ಟ್ರೈಲರ್ ನಲ್ಲಿ ರಿವಿಲ್ ಆಯ್ತು 'ಬಂಗಾರದ ಮನುಷ್ಯ'ನ ವಿಶೇಷತೆಗಳು
ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಇಂದು ಡಬಲ್ ಧಮಾಕ. ಯಾಕಂದ್ರೆ ಇತ್ತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ತೆರೆ ಮೇಲೆ ಅಪ್ಪಳಿಸಿದ್ರೆ, ಇನ್ನೊಂದು ಕಡೆ ಯೂಟ್ಯೂಬ್ ನಲ್ಲಿ ಶಿವಣ್ಣನ 'ಬಂಗಾರ s/o ಬಂಗಾರದ ಮನುಷ್ಯ' ಅಫೀಶಿಯಲ್ ಟ್ರೈಲರ್ ಬಿಡುಗಡೆ ಆಗಿದೆ. ಆದ್ದರಿಂದ ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಇದು ಒಂದು ರೀತಿಯ ವಿಶೇಷತೆ ಎಂದರೆ ತಪ್ಪಾಗಲಾರದು.[ಶಿವಣ್ಣನ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಟೀಸರ್ ಔಟ್]
ಈ ಹಿಂದೆ ಬಿಡುಗಡೆ ಆಗಿದ್ದ ಕೇವಲ 54 ಸೆಕೆಂಡ್ ಟೀಸರ್ ನಲ್ಲಿ ಖಡಕ್ ಡೈಲಾಗ್ ಹೊಡೆಯುವ ಮೂಲಕ, ಮೈನವಿರೇಳಿಸುವ ಫೈಟ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈಗ ಬಿಡುಗಡೆ ಆಗಿರುವ ಚಿತ್ರದ ಅಫೀಶಿಯಲ್ ಟ್ರೈಲರ್ ನಲ್ಲಿ ಶಿವಣ್ಣ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಎರಡೂ ಲುಕ್ ಗಳಲ್ಲಿ ಮಿಂಚಿದ್ದಾರೆ. ಅಲ್ಲದೇ ಚಿತ್ರ ಹಲವು ವಿಶೇಷತೆಗಳಿಂದ ಕೂಡಿದ್ದು, ಆ ಡೀಟೇಲ್ಸ್ ಇಲ್ಲಿದೆ ನೋಡಿ.

ಜನರ ಪರವಾಗಿ ನಿಂತ ಶಿವಣ್ಣ
ಕರುನಾಡ ಚಕ್ರವರ್ತಿ ಶಿವಣ್ಣ 'ಶೀಕಂಠ' ಚಿತ್ರದ ನಂತರ ಮೊತ್ತೊಮ್ಮೆ ಜನ ಸಾಮಾನ್ಯರಿಗಾಗಿ ಸಿಡಿದೇಳುವ ಜನರ ನಾಯಕನಾಗಿ 'ಬಂಗಾರ s/o ಬಂಗಾರದ ಮನುಷ್ಯ' ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರನ್ನು ತೋರಿಸಿರುವ ಕ್ಲಾಸ್ ಲುಕ್ ಚಿತ್ರದ ಬಗ್ಗೆ ಕುತೂಹಲ ಕೆರಳಸಿದೆ.

ಎನ್ ಆರ್ ಐ ಪಾತ್ರದಲ್ಲಿ ಕಾಮನ್ ಮ್ಯಾನ್
ಅಂದಹಾಗೆ ಶಿವಣ್ಣ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದಲ್ಲಿ ಎನ್ ಆರ್ ಐ ಪಾತ್ರದಲ್ಲಿ, ಕಾಮನ್ ಮ್ಯಾನ್ ಗಳ ಸಮಸ್ಯೆಗೆ ಸ್ಪಂದಿಸುವ ಬಂಗಾರದ ಮನುಷ್ಯನಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಶಿವಣ್ಣನನ್ನು ಕಳೆದ ಎರಡು-ಮೂರು ವರ್ಷಗಳಲ್ಲಿ ಮೂಡಿಬಂದ ಸಿನಿಮಾಗಳಲ್ಲಿ ಶಿವಣ್ಣ ನಿರ್ವಹಿಸಿದ ಪಾತ್ರಗಳಿಗಿಂತ, ವಿಭಿನ್ನವಾಗಿ ಮತ್ತು ಹೆಚ್ಚು ರಿಚ್ ನೆಸ್ ಲುಕ್ ನಲ್ಲಿ 'ಬಂಗಾರ s/o ಬಂಗಾರದ ಮನುಷ್ಯ' ಹೆಸರಿಗೆ ತಕ್ಕಂತೆ ಶಿವಣ್ಣ ಅವರನ್ನು ತೋರಿಸಲಾಗಿದೆ.

ಕಾಮಿಡಿ ಡಬಲ್ ಧಮಾಕ
ಇನ್ನೂ ಹಾಸ್ಯದ ಬಗ್ಗೆ ಹೇಳುವುದಾದರೆ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದಲ್ಲಿ ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ಗಳಾದ ಸಾಧು ಕೋಕಿಲ ಮತ್ತು ಚಿಕ್ಕಣ್ಣ ಅಭಿನಯಿಸಿದ್ದಾರೆ. ಟೈಟಲ್ ಗೆ ತಕ್ಕ ಗಾಂಭೀರ್ಯತೆ ಚಿತ್ರದ ಟ್ರೈಲರ್ ನಲ್ಲೇ ಕಂಡುಬಂದಿದ್ದು, ಅಷ್ಟೇ ಮಟ್ಟದಲ್ಲಿ ಪ್ರೇಕ್ಷಕರನ್ನು ನಗಿಸಲು ಹಾಸ್ಯನಟರ ಕಾಂಬಿನೇಷನ್ ಇದೆ.

ನಾಯಕಿಯಾಗಿ ವಿದ್ಯಾ ಪ್ರದೀಪ್
ಚಿತ್ರದಲ್ಲಿ 'ಬಂಗಾರ s/o ಬಂಗಾರದ ಮನುಷ್ಯ'ನಿಗೆ ಜೋಡಿಯಾಗಿ ತಮಿಳು ನಟಿ ವಿದ್ಯಾ ಪ್ರದೀಪ್ ಕಾಣಿಸಿಕೊಂಡಿದ್ದಾರೆ. 2010 ರಲ್ಲಿ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು ಈ ವರೆಗೆ 10 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸ್ಯಾಂಡಲ್ ವುಡ್ ಗೆ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದ ಮೂಲಕ ಮೊದಲು ಎಂಟ್ರಿಕೊಟ್ಟಿರುವುದು.

ಬಂಗಾರದ ಮನುಷ್ಯನಿಗೆ ವಿಲನ್ ಆಗಿ ಅನಿಲ್
'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾಗಿದ್ದ ಖಳನಟ ಅನಿಲ್ 'ಬಂಗಾರ s/o ಬಂಗಾರದ ಮನುಷ್ಯ' ಶಿವಣ್ಣನಿಗೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಶರತ್ ಲೋಹಿತಾಶ್ವ ಸಹ ಖಳನಟರಾಗಿ ನಟಿಸಿದ್ದಾರೆ.

ಬಹುದೊಡ್ಡ ತಾರಾಬಳಗ
ಚಿತ್ರದಲ್ಲಿ ಶಿವಣ್ಣ ನಿಗೆ ವಿದ್ಯಾ ಪ್ರದೀಪ್ ಕಾಂಬಿನೇಷನ್ ಆಗಿದ್ದಾರೆ. ಉಳಿದಂತೆ ದೊಡ್ಡ ತಾರಾಬಳಗವೇ ಇದ್ದು ವಿಶಾಲ್ ಹೆಗಡೆ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ.

ಯೋಗಿ ಜಿ ರಾಜ್ ಆಕ್ಷನ್ ಕಟ್
ಈ ಹಿಂದೆ ಗಣೇಶ್ ಅಭಿನಯದ 'ಖುಷಿ ಖುಷಿಯಾಗಿ' ಚಿತ್ರ ನಿರ್ದೇಶನ ಮಾಡಿದ್ದ ಯೋಗಿ ಜಿ ರಾಜ್ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ಚಿತ್ರ ನಿರ್ಮಾಣ ಮಾಡಿದ್ದು, ವಿ.ಹರಿಕೃಷ್ಣ ಅವರ ಸಂಗೀತವಿದೆ. ಜೈ ಆನಂದ್ ಛಾಯಾಗ್ರಹಣ, ಡಾ.ಕೆ ರವಿವರ್ಮ ಮತ್ತು ಮಾಸ್ ಮಾಧ ಸ್ಟಂಟ್ಸ್ ಚಿತ್ರಕ್ಕಿದೆ.
'ಬಂಗಾರ s/o ಬಂಗಾರದ ಮನುಷ್ಯ' ಚಿತ್ರ ಅಫೀಶಿಯಲ್ ಟ್ರೈಲರ್ ನೋಡಿ..


Click it and Unblock the Notifications











