ತಮಿಳುನಾಡಿನ ಟೆಂಪಲ್‌ನಲ್ಲಿ ಗೀತಕ್ಕ ಜೊತೆ ಮತ್ತೆ ಮದುವೆಯಾದ ಶಿವಣ್ಣ: ಪುರಾತನ ದೇವಸ್ಥಾನದ ಹಿನ್ನೆಲೆಯೇನು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಆದರ್ಶ ದಂಪತಿಗಳಂತೆ ಇದ್ದಾರೆ. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತಿದ್ದಾರೆ. ಹೊಸ ಸಿನಿಮಾಗಳ ಡೇಟ್ ಮ್ಯಾನೇಜ್ ಮಾಡುವುದರಿಂದ ಹಣ ಕಾಸಿನ ವ್ಯವಹಾರವನ್ನೂ ನೋಡಿಕೊಳ್ಳುತ್ತಾ, ಶಿವಣ್ಣನಿಗೆ ಆಧಾರವಾಗಿ ನಿಂತಿದ್ದಾರೆ. ಇದು ಶಿವಣ್ಣನಿಗೆ ನಟನೆಯ ಮೇಲೆ ಗಮನ ಹರಿಸುವುದಕ್ಕೆ ಸಹಾಯ ಮಾಡಿದೆ.

ಅದೇ ಇನ್ನೊಂದು ಕಡೆ ಶಿವಣ್ಣ ಕೂಡ ಗೀತಕ್ಕನ ರಾಜಕೀಯ ಜರ್ನಿಯೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪತ್ನಿಗೆ ಶಿವಣ್ಣ ಬೆಂಬಲ ನೀಡಿದ್ದರು. ಶಿವಮೊಗ್ಗ ಕ್ಷೇತ್ರದ ಉದ್ದಕ್ಕೂ ಸುತ್ತಾಡಿ ಗೀತಕ್ಕನ ಪರ ಹಗಲು-ರಾತ್ರಿ ಎನ್ನದೆ ಪ್ರಚಾರ ಮಾಡಿದ್ದರು. ಹೀಗೆ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಶಿವಣ್ಣ ಹೋದಲ್ಲೆಲ್ಲ ಗೀತಾ ಶಿವರಾಜ್‌ಕುಮಾರ್ ಕೂಡ ಟ್ರಾವಲ್ ಮಾಡುತ್ತಿದ್ದಾರೆ.

Shivarajkumar and Geetha Shivarajkumar shashtipoorthi at Thirukadaiyur temple

ಕನ್ನಡ ಚಿತ್ರರಂಗದಲ್ಲಿ ಹೀಗೆ ಅನ್ಯೋನ್ಯವಾಗಿರುವ ಕೆಲವೇ ಕೆಲವು ಜೋಡಿಗಳಿವೆ. ಅದರಲ್ಲಿ ಶಿವಣ್ಣ ಹಾಗೂ ಗೀತಕ್ಕ ಜೋಡಿ ಕೂಡ ಒಂದು. ಮದುವೆಯಾದ 38 ವರ್ಷಗಳ ಬಳಿಕ ಶಿವಣ್ಣ ಮತ್ತೆ ಪತ್ನಿ ಗೀತಾಗೆ ತಾಳಿ ಕಟ್ಟಿದ್ದಾರೆ. ತಮಿಳುನಾಡಿನ ಪುರಾತನ ಕಾಲದ ದೇವಸ್ಥಾನದಲ್ಲಿ ಷಷ್ಠಿಪೂರ್ತಿಯನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಮರು ಮದುವೆಯಾದ ಸೆಂಚುರಿ ಜೋಡಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ವಯಸ್ಸು 60 ದಾಟಿದ್ದಾರೆ. ಈ ಸಂದರ್ಭದಲ್ಲಿ ಯಶಸ್ವಿಯಾಗಿ ದಾಂಪತ್ಯವನ್ನು ನಿಭಾಯಿಸಿಕೊಂಡು ಬಂದಿರೋ ದಂಪತಿಗೆ ಹಿಂದೂ ಸಂಪ್ರದಾಯದ ಪ್ರಕಾರ ಷಷ್ಠಿ ಪೂರ್ತಿಯನ್ನು ನೇರವೇರಿಸಲಾಗುತ್ತೆ. ಶಿವಣ್ಣ ಕಳೆದ ಜುಲೈ 12ರಂದು 62ನೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಹಾಗೇ ಗೀತಕ್ಕಗೂ ಕೂಡ 60 ವರ್ಷ. ಈ ಕಾರಣಕ್ಕೆ ಸದ್ದಿಲ್ಲದೆ ಶಿವರಾಜ್‌ಕುಮಾರ್ ದಂಪತಿ ಸ್ನೇಹಿತರೊಂದಿಗೆ ಷಷ್ಠಿ ಪೂರ್ತಿಯನ್ನು ಆಚರಿಸಿಕೊಂಡಿದ್ದಾರೆ.

Shivarajkumar and Geetha Shivarajkumar shashtipoorthi at Thirukadaiyur temple

ಅಂದ್ಹಾಗೆ ತಮಿಳುನಾಡಿನ ಜನಪ್ರಿಯ ದೇವಸ್ಥಾನ ತಿರುಕಡೈಯೂರ್ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ತಮ್ಮ ಗೆಳೆಯರೊಂದಿಗೆ ತೆರಳಿ ಷಷ್ಠಿ ಪೂರ್ತಿ ಆಚರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೊಗಳನ್ನು ಕಣ್ತುಂಬಿಕೊಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ತಮಿಳುನಾಡಿನ ತಿರುಕಡೈಯೂರ್ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇದು ಪುರಾತನ ಕಾಲದ ದೇವಸ್ಥಾನವಾಗಿದ್ದು, ತಮಿಳುನಾಡಿನ ಜನರಿಗೆ ಅಪಾರ ನಂಬಿಕೆಯಿದೆ. ಇಂತಹ ಪುರಾತನ ಕಾಲದ ದೇವಸ್ಥಾನದಲ್ಲಿ ತಮ್ಮ ಮಕ್ಕಳು ಹಾಗೂ ಗೆಳೆಯರೊಂದಿಗೆ ಶಿವಣ್ಣ ದಂಪತಿ ಮತ್ತೆ ಮದುವೆಯಾಗಿದ್ದಾರೆ.

ಶಿವರಾಜ್‌ಕುಮಾರ್ ಪತ್ನಿ ಗೀತಕ್ಕ ಇಬ್ಬರು ಮದುವೆ ಮಕ್ಕಳಂತೆ ಸಿಂಗಾರಗೊಂಡಿದ್ದರು. ಅದರಲ್ಲೂ 38 ವರ್ಷಗಳ ಹಿಂದೆ ಶಿವಣ್ಣ ತಾಳಿ ಕಟ್ಟಿದ್ದನ್ನು ನೋಡಿದ್ದು ತೀರಾ ಅಪರೂಪ. ಈಗ ಶಿವಣ್ಣ ತಾಳಿ ಕಟ್ಟುತ್ತಿರುವ ಪೋಟೊ ಮತ್ತೆ ವೈರಲ್ ಆಗುತ್ತಿದೆ. 1986ರಲ್ಲಿ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಇಬ್ಬರೂ ಯಶಸ್ಸಿಯಾಗಿ ಸಂಸಾರವನ್ನು ಸರಿದೂಗಿಸಿಕೊಂಡು ಬರುತ್ತಿದ್ದಾರೆ.

More from Filmibeat

English summary
Shivarajkumar and Geetha Shivarajkumar shashtipoorthi at Thirukadaiyur temple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X