ಶಿವಣ್ಣ ಕ್ಯಾನ್ಸರ್ ಗೆದ್ದ ಒಂದು ವರ್ಷ; '45' ರಿಲೀಸ್‌ಗೂ ಮುನ್ನ ಪತ್ರ ಬರೆದ ಸೆಂಚುರಿ ಸ್ಟಾರ್
ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ 2024 ಕರಾಳ ವರ್ಷವಾಗಿತ್ತು. ಎವರ್‌ಗ್ರೀನ್ ಶಿವಣ್ಣ ತನಗೆ ಕ್ಯಾನ್ಸರ್ ತಗುಲಿದ ವಿಷಯವನ್ನು ಬಹಿರಂಗವಾಗಿ ಅನೌನ್ಸ್ ಮಾಡಿದಾಗ ಫ್ಯಾನ್ಸ್‌ಗಳು ಕಂಗಾಲಾಗಿ ಹೋಗಿದ್ದರು. ಮುಂದೆ ಏನು ಅನ್ನೋದು ತೋಚದೇ ಮಂಕಾಗಿ ಹೋಗಿದ್ದರು. ಆದರೆ, ಶಿವಣ್ಣನಿಗೆ ಧೈರ್ಯ ತುಂಬುವುದಕ್ಕೆ ದೊಡ್ಡ ಸೈನ್ಯವೇ ನಿಂತಿತ್ತು. ಅವರ ಎದುರಿಸುತ್ತಿದ್ದ ಸವಾಲಿನ ಪ್ರತಿಯೊಂದು ಕ್ಷಣದಲ್ಲಿಯೂ ದೊಡ್ಡ ಗುಂಪೇ ನಿಂತಿತ್ತು.
ಶಿವರಾಜ್‌ಕುಮಾರ್ ಕೂಡ ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಳ್ಳುವುದಕ್ಕೆ ರೆಡಿಯಿರಲಿಲ್ಲ. ಕ್ಯಾನ್ಸರ್ ವಿರುದ್ಧ ದಿಟ್ಟವಾಗಿ ಹೋರಾಡುತ್ತಿದ್ದರು. ಶಿವಣ್ಣ ಅಭಿಮಾನಿಗಳು, ಆಪ್ತರು, ಕುಟುಂಬಸ್ಥರು, ಗೀತಾ ಶಿವರಾಜ್‌ಕುಮಾರ್, ಪುತ್ರಿಯರು, ಅಳಿಯ ಸೇರಿದಂತೆ ಎಲ್ಲರೂ ಪ್ರತಿ ಕ್ಷಣವೂ ಧೈರ್ಯ ತುಂಬಿದ್ದರು. ಅದರ ಪರಿಣಾಮ ಶಿವಣ್ಣ ಕ್ಯಾನ್ಸರ್ ಗೆದ್ದು ಬಂದಿದ್ದರು.

ಇದೇ ದಿನ ಅಂದರೆ, ಡಿಸೆಂಬರ್ 24ರಂದು ಶಿವರಾಜ್‌ಕುಮಾರ್ ಕ್ಯಾನ್ಸರ್‌ನಿಂದ ಮುಕ್ತಿ ಪಡೆದಿದ್ದರು. ಇಂದಿಗೆ ಒಂದು ವರ್ಷ. ಆ ಸವಾಲಿನ ದಿನವನ್ನು ಶಿವರಾಜ್‌ಕುಮಾರ್ ನೆನೆದು ಭಾವುಕರಾಗಿದ್ದಾರೆ. ತನ್ನ ಬದುಕಿನ ಸವಾಲಿನ ದಿನಗಳಲ್ಲಿ ಜೊತೆಯಾಗಿ ನಿಂತಿದ್ದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಭಾವುಕರಾಗಿ ಬಹಿರಂಗ ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಆ ಪತ್ರದಲ್ಲಿ ಏನಿದೆ ಎಂದು ನೋಡುವುದಾರೇ,
2024ರಂದು ಶಿವರಾಜ್‌ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿನ ವೈದ್ಯರು ಶಿವಣ್ಣನಿಗೆ ಭರವಸೆಯನ್ನು ನೀಡಿದ್ದರು. ಇಲ್ಲಿ ಶಿವಣ್ಣ ಆರೋಗ್ಯವಾಗಿ ಮರಳಿ ಬರಲಿ ಎಂದು ಅಭಿಮಾನಿಗಳು ಹಾಗೂ ಹಿತೈಶಿಗಳು ಪ್ರಾರ್ಥನೆ ಮಾಡಿದ್ದರು. ವೈದ್ಯರ ಶ್ರಮ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಿತ್ತು. ಹೀಗಾಗಿ ಆ ಒಂದು ವರ್ಷದ ಸವಾಲಿನ ದಿನಗಳ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.
"ನನ್ನ ಜೀವನದ ಬಹು ದೊಡ್ಡ ಸವಾಲಿಗೆ ಇಂದು ಒಂದು ವರ್ಷ. ನಾನು ಮತ್ತೆ ಅದೇ ಚೇತನದಿಂದ ಮುನ್ನಡೆಯಲು ಸಾಧ್ಯವಾದದು ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ. ಡಾ.ಮನೋಹರನ್ ಮುರುಗೇಶನ್ ಮತ್ತು ತಂಡ, ಡಾ.ದಿಲೀಪ್, ಡಾ.ಶಶಿಧರ್, ಡಾ.ವಿ.ಕೆ ಶ್ರೀನಿವಾಸ್, ಡಾ. ಯೋಗಿತಾ ಮತ್ತು ಡಾ.ಅನಿತಾ ಧರ್ಮಲಿಂಗಂ ಅವರಿಗೆ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿಗೆ ಸದಾ ಚಿರಋಣಿ. ನಿಮ್ಮ ಶಿವಣ್ಣ." ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇತ್ತ ಶಿವರಾಜ್‌ಕುಮಾರ್ ಅಭಿನಯದ '45' ಸಿನಿಮಾ ರಿಲೀಸ್ ಆಗುತ್ತಿದೆ. ಶಿವರಾಜ್‌ಕುಮಾರ್ ಶಸ್ತ್ರ ಚಿಕಿತ್ಸೆ ಒಳಗಾದ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾವಿದು. ಈ ಸಿನಿಮಾ ಶೂಟಿಂಗ್ ನಡೆಯುತ್ತಿರುವ ವೇಳೆನೇ ಶಿವಣ್ಣನಿಗೆ ಕ್ಯಾನ್ಸರ್ ಇರೋದು ಗೊತ್ತಾಗಿತ್ತು. ಆದರೂ, ಸಿನಿಮಾಗೆ ತೊಂದರೆ ಆಗಬಾರದೆಂದು ಶಿವಣ್ಣ ಆ ಕಷ್ಟದ ದಿನಗಳಲ್ಲೂ ಶೂಟಿಂಗ್ ಅನ್ನು ಮುಂದುವರೆಸಿದ್ದರು.
ನಿರ್ದೇಶಕ ಅರ್ಜುನ್ ಜನ್ಯ ಶೂಟಿಂಗ್ ಬೇಡವೆಂದು ನಿಲ್ಲಿಸುವುದಕ್ಕೆ ಮುಂದಾಗಿದ್ದರು. ಆದರೂ, ಅದನ್ನು ಒಪ್ಪದ ಶಿವಣ್ಣ ಚಿಕಿತ್ಸೆ ನಡೆಯುತ್ತಿರುವಾಗಲೇ ಚಿತ್ರೀಕರಣವನ್ನು ಮುಂದುವರೆಸಿದ್ದರು. ಕ್ಯಾನ್ಸರ್‌ನಿಂದ ಗುಣಮುಖರಾಗಿ ಈಗ ಅದೇ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇಂದು (ಡಿಸೆಂಬರ್ 24) '45' ಸಿನಿಮಾದ ಪೇಯ್ಡ್ ಪ್ರೀಮಿಯರ್ ಇದ್ದು, ನಾಳೆಯಿಂದ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.


Click it and Unblock the Notifications











