Bhairathi Ranagal Box Office Day 1:ಮೊದಲನೇ ದಿನ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಮಫ್ತಿ' ಅವತಾರವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಅದೇ ಅವತಾರದಲ್ಲಿ ಪಾರ್ಟ್ 2 ಬರುತ್ತಾ? ಎಂದು ಎದುರು ನೋಡುತ್ತಿದ್ದವರಿಗೆ ನರ್ತನ್ ಟ್ವಿಸ್ಟ್ ಕೊಟ್ಟು ಪ್ರೀಕ್ವೆಲ್ ಮಾಡಿದ್ದರು. ಭೈರತಿ ರಣಗಲ್ ಹಿನ್ನೆಲೆಯನ್ನು ಪ್ರೇಕ್ಷಕರಿಗೆ ತೋರಿಸಲೇ ಬೇಕು ಅಂತ ಪಣ ತೊಟ್ಟಿದ್ದರು. ಹೀಗಾಗಿ ಶಿವಣ್ಣ ಮತ್ತೆ 'ಭೈರತಿ ರಣಗಲ್' ಅವತಾರ ಎತ್ತುವಂತಾಯ್ತು.

'ಭೈರತಿ ರಣಗಲ್' ನಿನ್ನೆ (ನವೆಂಬರ್ 15) ರಾಜ್ಯಾದ್ಯಂತ ರಿಲೀಸ್ ಆಗಿದೆ. ಶಿವಣ್ಣನ ಅವತಾರವನ್ನು ಪ್ರೇಕ್ಷಕರು ಮತ್ತೆ ಮೆಚ್ಚಿಕೊಂಡಿದ್ದಾರೆ. ಫ್ಯಾನ್ ಶೋಗಳು ಹೌಸ್‌ಫುಲ್ ಆಗಿವೆ. ಸೆಂಚುರಿ ಸ್ಟಾರ್ ಮ್ಯಾನರಿಸಂ, ಲುಕ್, ಸ್ಟೈಲ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಅಲ್ಲದೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡುವುದಕ್ಕೆ ಶುರು ಮಾಡಿದೆ.

Shivarajkumar Bhairathi Ranagal movie Karnataka Box office collection day 1 report

ಮೊದಲ ದಿನ 'ಭೈರತಿ ರಣಗಲ್' ಸಿನಿಮಾಗೆ ಸಿಕ್ಕಿದ ರೆಸ್ಪಾನ್ಸ್ ಹೇಗಿದೆ? ಮೊದಲ ದಿನ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ವೀಕೆಂಡ್‌ನಲ್ಲಿ ಎಷ್ಟು ಕಲೆಕ್ಷನ್ ಆಗಬಹುದು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಭೈರತಿ ರಣಗಲ್' ಮೊದಲ ದಿನದ ಕಲೆಕ್ಷನ್ ಎಷ್ಟು?

ಶಿವಣ್ಣನ ಸಿನಿಮಾಗೆ ಮೊದಲ ವಾರ ಭರ್ಜರಿ ಓಪನಿಂಗ್ ಸಿಕ್ಕೇ ಸಿಗುತ್ತೆ. ಅದರಲ್ಲೂ ಇಂತಹ ಇತಿಹಾಸ ಸೃಷ್ಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇರೆಯದ್ದೇ ಲೆಕ್ಕ ಬರೆಯುತ್ತವೆ. ಈ ಕಾರಣಕ್ಕೆ 'ಭೈರತಿ ರಣಗಲ್' ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಕುತೂಹಲವಿದೆ. ವಿತರಕರ ವಲಯದಿಂದ ಸಿಕ್ಕಿರುವ ಲೆಕ್ಕದ ಪ್ರಕಾರ ಈ ಸಿನಿಮಾ ಮೊದಲ ದಿನ 2.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ಇಂಡಸ್ಟ್ರಿ ಟ್ರೇಡ್ ಟ್ರ್ಯಾಕರ್ ಪ್ರಕಾರ ಈ ಸಿನಿಮಾ 2 ಕೋಟಿ ಕಲೆಕ್ಷನ್ ಆಗಿದೆ.

Shivarajkumar Bhairathi Ranagal movie Karnataka Box office collection day 1 report

ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು?

'ಮಫ್ತಿ' ಎಲ್ಲಾ ಏರಿಯಾಗಳಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಶಿವಣ್ಣ ಪಾತ್ರವನ್ನು ಇಡೀ ಕರ್ನಾಟಕದ ಜನರೇ ಮೆಚ್ಚಿಕೊಂಡಿದ್ದರು. ಈ ಕಾರಣಕ್ಕೆ 'ಭೈರತಿ ರಣಗಲ್' ಸಿನಿಮಾಗೂ ಎಲ್ಲಾ ಕಡೆಯಿಂದಲೂ ಉತ್ತಮ ರೆಸ್ಪಾನ್ಸ್ ಸಿಗುತ್ತೆ ಅಂತ ಲೆಕ್ಕ ಹಾಕಲಾಗಿತ್ತು. ಅದರಂತೆ ಮೊದಲ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋ ಅಂಕಿ ಅಂಶಗಳು ಹೀಗಿವೆ.

'ಭೈರತಿ ರಣಗಲ್' ಬಾಕ್ಸಾಫೀಸ್ ಕಲೆಕ್ಷನ್

ಬೆಂಗಳೂರು, ಕೋಲಾರ, ತುಮಕೂರು - 1.2 ಕೋಟಿ ರೂಪಾಯಿ
ಮೈಸೂರು, ಮಂಡ್ಯ, ಕೂರ್ಗ್, ಹಾಸನ್ - 40 ಲಕ್ಷ ರೂಪಾಯಿ
ಶಿವಮೊಗ್ಗ, ದಕ್ಷಿಣ ಕನ್ನಡ - 20 ಲಕ್ಷ ರೂಪಾಯಿ
ಚಿತ್ರದುರ್ಗ, ದಾವಣಗೆರೆ - 20 ಲಕ್ಷ ರೂಪಾಯಿ
ಹೈದರಾಬಾದ್ ಕರ್ನಾಟಕ - 10 ಲಕ್ಷ ರೂಪಾಯಿ
ಹುಬ್ಬಳ್ಳಿ - 10 ಲಕ್ಷ ರೂಪಾಯಿ
ಒಟ್ಟು - 2.20 ಕೋಟಿ ರೂಪಾಯಿ

ವೀಕೆಂಡ್ ಕಲೆಕ್ಷನ್ ಹೇಗಿರುತ್ತೆ?

'ಭೈರತಿ ರಣಗಲ್' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಮೊದಲ ಮೂರು ದಿನಗಳ ಕಲೆಕ್ಷನ್ ಜೋರಾಗಿರುತ್ತೆ ಎಂದು ನಿರೀಕ್ಷೆ ಮಾಡಬಹುದು. ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಬಾಕ್ಸಾಫೀಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಉತ್ತಮವಾಗಿರುತ್ತೆ ಅನ್ನೋ ನಿರೀಕ್ಷೆಯಿದೆ. ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, ಮೊದಲ ಮೂರು ದಿನ ಈ ಸಿನಿಮಾ 8 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಸಿನಿಮಾ ಹೈಲೈಟ್ ಏನು?

ಶಿವಣ್ಣನ 'ಭೈರತಿ ರಣಗಲ್' ಲುಕ್ ಬಿಗ್ ಹೈಲೈಟ್. ಅಲ್ಲದೆ ಬಹಳ ದಿನಗಳ ಬಳಿಕ ಮತ್ತೆ ಶಿವರಾಜ್‌ಕುಮಾರ್ ಲಾಂಗ್ ಹಿಡಿದಿದ್ದಾರೆ. ಹೀಗಾಗಿ ಶಿವಣ್ಣ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಬಹುದು. ಅದರಲ್ಲೂ ಡೈಲಾಗ್ ಕಮ್ಮಿ, ಕೇವಲ ಕಣ್ಣುಗಳಲ್ಲಿಯೇ ರೋಷಾಗ್ನಿ ಹೊರ ಹಾಕಿರುವ ಶಿವರಾಜ್‌ಕುಮಾರ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹೀಗಿ ಇನ್ನೂ ಒಂದೆರಡು ವಾರ 'ಭೈರತಿ ರಣಗಲ್' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಬಹುದು.

ಸೂಚನೆ: ಇದು ಬೇರೆ ಬೇರೆ ಮೂಲಗಳಿಂದ ಅಂಕಿ ಅಂಶಗಳನ್ನು ಸಂಗ್ರಹಿಸಿ ವರದಿ ಮಾಡಲಾಗಿದೆ. ಭೈರತಿ ರಣಗಲ್ ಚಿತ್ರತಂಡ ಅಧಿಕೃತವಾಗಿ ಮಾಹಿತಿಯನ್ನು ಇನ್ನೂ ನೀಡಬೇಕಿದೆ.

More from Filmibeat

English summary
Shivarajkumar Bhairathi Ranagal movie Karnataka Box office collection day 1 report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X