'ಭೀಮಾ' ಸೆಟ್ಟಿಗೆ ಭೇಟಿ ನೀಡಿದ್ದ ಶಿವಣ್ಣ-ಗೀತಾ ಕಾಲು ಮುಟ್ಟಿ ನಮಸ್ಕರಿಸಿದ ದುನಿಯಾ ವಿಜಯ್ !

ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ವಿಜಯ್ ಸೆಕೆಂಡ್ ಇನ್ನಿಂಗ್ಸ್ ಆರಂಭ ಆಗಿದೆ. 'ಸಲಗ' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಮತ್ತೊಂದು ಸಿನಿಮಾಗೆ ಕೈ ಹಾಕಿರೋದು ಗೊತ್ತೇ ಇದೆ. ಮೊದಲ ನಿರ್ದೇಶನದಲ್ಲೇ ಗೆದ್ದು ಬೀಗಿದ್ದ ವಿಜಯ್ ಎರಡನೇ ಬಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದುವೇ 'ಭೀಮಾ'.

ಸದ್ದಿಲ್ಲದೆ 'ಭೀಮಾ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 'ಸಲಗ' ಬಳಿಕ ವಿಜಯ್‌ಗೆ ಬೇಡಿಕೆ ಹೆಚ್ಚಾಗಿದ್ದು, ತೆಲುಗು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಎರಡೆರಡು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ದುನಿಯಾ ವಿಜಯ್ ಇಲ್ಲಿ 'ಭೀಮಾ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತೆಲುಗು ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ತಾವೇ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ 'ಭೀಮಾ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಶೂಟಿಂಗ್ ಸೆಟ್ಟಿಗೆ ಭೇಟಿ ನೀಡಿದ್ದಾರೆ.

'ಭೀಮಾ' ಸೆಟ್ಟಿಗೆ ಶಿವಣ್ಣ-ಗೀತಾ ಭೇಟಿ

'ಭೀಮಾ' ಸೆಟ್ಟಿಗೆ ಶಿವಣ್ಣ-ಗೀತಾ ಭೇಟಿ

'ಸಲಗ' ಯಶಸ್ಸಿನ ಬಳಿಕ ದುನಿಯಾ ವಿಜಯ್ 'ಭೀಮಾ' ನಿರ್ದೇಶಕ್ಕೆ ಕೈ ಹಾಕಿದ್ದಾರೆ. ಸದ್ಯ ಮೈಸೂರಿನಲ್ಲಿ ಇದೇ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್ ಶೂಟಿಂಗ್ ಸ್ಪಾಟ್‌ಗೆ ಭೇಟಿ ನೀಡಿದ್ದಾರೆ. ವಿಜಯ್ ಹಾಗೂ ತಂಡದೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ದುನಿಯಾ ವಿಜಯ್ ಹಾಗೂ ತಂಡ ಶಿವಣ್ಣ ಹಾಗೂ ಪತ್ನಿ ಗೀತಾರನ್ನು ಸ್ವಾಗತಿಸಿ, ಉಪಚಾರಿಸಿ ಕಳಿಸಿದ್ದಾರೆ.

ಶಿವಣ್ಣ-ಗೀತಾ ಕಾಲು ಮುಟ್ಟಿ ನಮಸ್ಕರಿಸಿದ ವಿಜಯ್

ಶಿವಣ್ಣ-ಗೀತಾ ಕಾಲು ಮುಟ್ಟಿ ನಮಸ್ಕರಿಸಿದ ವಿಜಯ್

ಶಿವರಾಜ್‌ಕುಮಾರ್ ಹಾಗೂ ಗೀತಾ ಇಬ್ಬರೂ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ 'ಭೀಮಾ' ಸಿನಿಮಾದ ಶೂಟಿಂಗ್ ಕೂಡ ಮೈಸೂರಿನಲ್ಲೇ ನಡೆಯುತ್ತಿದೆ. ಅಲ್ಲದೆ ಶಿವಣ್ಣನ 'ಬೈರಾಗಿ' ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್ 'ಭೀಮಾ'ಗೂ ಹಣ ಹೂಡಿದ್ದಾರೆ. ಈ ಕಾರಣಕ್ಕೆ ಉತ್ತಮ ಬಾಂಧ್ಯಮ ಹೊಂದಿದ್ದು, ಶೂಟಿಂಗ್ ಸ್ಪಾಟ್‌ಗೆ ಒಂದು ವಿಸಿಟ್ ಹಾಕಿದ್ದಾರೆ. ಈ ವೇಳೆ ದುನಿಯಾ ವಿಜಯ್ ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಪತ್ನಿ ಗೀತಾ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಈ ಎಲ್ಲೆಡೆ ವೈರಲ್ ಆಗುತ್ತಿದೆ.

ಶಿವಣ್ಣ ಅಂದ್ರೆ ವಿಜಯ್‌ ಎಲ್ಲಿಲ್ಲದ ಗೌರವ

ಶಿವಣ್ಣ ಅಂದ್ರೆ ವಿಜಯ್‌ ಎಲ್ಲಿಲ್ಲದ ಗೌರವ

ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್ ಅಂದ್ರೆ, ಸ್ಯಾಂಡಲ್‌ವುಡ್‌ನ ಪ್ರತಿಯೊಬ್ಬರಿಗೂ ಬಲು ಪ್ರೀತಿ. ಹೊಸಬರು ಇರಲಿ, ಹಳೆಬರು ಇರಲಿ. ಎಲ್ಲರನ್ನೂ ಒಂದೇ ರೀತಿ ಕಾಣುವ ಶಿವಣ್ಣನನ್ನು ಇಷ್ಟ ಪಡದವರೇ ಇಲ್ಲ. ದುನಿಯಾ ವಿಜಯ್‌ಗೂ ಕೂಡ ಶಿವಣ್ಣ ಅಂದರೆ, ಅದೇನೋ ಪ್ರೀತಿ. 'ಸಲಗ' ಬಿಡುಗಡೆ ಸಮಯದಲ್ಲೂ ಶಿವಣ್ಣ ಸಂಪೂರ್ಣ ಬೆಂಬಲ ನೀಡಿದ್ದರು. ಹೀಗಾಗಿ ದುನಿಯಾ ವಿಜಯ್‌ಗೆ ಸೆಂಚುರಿ ಸ್ಟಾರ್‌ ಮೇಲೆ ಎಲ್ಲಿಲ್ಲದ ಗೌರವ. ಹೀಗಾಗಿ ಶೂಟಿಂಗ್ ವೇಳೆ ಬಿಡುವು ಮಾಡಿಕೊಂಡು ಶಿವಣ್ಣ ಹಾಗೂ ಗೀತಾ ಅವರೊಂದಿಗೆ ತುಂಬಾ ಹೊತ್ತು ಮಾತುಕತೆ ನಡೆಸಿದ್ದಾರೆ.

ಶೇ.60ರಷ್ಟು ಶೂಟಿಂಗ್ ಫಿನಿಶ್

ಶೇ.60ರಷ್ಟು ಶೂಟಿಂಗ್ ಫಿನಿಶ್

'ಭೀಮಾ' ಸಿನಿಮಾದ ಶೂಟಿಂಗ್ ಸದ್ದಿಲ್ಲದೆ ನಡೆಯುತ್ತಿದೆ. ದುನಿಯಾ ವಿಜಯ್ ಸ್ವತ: ನಿರ್ದೇಶನಕ್ಕೆ ಇಳಿದಿರುವುದರಿಂದ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿದೆ. 'ಸಲಗ'ದಂತೆ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ನೀಡುತ್ತಾರಾ? ಅನ್ನೋದನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಸದ್ಯ ಶೇ.60ರಷ್ಟು ಈ ಸಿನಿಮಾದ ಶೂಟಿಂಗ್ ಮುಗಿದಿದೆ. ಇನ್ನು ಶೇ.40ರಷ್ಟು ಶೂಟಿಂಗ್ ಮುಗಿದರೆ, ಸಿನಿಮಾ ಬಹುತೇಕ ಮುಗಿದಂತೆ. ಎಲ್ಲಕ್ಕಿಂತ ಹೆಚ್ಚಾಗಿ ವಿಜಯ್ ಮೊದಲ ತೆಲುಗು ಸಿನಿಮಾ ಕೂಡ ರಿಲೀಸ್ ಆಗಬೇಕಿದೆ.

More from Filmibeat

English summary
Shivarajkumar And Wife Geetha Visited Duniya Vijay Starrer Bheema Movie Set. Where he touched Shivarajkumar And wife Geetha Feet to took blessings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X