twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನ 125ನೇ ಸಿನಿಮಾ 'ವೇದ'ಗೆ ಭರ್ಜರಿ ರೆಸ್ಪಾನ್ಸ್? ಮೊದಲ ದಿನದ ಅಂದಾಜು ಗಳಿಕೆ ಎಷ್ಟು?

    |

    ಇದೇ ಮೊದಲ ಬಾರಿಗೆ ಗೀತಾ ಶಿವರಾಜ್‌ಕುಮಾರ್ ಹಾಗೂ ಜೀ ಸ್ಟುಡಿಯೋಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದು ಶಿವಣ್ಣನ 125ನೇ ಸಿನಿಮಾ ಕೂಡ ಹೌದು. ಎ.ಹರ್ಷ ನಿರ್ದೇಶಿಸಿರೋ ಬಹು‌ ನಿರೀಕ್ಷಿತ ಸಿನಿಮಾ 'ವೇದ' ಈ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

    125ನೇ ಸಿನಿಮಾ 'ವೇದ'ದಲ್ಲಿ ಶಿವರಾಜ್‌ಕುಮಾರ್, ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತ ಚಂಗಪ್ಪ, ಚೆಲುವರಾಜು, ರಾಘು ಶಿವಮೊಗ್ಗ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಶಿವಣ್ಣ ಜೊತೆಯಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಗಳಿಗೆ ಪ್ರೇಕ್ಷಕರು ಮನಸೋತಿದ್ದಾರೆ.

    ಅರ್ಜುನ್ ಜನ್ಯ ಸಂಗೀತ, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಎಡಿಟಿಂಗ್ ಸಿನಿಮಾಗೆ ಪ್ಲಸ್ ಪಾಯಿಂಟ್. ಹಾಗೇ ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ ‌‌, ಅರ್ಜುನ್ ರಾಜ್ ನಿರ್ದೇಶಿಸಿರೋ ಆಕ್ಷನ್ ಸೀನ್‌ಗಳಿಗೆ ಪ್ರೇಕ್ಷಕರು ಮನಸಾರೆ ಶಿಳ್ಳೆ ಹಾಕಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಎಕ್ಸಲೆಂಟ್ ಅಂತಿದ್ದಾರೆ. ಮೊದಲ ದಿನವೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿರೋ ಸಿನಿಮಾ ಕಲೆಕ್ಷನ್ ಬಗ್ಗೆ ಟ್ರೇಡ್ ಅನಲಿಸ್ಟ್ ಈಗಾಗಲೇ ಒಂದು ಲೆಕ್ಕಾಚಾರ ಹಾಕಿದ್ದಾರೆ.

    'ವೇದ' ಕಲೆಕ್ಷನ್ ಬಗ್ಗೆ ನಿರೀಕ್ಷೆ ಹೇಗಿದೆ?

    'ವೇದ' ಕಲೆಕ್ಷನ್ ಬಗ್ಗೆ ನಿರೀಕ್ಷೆ ಹೇಗಿದೆ?

    ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 125ನೇ ಸಿನಿಮಾ ರಿಲೀಸ್ ಆಗಿದೆ. ಆದರೆ, ಬಿಡುಗಡೆಗೂ ಮುನ್ನವೇ 'ವೇದ' ಟ್ರೈಲರ್ ಹಾಗೂ ಹಾಡುಗಳು ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಹೀಗಾಗಿ ಮೊದಲ ದಿನದ ಗಳಿಕೆ ಮೇಲೆ ಹೆಚ್ಚು ನಿರೀಕ್ಷೆ ಇತ್ತು. ಇನ್ನೊಂದು ಕಡೆ 2022ರಲ್ಲಿ ರಿಲೀಸ್ ಆಗುತ್ತಿರುವ ಕೊನೆಯ ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಮೊದಲ ದಿನ ಒಳ್ಳೆ ಕಲೆಕ್ಷನ್ ಆಗುತ್ತೆ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಮೊದಲ ದಿನ ಉತ್ತಮ ಗಳಿಕೆ ಕಂಡಿದೆ.

    'ವೇದ' ಅಂದಾಜು ಗಳಿಕೆ ಎಷ್ಟು?

    'ವೇದ' ಅಂದಾಜು ಗಳಿಕೆ ಎಷ್ಟು?

    ಶಿವರಾಜ್‌ಕುಮಾರ್ 125ನೇ ಸಿನಿಮಾ 'ವೇದ' ಬಗ್ಗೆ ಟ್ರೇಡ್ ಅನಲಿಸ್ಟ್ ಒಂದು ಲೆಕ್ಕಾಚಾರ ಹಾಕಿದ್ದರು. ಮೊದಲ ದಿನ ಅಂದಾಜು ಸುಮಾರು 3 ರಿಂದ 4 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎನ್ನಲಾಗಿತ್ತು. ಕರ್ನಾಟಕದ ವಿತರಕರ ಪ್ರಕಾರ, 'ವೇದ' ಮೊದಲ ದಿನವೇ 3.7 ಕೋಟಿ ರೂ. ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದೆ ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ ಅಷ್ಟೇ.

    60 ದಶಕದ ಕಥೆ 'ವೇದ'!

    60 ದಶಕದ ಕಥೆ 'ವೇದ'!

    ಶಿವರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ಮೇಲೆ ಒಂದು ನಿರೀಕ್ಷೆ ಇದ್ದೇ ಇತ್ತು. ಈ ಜೋಡಿ ಒಟ್ಟಿಗೆ ನಟಿಸುತ್ತಿರುವ 4ನೇ ಸಿನಿಮಾವಿದು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಮೊದಲ ದಿನವೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅಂದ್ಹಾಗೆ ಇದು 1960ರ ಕಾಲಘಟ್ಟದಲ್ಲಿ ನಡೆಯುವ ಕಥೆ. 60 ವರ್ಷ ಹಿಂದಿನ ಕಥೆಯಾಗಿದ್ದು, ವಿಶಿಷ್ಟ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

    ಶಿವಣ್ಣನ ಲುಕ್ ಸೂಪರ್!

    ಶಿವಣ್ಣನ ಲುಕ್ ಸೂಪರ್!

    ಶಿವಣ್ಣನ 125ನೇ ಸಿನಿಮಾ ಅಂದ್ರೆ ಅದು ವಿಶಿಷ್ಟವಾಗಿಯೇ ಇರಬೇಕು. ಹೀಗಾಗಿ ಶಿವಣ್ಣ ಲುಕ್ ಮೇಲೆ ಹೆಚ್ಚು ವರ್ಕ್‌ಔಟ್ ಮಾಡಲಾಗಿದೆ. ಹಳ್ಳಿ ಗೆಟಪ್‌ನಲ್ಲಿ ಶಿವರಾಜ್‌ಕುಮಾರ್ ಪ್ರೇಕ್ಷಕರಿಗೆ ತುಂಬಾನೇ ಇಷ್ಟ ಆಗಿದ್ದಾರೆ. ಪಂಚೆ ಹಾಗೂ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಶಿವಣ್ಣನ ಕಂಡು ಥಿಯೇಟರ್‌ನಲ್ಲಿ ಶಿಳ್ಳೆಗಳು ಬೀಳುತ್ತಿವೆ.

    English summary
    Shivarajkumar 125th Movie Vedha BoxOffice Day 1 Prediction, Know More.
    Saturday, December 24, 2022, 7:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X