ಅಪ್ಪು ಜೇಮ್ಸ್ ಸಿನಿಮಾ ಸೆಟ್ಟಿಗೆ ಶಿವಣ್ಣ, ರಾಘಣ್ಣ ಎಂಟ್ರಿ: ಇಂದಿನಿಂದ ಶೂಟಿಂಗ್ ಶುರು

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ 'ಜೇಮ್ಸ್'. ಈ ಸಿನಿಮಾಗಾಗಿ ಅಪ್ಪು ಡೈ ಹಾರ್ಡ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾ ನೋಡಲೇ ಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕಾಗಿ ನಿರ್ದೇಶಕ ಚೇತನ್ ಕುಮಾರ್ ಆದಷ್ಟು ಬೇಗ ಸಿನಿಮಾ ಮುಗಿಸುವ ಶತ ಪ್ರಯತ್ನ ಮಾಡುತ್ತಿದ್ದಾರೆ.

ಈ ಮಧ್ಯೆ ಅಪ್ಪು ಸಿನಿಮಾ 'ಜೇಮ್ಸ್'ಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ವಿಶೇಷ ಪಾತ್ರದ ನಟಿಸಲಿದ್ದಾರೆ. ಇಂತಹದ್ದೊಂದು ಸುದ್ದಿ ಕಳೆದ ಕೆಲವು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈಗ 'ಜೇಮ್ಸ್' ಶೂಟಿಂಗ್ ಶುರುವಾಗಿದ್ದು, ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪುನೀತ್ ಅಭಿಮಾನಿಗಳಲ್ಲಿ ಕೌತಕ ಹೆಚ್ಚಿಸಿದೆ.

ಜೇಮ್ಸ್ ಸೆಟ್ಟಲ್ಲಿ ಶಿವಣ್ಣ, ರಾಘಣ್ಣ ಶೂಟಿಂಗ್

ಜೇಮ್ಸ್ ಸೆಟ್ಟಲ್ಲಿ ಶಿವಣ್ಣ, ರಾಘಣ್ಣ ಶೂಟಿಂಗ್

'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ವಿಶಿಷ್ಟವಾದ ಪಾತ್ರದಲ್ಲಿ ನಟಿಸುತ್ತಿದ್ದರು. ಕರ್ನಾಟಕ ಸೇರಿದಂತೆ ಕಾಶ್ಮೀರದಲ್ಲೆಲ್ಲಾ ಸಿನಿಮಾದ ಚಿತ್ರೀಕರಣ ನಡೆದಿತ್ತು. ಅಪ್ಪು ಕೂಡ ವಿಭಿನ್ನ ಲುಕ್‌ನಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸುವ ಉತ್ಸಾಹದಲ್ಲಿದ್ದರು. ಅಷ್ಟರಲ್ಲೇ ಅಪ್ಪು ಇಹಲೋಕ ತ್ಯಜಿಸಿಬಿಟ್ಟರು. ಇದೇ ನೋವಿನಲ್ಲಿರು ಅಭಿಮಾನಿಗಳು ಇರುವಾಗಲೇ 'ಜೇಮ್ಸ್' ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಶಿವಣ್ಣ ಮತ್ತು ರಾಘಣ್ಣರನ್ನು ಒಟ್ಟಿಗೆ ಕರೆದುಕೊಂಡು ಬಂದಿದ್ದಾರೆ.

ಇಂದಿನಿಂದಲೇ 'ಜೇಮ್ಸ್' ಶೂಟಿಂಗ್

ಇಂದಿನಿಂದಲೇ 'ಜೇಮ್ಸ್' ಶೂಟಿಂಗ್

ಪುನೀತ್ ರಾಜ್‌ಕುಮಾರ್ ವಿಭಿನ್ನ ಸಿನಿಮಾ 'ಜೇಮ್ಸ್' ಶೂಟಿಂಗ್ ಆರಂಭ ಆಗಿದೆ. ಇಂದಿನಿಂದ 'ಜೇಮ್ಸ್' ಸಿನಿಮಾ ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ಶೂಟಿಂಗ್ ಸೆಟ್ಟಿಗೆ ಆಗಮಿಸಿದ್ದಾರೆ. ಈ ಸಿನಿಮಾದಲ್ಲಿ ಅತಿಥಿಗಳಾಗಿ ನಟಿಸುತ್ತಿರುವ ಶಿವಣ್ಣ ಹಾಗೂ ರಾಘಣ್ಣ ಇಬ್ಬರ ಪೋಷನ್ ಅನ್ನು ಇಂದಿನಿಂದ ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಆರಂಭ ಆಗಿದ್ದು, ಸ್ವತ: ಚೇತನ್ ಕುಮಾರ್ ಈ ವಿಷಯವನ್ನು ಫಿಲ್ಮಿಬೀಟ್ ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.

ಅಣ್ಣಾವ್ರ ಮಕ್ಕಳ ಸಮಾಗಮ

ಅಣ್ಣಾವ್ರ ಮಕ್ಕಳ ಸಮಾಗಮ

ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅಣ್ಣಾವ್ರ ಮೂವರು ಮಕ್ಕಳನ್ನೂ ಒಂದೇ ಸಿನಿಮಾದಲ್ಲಿ ತೆರೆಮೇಲೆ ನೋಡಬೇಕು. ಮೂವರ ಸಮಾಗಮ ಹೇಗಿರುತ್ತೆ? ಅನ್ನುವುದನ್ನು ಕಣ್ತುಂಬಿಕೊಳ್ಳಬೇಕು ಅನ್ನುವ ಹಂಬಲ ಅಭಿಮಾನಿಗಳಲ್ಲಿ ಇತ್ತು. ಆದರೆ, ಅದೆಲ್ಲವೂ ಅಭಿಮಾನಿಗಳಿಗೆ ಕನಸಾಗಿಯೇ ಉಳಿದಿತ್ತು. ಆದ್ರೀಗ ಜೇಮ್ಸ್ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ನಟಿಸುತ್ತಿರುವುದರಿಂದ ಸಂಪೂರ್ಣ ಅಲ್ಲದಿದ್ದರೂ ಚಿಕ್ಕದೊಂದು ಕನಸು ನನಸಾದಂತಾಗಿದೆ.

ಅಪ್ಪು ಧ್ವನಿ ಉಳಿಸಿಕೊಳ್ಳಲು ಯತ್ನ

ಅಪ್ಪು ಧ್ವನಿ ಉಳಿಸಿಕೊಳ್ಳಲು ಯತ್ನ

'ಜೇಮ್ಸ್' ಚಿತ್ರದ ಅಪ್ಪು ಪಾತ್ರಕ್ಕೆ ಯಾರು ಡಬ್ಬಿಂಗ್ ಮಾಡುತ್ತಾರೆ? ಅನ್ನುವ ಪ್ರಶ್ನೆ ಎದ್ದಿದೆ. ಶಿವರಾಜ್‌ಕುಮಾರ್ ಡಬ್ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ. ಆದರೆ, ಚಿತ್ರತಂಡ ಮೊದಲು ಅಪ್ಪು ಧ್ವನಿಯನ್ನೇ ಉಳಿಸಿಕೊಳ್ಳುವ ಶತಪ್ರಯತ್ನ ಮಾಡುತ್ತಿದೆ. ಹೀಗಾಗಿ ಶೂಟಿಂಗ್ ವೇಳೆ ರೆಕಾರ್ಡ್ ಆಗಿದ್ದ ಧ್ವನಿಯನ್ನೇ ತಂತ್ರಜ್ಞಾನದ ಮೂಲಕ ಸರಿಪಡಿಸಿಕೊಂಡು ಬಳಲು ಚಿತ್ರತಂಡ ಮುಂದಾಗಿದೆ ಎನ್ನಲಾಗಿದೆ. ಏನೇ ಅಡೆತಡೆಗಳಾದರೂ, 'ಜೇಮ್ಸ್' ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗುವುದು ಹಂಡ್ರೆಡ್ ಪರ್ಸೆಂಟ್ ಪಕ್ಕಾ.

More from Filmibeat

English summary
Shivarajkumar And Raghavendra Rajkumar to do Guest Appearance role in James Movie. Chetan Kumar started Shooting from January 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X