»   »  ಶಿವಣ್ಣನ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಟೀಸರ್ ಔಟ್

ಶಿವಣ್ಣನ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಟೀಸರ್ ಔಟ್

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಟೀಸರ್ ಫೆಬ್ರವರಿ 24 ರಂದು ರಿಲೀಸ್ ಆಗುತ್ತಿದೆ ಎಂದು ನಿಮ್ಮ ಕನ್ನಡ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಆದರೆ ಸರ್ ಪ್ರೈಸ್ ಕೊಟ್ಟಿರುವ ಚಿತ್ರತಂಡ ಇಂದೇ(ಫೆ.23) ಟೀಸರ್ ರಿಲೀಸ್ ಮಾಡಿದೆ.[ಶಿವಣ್ಣ ಭಕ್ತರಿಗೆ 'ಶಿವರಾತ್ರಿ ಹಬ್ಬ'ದಂದು ಭರ್ಜರಿ ಕೊಡುಗೆ]

ವಿಶೇಷ ಅಂದ್ರೆ ಯೋಗಿ ಜಿ ರಾಜ್ ಆಕ್ಷನ್ ಕಟ್ ಹೇಳಿರುವ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಟೀಸರ್ ಯೂಟ್ಯೂಬ್ ಮತ್ತು 'ಹೆಬ್ಬುಲಿ' ಪ್ರದರ್ಶನ ಆಗುತ್ತಿರುವ ಥಿಯೇಟರ್ ಗಳಲ್ಲಿ ಒಂದೇ ಸಮಯಕ್ಕೆ ಲಾಂಚ್ ಆಗಿದೆ. 'ಹೆಬ್ಬುಲಿ' ಚಿತ್ರ ನೋಡಲು ಹೋದವರೆಲ್ಲಾ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಟೀಸರ್ ಅನ್ನು ಕಣ್ತುಂಬಿಕೊಳ್ಳಬಹುದು. 54 ಸೆಕೆಂಡ್ ಇರುವ ಟೀಸರ್ ನಲ್ಲಿ. 'ಶ್ರೀಕಂಠ' ಚಿತ್ರದ ನಂತರ ಶಿವಣ್ಣ ಮತ್ತೊಮ್ಮೆ ಜನ ಸಾಮಾನ್ಯರಿಗಾಗಿ ಸಿಡಿದೇಳುವ ಜನರ ನಾಯಕನಾಗಿ ಕಾಣಿಸಿಕೊಂಡಿದ್ದು, ಅದ್ಧೂರಿ ಫೈಟ್ ಸಹ ಇದೆ.

'Bangara s/o Bangaradha Manushya' Official Teaser

"ರಾಜ್.. ಶಿವರಾಜ್.. ಶಿವ ಅಂದ್ರೆ ಭಕ್ತಿ ಇರಬೇಕು. ರಾಜ ಅಂದ್ರೆ ಶಕ್ತಿ ಇರಬೇಕು. ಇವೆರಡು ಇರೋ ನನ್ನನ್ನ ಎದ್ರಾಕೋಳ್ಳೋಕೆ ಎರಡು ಗುಂಡಿಗೆ ಇರ್ ಬೇಕು" ಎನ್ನುವ ಖಡಕ್ ಡೈಲಾಗ್ ನೊಂದಿಗೆ, ಮತ್ತೊಮ್ಮೆ ಶಿವಣ್ಣ ಕಾಮನ್ ಮ್ಯಾನ್‌ ಗಳ ಪರ ನಿಲ್ಲುವ ಅದ್ಭುತವಾದ ದೃಶ್ಯವೊಂದು ಟೀಸರ್ ನಲ್ಲಿದೆ.['ಬಂಗಾರದ ಮನುಷ್ಯ'ನ ಜೋಡಿಯಾಗೋ ಚೆಂದುಳ್ಳಿ ಚೆಲುವೆ ಈಕೆ]

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋಗೆ ವಿದ್ಯಾ ಪ್ರದೀಪ್ ನಾಯಕಿಯಾಗಿದ್ದಾರೆ. ಉಳಿದಂತೆ ವಿಶಾಲ್ ಹೆಗಡೆ, ಸಾಧು ಕೋಕಿಲಾ, ಚಿಕ್ಕಣ್ಣ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ಚಿತ್ರ ನಿರ್ಮಾಣ ಮಾಡಿದ್ದು, ವಿ.ಹರಿಕೃಷ್ಣ ಅವರ ಸಂಗೀತವಿದೆ. ಜೈ ಆನಂದ್ ಛಾಯಾಗ್ರಹಣ, ಡಾ.ಕೆ ರವಿವರ್ಮ ಮತ್ತು ಮಾಸ್ ಮಾಧ ಸ್ಟಂಟ್ಸ್ ಚಿತ್ರಕ್ಕಿದೆ.

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಟೀಸರ್ ನೋಡಿ

English summary
Kannada Actor Shiva Rajkumar Starrer 'Bangara s/o Bangaradha Manushya' Official Teaser Released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada