಮುಂಡೇಶ್ವರಿ ತಾಯಿಯ ಆರ್ಶೀವಾದ ಇದೆ. ಏನೂ ಆಗಲ್ಲ'' ಎಂದರು.

''ಸ್ವಲ್ಪ ನೋವಿತ್ತು. ಈಗ ಆರಾಮಾಗಿದ್ದಾರೆ. ಆಪರೇಷನ್ ಆಗಿದೆ ಅಲ್ವಾ, ಹಾಗಾಗಿ ವಿಶ್ರಾಂತಿ ಬೇಕಾಗಿದೆ. . ಮಧ್ಯಾಹ್ನ ಬರಬೇಕಿತ್ತು, ಶೂಟಿಂಗ್ ಇತ್ತು ಆಗಲಿಲ್ಲ. ಈಗ ದೇವರಾಜ್ ಅವರು ಡಿಸ್ಚಾರ್ಜ್ ಆಗಿದ್ದಾರೆ. ಫೋನ್ ಮಾಡ್ತೀನಿ. ಬೆಂಗಳೂರಿಗೆ ಹೋದಾಗ ಭೇಟಿ ಮಾಡ್ತೀನಿ'' ಎಂದರು.

shiva rajkumar meet darshan in hospital

ಇಂದು ಮಧ್ಯಾಹ್ನ ನಟ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಒಂದೆರಡು ದಿನ ದರ್ಶನ್ ಆಸ್ಪತ್ರೆಯಲ್ಲೇ ಉಳಿಯಬೇಕಿದೆ ಎಂದು ವೈದ್ಯರು ಸೂಚಿಸಿದ್ದಾರೆ.

ಇನ್ನುಳಿದಂತೆ ನಟ ಸೃಜನ್ ಲೋಕೇಶ್, ಆದಿತ್ಯ, ಧ್ರುವ ಸರ್ಜಾ, ನಿರ್ಮಾಪಮ ಸಂದೇಶ ನಾಗರಾಜ್, ಮುನಿರತ್ನ, ಸೇರಿದಂತೆ ಹಲವ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ.

More from Filmibeat

English summary
Kannada Actor Darshan is fine says shiva rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X