ಶಿವಣ್ಣ-ನರ್ತನ್ ಸಿನಿಮಾ 'ಭೈರತಿ ರಣಗಲ್' ಎಷ್ಟು ಬ್ಯುಸಿನೆಸ್ ಮಾಡ್ತು? ₹50 ಕೋಟಿ ರೀಚ್ ಆಯ್ತಾ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಭೈರತಿ ರಣಗಲ್' ಸ್ಯಾಂಡಲ್‌ವುಡ್‌ಗೆ ಹೊಸ ಹುರುಪು ಕೊಟ್ಟಿತ್ತು. ಶಿವಣ್ಣ ಲುಕ್‌, ಖದರ್ ನೋಡಿ ಅವರ ಅಭಿಮಾನಿಗಳು ಅಷ್ಟೇ ಅಲ್ಲ, ಸಿನಿಪ್ರಿಯರು ಕೂಡ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಥಿಯೇಟರ್‌ನಲ್ಲೂ ಈ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿತ್ತು. 'ಮಫ್ತಿ' ಬಳಿಕ ಮತ್ತೊಮ್ಮೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಕ್ಲಿಕ್ ಆಗಿದೆ.

'ಭೈರತಿ ರಣಗಲ್' ರಿಲೀಸ್‌ಗೂ ಮುನ್ನವೇ ಕ್ರೇಜ್ ಹುಟ್ಟಾಕಿತ್ತು. ಮತ್ತೆ ರಣಗಲ್ ಪಾತ್ರದಲ್ಲಿ ಶಿವಣ್ಣನನ್ನು ನೋಡುವುದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದರು. ನರ್ತನ್ ನಿರ್ದೇಶನ, ಶಿವಣ್ಣ ಅವರ ಹೋಮ್ ಪ್ರೊಡಕ್ಷನ್ ಈ ಸಿನಿಮಾಗೆ ಬೇರೆ ಮೈಲೇಜ್ ಕೊಟ್ಟಿತ್ತು. ಹಾಗೇ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಜೈಲರ್' ಕ್ರೇಜ್ ಕೂಡ ಇದ್ದಿದ್ದರಿಂದ ಬಿಡುಗಡೆಗೂ ಮುನ್ನವೇ ಸಿನಿಮಾ ಹಿಟ್ ಅಂತಲೇ ಲೆಕ್ಕಚಾರ ಹಾಕಲಾಗಿತ್ತು.

Shivarajkumar Bhairathi Ranagal movie distribution satellite digital business details

ಕನ್ನಡದ ವಿತರಕರು 'ಪುಷ್ಪ 2' ಸಿನಿಮಾಗೆ ಹೆಚ್ಚು ಥಿಯೇಟರ್ ಬೇಕು ಅಂತ ನಿರ್ಧಾರ ಮಾಡುವವರೆಗೂ 'ಭೈರತಿ ರಣಗಲ್' ಥಿಯೇಟರ್‌ನಲ್ಲಿ ಇತ್ತು. ಈಗಲೂ ಕೆಲವು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಹೀಗಿರುವಾಗ ಶಿವಣ್ಣ ನಟಿಸಿದ ಈ ಸಿನಿಮಾ ಎಷ್ಟು ಬ್ಯುಸಿನೆಸ್ ಮಾಡಿದೆ ಅನ್ನುವ ಲೆಕ್ಕವೊಂದು ಹರಿದಾಡುತ್ತಿದೆ. ವಿತರಣೆ ಹಕ್ಕು, ಸ್ಯಾಟಲೈಟ್, ಡಿಜಿಟಲ್ ಹಾಗೂ ಡಬ್ಬಿಂಗ್ ಹಕ್ಕುಗಳು ಎಷ್ಟು ಮಾರಾಟ ಆಗಿವೆ? ಎಷ್ಟು ಕೋಟಿ ಲಾಭದಲ್ಲಿದ್ದಾರೆ? ಅನ್ನೋ ಲೆಕ್ಕಾಚಾರ ಇಲ್ಲಿದೆ.

ಶಿವಣ್ಣ ಸಿನಿಮಾಗಳು ಸಾಮಾನ್ಯವಾಗಿ ಡಿಸೆಂಟ್ ಬ್ಯುಸಿನೆಸ್ ಅನ್ನೇ ಮಾಡುತ್ತವೆ. ಆ ಕಾರಣಕ್ಕೆ ನಿರ್ಮಾಪಕರು ಶಿವಣ್ಣನ ಕಾಲ್‌ಶೀಟ್‌ಗಾಗಿ ಕ್ಯೂ ನಿಲ್ಲುತ್ತಾರೆ. ಅದರಲ್ಲೂ 'ಭೈರತಿ ರಣಗಲ್' ಅಂತಹ ಸಿನಿಮಾದ ಲೆಕ್ಕಾಚಾರವೇ ಬೇರೆ. ಆದರೆ, ಈ ಸಿನಿಮಾ ಅವರದ್ದೇ ಹೋಮ್ ಪ್ರೊಡಕ್ಷನ್. ಗೀತಾ ಶಿವರಾಜ್‌ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಎಷ್ಟು ಲಾಭ ಮಾಡಿರಬಹುದು ಅನ್ನೋದನ್ನು ಲೆಕ್ಕಾಚಾರ ಸಿನಿಮಾ ಮಂದಿ ಹಾಕುತ್ತಿದ್ದಾರೆ.

ಮೂಲಗಳ ಪ್ರಕಾರ 'ಭೈರತಿ ರಣಗಲ್' ಸಿನಿಮಾದಿಂದ ಗೀತಾ ಶಿವರಾಜ್‌ಕುಮಾರ್ ಅವರಿಗೆ ಕಮ್ಮಿ ಅಂದರೂ 10 ಕೋಟಿ ರೂಪಾಯಿ ಲಾಭದಲ್ಲಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ ಈ ಸಿನಿಮಾದ ಯಾವ್ಯಾವ ಹಕ್ಕುಗಳಿಂದ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನುವುದರ ಡಿಟೈಲ್ಸ್ ಇಲ್ಲಿದೆ. 'ಭೈರತಿ ರಣಗಲ್' ಒಟ್ಟು ಬಜೆಟ್ 25 ರಿಂದ 30 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಈ ಸಿನಿಮಾ ಒಟ್ಟು ಬ್ಯುಸಿನೆಸ್ 42 ಕೋಟಿ ರೂಪಾಯಿ ಅನ್ನೋದು ಸಿನಿಮಾ ಮಂದಿಗೆ ಸಿಕ್ಕಿರುವ ಲೆಕ್ಕ.

Shivarajkumar Bhairathi Ranagal movie distribution satellite digital business details

'ಭೈರತಿ ರಣಗಲ್' ಸಿನಿಮಾದ ವಿತರಣೆ ಹಕ್ಕನ್ನು 12 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು ಎನ್ನುವ ಸುದ್ದಿಯಿದೆ. ಹಾಗೆ ಕನ್ನಡ ಭಾಷೆಯ ಸ್ಯಾಟಲೈಟ್ ಹಕ್ಕು 9 ಕೋಟಿ ರೂ.ಗೆ ಸೇಲ್ ಆಗಿದೆ. ಇನ್ನು ಕನ್ನಡ ಭಾಷೆಯ ಡಿಜಿಟಲ್ ರೈಟ್ಸ್ 9 ಕೋಟಿ ರೂಪಾಯಿ, ಹಿಂದಿ ಡಿಜಿಟಲ್ ರೈಟ್ಸ್ 5.40 ಕೋಟಿ ರೂ., ಹಿಂದಿ ಡಬ್ಬಿಂಗ್ ಹಕ್ಕು 4.50 ಕೋಟಿ ರೂ., ತೆಲುಗು ತಮಿಳು 2.70 ಕೋಟಿ ರೂ., ತೆಲುಗು ತಮಿಳು ಡಬ್ಬಿಂಗ್ ರೈಟ್ಸ್ 1.80 ಕೋಟಿ ರೂ. ಎಂದು ಚಿತ್ರರಂಗದ ಮೂಲಗಳಿಂದ ಬಂದ ಮಾಹಿತಿ.

ಈ ಲೆಕ್ಕಾಚಾರ ಅಧಿಕೃತ ಅಲ್ಲ. ಕನ್ನಡ ಚಿತ್ರರಂಗದ ಬೇರೆ ಬೇರೆ ಮೂಲಗಳಿಂದ ಸಿಕ್ಕಿದ ಅಂಕಿ ಅಂಶಗಳು ಅಷ್ಟೇ. ಇದೊಂದು ಅಂದಾಜು ಲೆಕ್ಕವಾಗಿದ್ದು, ಶಿವರಾಜ್‌ಕುಮಾರ್ ಅಥವಾ ಅವರ ನಿರ್ಮಾಣ ಸಂಸ್ಥೆಯಾಗಲಿ 'ಭೈರತಿ ರಣಗಲ್' ಸಿನಿಮಾದ ಬ್ಯುಸಿನೆಸ್‌ ಬಗ್ಗೆ ಎಲ್ಲೂ ಮಾಹಿತಿಯನ್ನು ನೀಡಿಲ್ಲ. ಚಿತ್ರರಂಗದ ಮಂದಿ ಶಿವಣ್ಣನ ಸಿನಿಮಾದ ಬ್ಯುಸಿನೆಸ್‌ ಬಗ್ಗೆ ನೀಡಿದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

More from Filmibeat

English summary
Shivarajkumar Bhairathi Ranagal movie distribution, satellite, digital business details;
Read more about: shivarajkumar business sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X