»   » ಚಿತ್ರದ ಮಹೂರ್ತದಲ್ಲಿ ಒಂದಾದ ಶಿವಣ್ಣ, ಯಶ್, ದರ್ಶನ್

ಚಿತ್ರದ ಮಹೂರ್ತದಲ್ಲಿ ಒಂದಾದ ಶಿವಣ್ಣ, ಯಶ್, ದರ್ಶನ್

Posted By:
Subscribe to Filmibeat Kannada

ರಾಜ್ಯದ ಮೂವರು ಪ್ರಮುಖ ರಾಜಕಾರಣಿಗಳ ಸುಪುತ್ರರು ಕನ್ನಡ ಬೆಳ್ಳಿತೆರೆಗೆ ಎಂಟ್ರಿ ಕೊಡಲು ಸರ್ವಸನ್ನದ್ದರಾಗಿದ್ದಾರೆ.

ಕುಮಾರಸ್ವಾಮಿ ಪುತ್ರ ನಿಖಿಲ್, ಕಾಂಗ್ರೆಸ್ ಮುಖಂಡ ರೇವಣ್ಣ ಅವರ ಪುತ್ರ ಅನೂಪ್, ಜೆಡಿಎಸ್ ಮುಖಂಡ ಚೆಲವರಾಯಸ್ವಾಮಿ ಮಗ ಸಚಿನ್ ಬಣ್ಣಹಚ್ಚಲು ಸಜ್ಜಾಗಿದ್ದಾರೆ.

Shivanna, Darshan, Yash together in Happy Birthday movie Mahurtha

ಇದರಲ್ಲಿ ಕುಮಾರಸ್ವಾಮಿ ಮಗನ ಚಿತ್ರಕ್ಕೆ ಮಹೂರ್ತ ಇನ್ನೂ ಫಿಕ್ಸ್ ಆಗಿಲ್ಲ. ಅನೂಪ್ ಮತ್ತು ಸಚಿನ್ ಚಿತ್ರಗಳ ಮಹೂರ್ತ ಭರ್ಜರಿಯಾಗಿ ಶುಕ್ರವಾರ (ಜೂ 12) ನೆರವೇರಿದೆ. (ಆಷಾಡಕ್ಕೆ ಮುನ್ನ ಚಿತ್ರೋದ್ಯಮದಲ್ಲಿ ಏನಿದು ಕಲರವ)

ಚೆಲುವರಾಯಸ್ವಾಮಿ ಮಗನ ಚಿತ್ರ 'ಹ್ಯಾಪಿ ಬರ್ತಡೇ' ಚಿತ್ರದ ಮಹೂರ್ತ ಕಾರ್ಯಕ್ರಮಕ್ಕೆ ರಾಜಾಕಾರಣಿ, ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಚಿತ್ರದ ಮೊದಲ ದೃಶ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡ ಕ್ಲಾಪ್ ಮಾಡಿದರು. ಕುಮಾರಸ್ವಾಮಿ, ಅಂಬರೀಶ್ ಸೇರಿದಂತೆ ರಾಜಕಾರಣಿಗಳು ದಂಡೇ ಮಹೂರ್ತದ ಸಂದರ್ಭದಲ್ಲಿ ಜಮಾಯಿಸಿತ್ತು,

ಇನ್ನು ಚಿತ್ರೋದ್ಯಮದ ಹಲವರು ಮಹೂರ್ತ ಕಾರ್ಯಕ್ರಮದಲ್ಲಿ ಹಾಜರಿದ್ದು ಹೊಸ ಚಿತ್ರಕ್ಕೆ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ.

Shivanna, Darshan, Yash together in Happy Birthday movie Mahurtha

ಚಿತ್ರದ ಮಹೂರ್ತಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕ್ಷಿಯಾದರು.

ಮಾಲೆ ಧರಿಸಿದ್ದ ದರ್ಶನ್, ಹ್ಯಾಪಿ ಬರ್ತಡೇ ಚಿತ್ರದ ನಾಯಕ ಸಚಿನ್, ನಿರ್ಮಲಾನಂದ ಶ್ರೀ, ಚೆಲುವರಾಯಸ್ವಾಮಿ, ಶಿವಣ್ಣ, ಯಶ್ ಜೊತೆ ಫೋಟೋಗೆ ಫೋಸ್ ನೀಡಿದರು.

ಸುಖಧರೆ ಫಿಲಂಸ್ ಬ್ಯಾನರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಮಹೇಶ್ ಸುಖಧರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

English summary
Shivanna, Darshan, Yash together in 'Happy Birthday' movie Mahurtha. JDS leader Cheluvarayaswamy son Sachin is in lead role in this movie and Mahesh Sukhadhare directing this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada