For Quick Alerts
  ALLOW NOTIFICATIONS  
  For Daily Alerts

  Shivarajkumar Ghost: ಸಂದೇಶ್ ನಾಗರಾಜ್ ನಿರ್ಮಾಣದ 'ಗೋಸ್ಟ್' ಹಿಂದೆ ಬಿದ್ದ ಶಿವಣ್ಣ, ಶ್ರೀನಿ ಸೂತ್ರಧಾರ

  |

  ಸ್ಯಾಂಡಲ್‌ವುಡ್‌ನ ಹಿರಿಯರ ನಿರ್ಮಾಪಕ ಸಂದೇಶ್ ನಾಗರಾಜ್. ದರ್ಶನ್ ಸೇರಿದಂತೆ ಕನ್ನಡದ ಹಲವು ಸ್ಟಾರ್ ನಟರಿಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ 'ಶ್ರೀಕೃಷ್ಣ@ಜಿಮೇಲ್ ಡಾಟ್​ಕಾಮ್' ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ನಾಗಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆದರೆ, ಅದ್ಯಾಕೋ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಂದಕೊಂಡಷ್ಟು ಸದ್ದು ಮಾಡಲಿಲ್ಲ.

  'ಶ್ರೀಕೃಷ್ಣ@ಜಿಮೇಲ್ ಡಾಟ್​ಕಾಮ್' ಸಿನಿಮಾದ ಬಳಿಕ ನಿರ್ಮಾಪಕ ಸಂದೇಶ್ ನಾಗರಾಜ್ ಕೆಲವು ದಿನಗಳ ಹಿಂದಷ್ಟೆ ಹೊಚ್ಚ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಆಗ ಸಿನಿಮಾದ ಟೈಟಲ್ ಹಾಗೂ ಇತರೆ ಸುದ್ದಿಗಳನ್ನು ಸೀಕ್ರೆಟ್ ಆಗಿಯೇ ಇಟ್ಟಿದ್ದರು. ಆದ್ರೀಗ ಸಿನಿಮಾದ ಟೈಟಲ್ ಹಾಗೂ ಇತರ ಇಂಟ್ರೆಸ್ಟಿಂಗ್ ವಿಷಯವನ್ನು ಹೊರಹಾಕಿದ್ದಾರೆ.

  ಶಿವಣ್ಣನ ಹೊಸ ಸಿನಿಮಾ ಟೈಟಲ್ 'ಗೋಸ್ಟ್'

  ಶಿವಣ್ಣನ ಹೊಸ ಸಿನಿಮಾ ಟೈಟಲ್ 'ಗೋಸ್ಟ್'

  ಶಿವರಾಜ್‌ಕುಮಾರ್ ಹಾಗೂ ಸಂದೇಶ್ ನಾಗರಾಜ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಅನ್ನೋದು ಕೆಲವು ದಿನಗಳ ಹಿಂದೆನೇ ಅನೌನ್ಸ್ ಮಾಡಲಾಗಿತ್ತು. ಕರುನಾಡ ಚಕ್ರವರ್ತಿಯ ಹೊಚ್ಚ ಹೊಸ ಚಿತ್ರದ ಬಗ್ಗೆ ಮಾಹಿತಿ ಪಡೆಯಲು ಅವರ ಅಭಿಮಾನಿಗಳು ಕಾದು ಕೂತಿದ್ದರು. ಆದರಂತೆ ಈಗ ಸಂದೇಶ್ ಪ್ರೊಡಕ್ಷನ್‌ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ಶಿವಣ್ಣನ ಹೊಸ ಸಿನಿಮಾದ ಟೈಟಲ್ ಅನ್ನು ರಿವೀಲ್ ಮಾಡಲಾಗಿದೆ. ಅದುವೇ 'ಗೋಸ್ಟ್'

  ಗುರುದತ್ ಬದಲು ಶ್ರೀನಿ

  ಗುರುದತ್ ಬದಲು ಶ್ರೀನಿ

  ಸಂದೇಶ್ ನಾಗರಾಜ್ ಸಿನಿಮಾ ಅನೌನ್ಸ್ ಮಾಡಿದಾಗ ಚಿ. ಗುರುದತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದ್ರೀಗ ಅವರ ಬದಲಿಗೆ ಶ್ರೀನಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಗುರುದತ್ ಈ ಸಿನಿಮಾ ಹೊರಬಂದ್ರಾ, ಇಲ್ಲಾ ಇದು ಹೊಸ ಸಿನಿಮಾನಾ ಎಂಬುದನ್ನು ನಿರ್ಮಾಣ ಸಂಸ್ಥೆ ಸ್ಪಷ್ಟಪಡಿಸಬೇಕಿದೆ.

  ಶ್ರೀನಿ ಸಿನಿಮಾಗಳಲ್ಲಿ ಮನರಂಜನೆಗೆ ಹೆಚ್ಚು ಒತ್ತು

  ಶ್ರೀನಿ ಸಿನಿಮಾಗಳಲ್ಲಿ ಮನರಂಜನೆಗೆ ಹೆಚ್ಚು ಒತ್ತು

  ಶ್ರೀನಿ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾ ಬಂದಿದ್ದಾರೆ. 'ಟೋಪಿವಾಲ', 'ಶ್ರೀನಿವಾಸ ಕಲ್ಯಾಣ', 'ಬೀರ್‌ಬಲ್', ಇತ್ತೀಚೆಗೆ ಬಂದ ಓಲ್ಡ್ ಮಾಂಕ್ ಅಂತ ಸಿನಿಮಾಗಳನ್ನು ನಿರ್ದೇಶಿಸಿದ್ದಷ್ಟೆ ಅಲ್ಲದೆ ನಟಿಸಿದ್ದಾರೆ. ಶ್ರೀನಿವಾಸ ಕಲ್ಯಣ, ಬೀರ್‌ಬಲ್, ಓಲ್ಡ್ ಮಾಂಕ್ ಸಿನಿಮಾಗಳು ಪಕ್ಕಾ ಮನರಂಜನೆಯ ಸಿನಿಮಾ ಆಗಿದ್ದವು. ಈ ಎಲ್ಲಾ ಸಿನಿಮಾಗಳೂ ಹಾಸ್ಯದಿಂದ ಪ್ರೇಕ್ಷಕರಿಗೆ ಇಷ್ಟ ಆಗಿದ್ದವು.

  'ಗೋಸ್ಟ್‌'ಗೆ ಅರ್ಜುನ್ ಜನ್ಯ ಸಂಗೀತ

  'ಗೋಸ್ಟ್‌'ಗೆ ಅರ್ಜುನ್ ಜನ್ಯ ಸಂಗೀತ

  ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ 'ಗೋಸ್ಟ್' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಸಿನಿಮಾ ಟೈಟಲ್ 'ಗೋಸ್ಟ್' ಅಂತ ಫೈನಲ್ ಮಾಡಿ, ಅರ್ಜುನ್ ಜನ್ಯರನ್ನು ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿದೆ ಚಿತ್ರತಂಡ. ಇನ್ನು ಉಳಿದಂತೆ ಸಿನಿಮಾ ತಂತ್ರಜ್ಞರು ಹಾಗೂ ಪಾತ್ರಗಳ ಆಯ್ಕೆ ಆಗಬೇಕಿದೆ. ಇತ್ತೀಚೆಗೆ ಶಿವಣ್ಣನನ್ನು ಭೇಟಿ ಮಾಡಿ ಟೈಟಲ ಅನೌನ್ಸ್ ಮಾಡಿದೆ. ಸಂದೇಶ್ ನಾಗರಾಜ್ ಸಂಸ್ಥೆಯಿಂದ ಅದ್ದೂರಿ ಸಿನಿಮಾಗಳು ರಿಲೀಸ್ ಆಗಿವೆ. ದರ್ಶನ್ ನಟಿಸಿದ 'ಪ್ರಿನ್ಸ್', 'ಐರಾವತ' ಹಾಗೂ 'ಒಡೆಯ' ಹೈ ಬಜೆಟ್ ಸಿನಿಮಾ ಆಗಿದ್ದವು. ಇದರೊಂದಿಗೆ 'ಅಮರ್','ಶ್ರೀಕೃಷ್ಣ ಜಿಮೇಲ್ ಡಾಟ್' ಸಿನಿಮಾಗಳೂ ಬಿಡುಗಡೆಯಾಗಿವೆ. ಸದ್ಯ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿ ಕಥೆ ಸಿನಿಮಾ ಶೂಟಿಂಗ್ ಮುಗಿದಿದ್ದು, ಶಿವಣ್ಣ

  English summary
  Shivarajkumar And Sandesh Nagaraj Movie Ghost Will Be Directed by Srini. Know more,
  Saturday, April 9, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X