"ನನ್ನ ಕಣ್ಣು ಚೆನ್ನಾಗಿದೆ ಅಂತ ತೋರಿಸಿಕೊಟ್ಟಿದ್ದೇ ಉಪೇಂದ್ರ";'ಓಂ 2' ಬಗ್ಗೆ ಶಿವಣ್ಣ ಹೇಳಿದ್ದೇನು?

ರಿಯಲ್‌ ಸ್ಟಾರ್ ಉಪೇಂದ್ರ ನಟನೆಗಿಂತ ನಿರ್ದೇಶನಕ್ಕೆ ಅಭಿಮಾನಿಗಳಾದವರ ಸಂಖ್ಯೆ ದೊಡ್ಡದಿದೆ. ಉಪ್ಪಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂದ್ರೆ ಮುಗೀತು. ರಿಯಲ್ ಸ್ಟಾರ್ ಅಭಿಮಾನಿಗಳು ಕುಣಿದು ಕುಪ್ಪಳಿಸುವುಕ್ಕೆ ಶುರು ಮಾಡುತ್ತಾರೆ. ಆ ಸಿನಿಮಾ ನೋಡುವುದಕ್ಕೆ ಕುತೂಹಲದಿಂದ ಕಾದು ಕೂರುತ್ತಾರೆ.

ಕನ್ನಡ ಚಿತ್ರರಂಗದಲ್ಲೂ ಉಪೇಂದ್ರ ನಿರ್ದೇಶನಕ್ಕೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಸ್ಟಾರ್ ನಟರೇ ಉಪ್ಪಿ ಆಕ್ಷನ್ ಕಟ್ ಹೇಳುವ ಶೈಲಿಗೆ ಫಿದಾ ಆಗಿದ್ದಾರೆ. ಅದರಲ್ಲಿ ಸೆಂಚ್ಯೂರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಒಬ್ಬರು. 'ಓಂ' ಸಿನಿಮಾದಿಂದ ಆರಂಭ ಆದ ಇಬ್ಬರ ಒಡನಾಟ ಇಂದಿಗೂ ಮುಂದುವರೆದಿದೆ.

Shivarajkumar about Upendra direction and Om 2 in UI teaser Launch

ಹೀಗಾಗಿ ಉಪ್ಪಿ ನಿರ್ದೇಶಿಸಿದ 'ಯುಐ' ಸಿನಿಮಾದ ಟೀಸರ್ ಲಾಂಚ್‌ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಶಿವಣ್ಣನ ಕಣ್ಣುಗಳನ್ನು ಚೆನ್ನಾಗಿದೆ ಅಂತ ತೋರಿಸಿಕೊಟ್ಟಿದ್ದೇ ಉಪೇಂದ್ರ ಎಂದು ವೇದಿಕೆ ಮೇಲೆ ಹೇಳಿದ್ದಾರೆ. ಹಾಗೇ 'ಓಂ 2' ಸಿನಿಮಾ ಬಗ್ಗೆನೂ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ವೇದಿಕೆ ಮೇಲೆ ಉಪ್ಪಿ ಬಗ್ಗೆ ಶಿವಣ್ಣ ಹೇಳಿದ್ದೇನು? ಅದರ ಝಲಕ್ ತಿಳಿಯಲು ಮುಂದೆ ಓದಿ.

'ಓಂ' ಸಿನಿಮಾ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ. ಶಿವಣ್ಣನಿಗೆ ಹೊಸ ಇಮೇಜ್ ಕೊಟ್ಟಿದ್ದೇ ಉಪ್ಪಿ. ತಮ್ಮ ಕಣ್ಣುಗಳು ಅದ್ಭುತವಾಗಿವೆ ಎಂದು ತೋರಿಸಿಕೊಟ್ಟಿದ್ದೇ ಉಪೇಂದ್ರ ಅನ್ನೋ ವಿಷಯವನ್ನು ರಿವೀಲ್ ಮಾಡಿದ್ದಾರೆ. "ಉಪೇಂದ್ರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನನ್ನ ಕಣ್ಣು ಚೆನ್ನಾಗಿದೆ ಅಂತ ತೋರಿಸಿಕೊಟ್ಟಿದ್ದೇ ಅವರು. ಶಿವಣ್ಣ ನಿಮ್ಮ ಕಣ್ಣನ್ನು ಲವ್ ಮಾಡ್ತಿದ್ದೀನಿ ಅಂದರು. ಅದು ಒಂಥರಾ ಪ್ರೇರಣೆ. ಯಾರಾದ್ರು ಹೀಗೆ ಹೇಳಿದಾಗ, ನನ್ನ ಕಣ್ಣು ಚೆನ್ನಾಗಿದ್ದೇಯಾ ಅಂತ ಅನಿಸಿತ್ತು." ಎಂದು ಶಿವಣ್ಣ ಹೇಳಿದ್ದಾರೆ.

ಇಷ್ಟೆ ಅಲ್ಲದೆ 'ಓಂ 2' ಸಿನಿಮಾ ಆಗಬೇಕು ಅನ್ನೋದು ಅಭಿಮಾನಿಗಳ ಆಸೆ. ಅದಕ್ಕೂ ಶಿವಣ್ಣ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ದಿದ್ದಾರೆ. "ಓಂ 2 ಬಗ್ಗೆ ಹೇಳುತ್ತಿದ್ದರು. ಆಗಲಿ ಬಿಡಿ.. ಅದೇನು ಮುಂದಿನ ವರ್ಷವೇ ಆಗಬೇಕು ಅಂತೇನೂ ಇಲ್ಲ. ಇನ್ನು 10 ವರ್ಷ ಬಿಟ್ಟು ಆಗಲಿ. ಶಿವಣ್ಣ ಹಾಗೇ ಇರುತ್ತಾನೆ. 72 ಆದರೂ ಹಾಗೇ ಇರುತ್ತಾನೆ. ವರಿ ಮಾಡಬೇಕು ಉಪೇಂದ್ರ, ಶಿವಣ್ಣ ಹಾಗೇ ಇರುತ್ತಾನೆ." ಎಂದು ಓಂ ಪಾರ್ಟ್ 2 ಬಗ್ಗೆ ಶಿವಣ್ಣ ಹೀಗೆ ಹೇಳಿದ್ದಾರೆ.

Shivarajkumar about Upendra direction and Om 2 in UI teaser Launch

ಈ ಹಿಂದೆ ಕೂಡ ತಮ್ಮ ಕೂದಲು ಯಾರೇ ಮುಟ್ಟಿದರೂ ಸಿಟ್ಟು ಬರುತ್ತೆ. ಆದರೆ, ಉಪೇಂದ್ರ ಒಬ್ಬರೇ ತನ್ನ ತಲೆ ಕೂದಲು ಕೆದರುತ್ತಿದ್ದವರು ಎಂದಿದ್ದರು. ಅದನ್ನು ಯುಐ ಟೀಸರ್ ರಿಲೀಸ್ ವೇಳೆ ಪುನರುಚ್ಛರಿಸಿದ್ದಾರೆ. "ನನ್ನ ಕೂದಲನ್ನು ಯಾರು ಮುಟ್ಟಿದರೂ ಕೋಪ ಬರುತ್ತೆ. ಆದರೆ, ಉಪೇಂದ್ರ ಒಬ್ಬರೇ ಬಂದು ಕೆದರಿ ಬಿಡೋರು. ನೀಟ್ ಆಗಿ ಬಾಚಿಕೊಂಡು ಬರುತ್ತಿದ್ದೆ. ಅದನ್ನು ಬಂದು ಕೆದರಿ ಬಿಡೋರು. ಉಪೇಂದ್ರ ಒಳ್ಳೆ ಡೈರೆಕ್ಟರ್ ಅಂತ ಇವತ್ತು ಹೇಳೋದಲ್ಲ. ಅವತ್ತಿನಿಂದಲೇ ಗೊತ್ತು" ಎಂದು ಉಪ್ಪಿಯ ಗುಣಗಾನ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಯುಐ ಟೀಸರ್ ವಿಮರ್ಶೆ ಕೂಡ ಮಾಡಿದ್ದಾರೆ. "ಯುಐ ಹೇಗೆ ಅನಿಸಿತು ಅಂತ ನನಗೆ ಉಪೇಂದ್ರ ಕೇಳುತ್ತಿದ್ದರು. ಬಹಳ ವಿಷಯಗಳಿವೆ. ಪ್ರಪಂಚ ತೋರಿಸುತ್ತಿದ್ದೀರ. ಯು ಅಂದರೆ ನೀವು. ನೀವು ನೋಡುತ್ತಿರೋ ನಾನು. ಅಂದರೆ, ನನ್ನ ಕಣ್ಣು. ನಾನು ಪ್ರಪಂಚವನ್ನು ನಿನ್ನಿಂದ ನೋಡುತ್ತಿದ್ದೇನೆ. ಅಜನೀಶ್ ಅವರು ಹೇಳಿದ್ರು ಉಪೇಂದ್ರ ಸಿಂಪಲ್ ಫಿಲಾಸೋಫಿ ಹೇಳುತ್ತಿದ್ರೂ, ರಿಯಲ್ ಫಿಲಾಸೋಫಿ ಹೇಳಿದ್ದಾರೆ ಅಂತ. ಅದು ಸರಿಯಾಗಿದೆ." ಎಂದು ಶಿವಣ್ಣ ಅಭಿಪ್ರಾಯ ಪಟ್ಟಿದ್ದಾರೆ.

"ಓಂಗಿಂತ ಮುಂಚೆ ಶ್ ಅನ್ನೋ ಒಂದು ಸಿನಿಮಾ ಮಾಡಿದ್ದರು. ಅದು ಸಾಧಾರಣವಾದ ಸಿನಿಮಾ ಅಲ್ಲ. ಅವರು ಮಾಡಿದ ತರ್ಲೆ ನನ್ ಮಗ ಇರಬಹುದು, ಇವತ್ತು ಓಂ ದೊಡ್ಡದಾಯ್ತು ಅಂತ ಮಾತಾಡುತ್ತೇವೆ ಅಷ್ಟೇ. ತರ್ಲೆ ನನ್ ಮಗನೂ ತುಂಬಾನೇ ಚೆನ್ನಾಗಿತ್ತು. ಅದನ್ನು ನಾನು 20 ಬಾರಿ ನೋಡಿದ್ದೇನೆ. ಇನ್ನು ಶ್ ಸಿನಿಮಾ ಪ್ರಿವ್ಯೂಗೂ ಬಂದಿದ್ದೆ." ಎಂದು ಶಿವಣ್ಣ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

More from Filmibeat

English summary
Shivarajkumar talks about Om 2 Movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X