Bhairathi Ranagal Box Office Day 2: 2ನೇ ದಿನವೂ ಶಿವಣ್ಣನಿಗೆ ಜೈಕಾರ; ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಿದ್ದೆಷ್ಟು?
ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಕನ್ನಡ ಚಿತ್ರರಂಗಕ್ಕೆ ಹೊಸ ಹುರುಷು ಕೊಟ್ಟಿದೆ. ಕಳೆದ ಎರಡು ವರ್ಷಗಳಿಂದ ಒಂದೊಳ್ಳೆ ಸಿನಿಮಾಗಾಗಿ ಕಾಯುತ್ತಿದ್ದ ಸಿನಿಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ. ಅದರಲ್ಲೂ 'ಮಫ್ತಿ'ಯಲ್ಲಿ ಶಿವಣ್ಣನನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳಿಗೆ ಮತ್ತದೇ ಲುಕ್‌ನಲ್ಲಿ ನೋಡುವ ಆಸೆನೂ ಈಡೇರಿದೆ.
ಸದ್ಯ ಕನ್ನಡ ಚಿತ್ರರಂಗಕ್ಕೆ ಒಂದರ ಹಿಂದೊಂದು ಒಳ್ಳೆಯ ಸಿನಿಮಾಗಳು ಸಿಕ್ಕಿವೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಬಘೀರ' ಕನ್ನಡ ಚಿತ್ರರಂಗಕ್ಕೆ ಹೊಸ ಪ್ರಯತ್ನ ಆಗಿತ್ತು. ಕನ್ನಡದ ಮೊದಲ ಸೂಪರ್ ನೋಡಿದ್ದ ಪ್ರೇಕ್ಷಕರಿಗೆ ಈ ವಾರ 'ಭೈರತಿ ರಣಗಲ್' ನೋಡುವ ಅವಕಾಶ ಸಿಕ್ಕಿದೆ. ಈ ಮೂಲಕ ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗ ಕೂಡ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಇನ್ನು ಬಾಕ್ಸಾಫೀಸ್ ವಿಚಾರಕ್ಕೆ ಬರುವುದಾದರೆ 'ಭೈರತಿ ರಣಗಲ್' ಸಿನಿಮಾಗೆ ಮೊದಲ ದಿನ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಕೂಡ 'ಭೈರತಿ ರಣಗಲ್' ಸಿನಿಮಾ ಮೆಚ್ಚಿ ಕೊಂಡಾಡಿದ್ದರು. ಅದು ಎರಡನೇ ದಿನಕ್ಕೂ ಹಾಗೇ ಮುಂದುವರೆದಿದೆ. ಹಾಗಿದ್ದರೆ, ಶಿವಣ್ಣ ನಟಿಸಿದ 'ಭೈರತಿ ರಣಗಲ್' ಸಿನಿಮಾ ಎರಡನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ? ಮೊದಲನೇ ದಿನಕ್ಕಿಂತ ಹೆಚ್ಚು ಗಳಿಕೆ ಮಾಡಿದೆಯೇ? ತಿಳಿಯಲು ಮುಂದೆ ಓದಿ.
'ಭೈರತಿ ರಣಗಲ್' 2ನೇ ದಿನದ ಕಲೆಕ್ಷನ್ ಎಷ್ಟು?
ಶಿವಣ್ಣ ಖದರ್‌ಗೆ ಮತ್ತೆ ಸಿನಿಪ್ರಿಯರು ಕಳೆದು ಹೋಗಿದ್ದಾರೆ. ಮತ್ತೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ವರ್ಕ್ ಆಗಿದೆ. ಸೆಂಚುರಿ ಸ್ಟಾರ್ ಅನ್ನು ತೆರೆಮೇಲೆ ಬಿಂಬಿಸಿದ ರೀತಿಗೆ ಅಭಿಮಾನಿಗಳು ಶಿಳ್ಳೆಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ಎರಡನೇ ದಿನವೂ ಥಿಯೇಟರ್‌ಗೆ ನುಗ್ಗಿ ಸಿನಿಮಾವನ್ನು ನೋಡುತ್ತಿದ್ದಾರೆ. ಮೊದಲ ದಿನ ಸುಮಾರು 360ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಭೈರತಿ ರಣಗಲ್' ರಿಲೀಸ್ ಆಗಿತ್ತು. ಅದೇ 2ನೇ ದಿನ 320 ಸ್ಕ್ರೀನ್‌ಗಳಿಂದ 2 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಡಿಸ್ಟ್ರಿಬ್ಯೂಟರ್ ಸೆಕ್ಟರ್‌ನಿಂದ ಸಿಕ್ಕಿರುವ ಲೆಕ್ಕ. ಅದೇ ಇಂಡಸ್ಟ್ರಿ ಟ್ರ್ಯಾಕರ್ sacnilk ಪ್ರಕಾರ 2.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?
ಶಿವಣ್ಣನ 'ಮಫ್ತಿ' ಮ್ಯಾನರಿಸಂಗೆ ಮತ್ತೆ ಪ್ರೇಕ್ಷಕರಿಂದ ಜೈಕಾರ ಸಿಕ್ಕಿದೆ. ಕಪ್ಪು ಬಣ್ಣದ ಧಿರಿಸಿನಲ್ಲಿ ಸೆಂಚುರಿ ಸ್ಟಾರ್ ಖದರ್ ಅನ್ನು ಥಿಯೇಟರ್‌ನಲ್ಲಿ ಸಂಭ್ರಮಿಸುತ್ತಿದ್ದಾರೆ. ಕೇವಲ ಬೆಂಗಳೂರು ಅಷ್ಟೇ ಅಲ್ಲ. ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ಕುಂದಾಪುರ, ಮಣಿಪಾಲ್ ಹಾಗೂ ರಾಯಚೂರಿನಲ್ಲಿ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಹಾಗಿದ್ದರೆ, ಯಾವ್ಯಾವ ಏರಿಯಾದಿಂದ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನುವ ಡಿಟೈಲ್ ಇಲ್ಲಿದೆ.
'ಭೈರತಿ ರಣಗಲ್' ಬಾಕ್ಸಾಫೀಸ್ ಕಲೆಕ್ಷನ್ (Day 2)
ಬೆಂಗಳೂರು, ಕೋಲಾರ, ತುಮಕೂರು - 1.2 ಕೋಟಿ ರೂಪಾಯಿ
ಮೈಸೂರು, ಮಂಡ್ಯ, ಕೂರ್ಗ್, ಹಾಸನ್ - 45 ಲಕ್ಷ ರೂಪಾಯಿ
ಶಿವಮೊಗ್ಗ, ದಕ್ಷಿಣ ಕನ್ನಡ - 25 ಲಕ್ಷ ರೂಪಾಯಿ
ಚಿತ್ರದುರ್ಗ, ದಾವಣಗೆರೆ - 20 ಲಕ್ಷ ರೂಪಾಯಿ
ಹೈದರಾಬಾದ್ ಕರ್ನಾಟಕ - 10 ಲಕ್ಷ ರೂಪಾಯಿ
ಹುಬ್ಬಳ್ಳಿ - 10 ಲಕ್ಷ ರೂಪಾಯಿ
ಒಟ್ಟು - 2.30 ಕೋಟಿ ರೂಪಾಯಿ
2 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಹಬ್ಬದ ರಜೆಯಲ್ಲಿ 'ಭೈರತಿ ರಣಗಲ್' ರಿಲೀಸ್ ಆಗದೇ ಹೋದರೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಅಂದ್ಹಾಗೆ ಸೋಮವಾರ ಕೂಡ ಸರ್ಕಾರಿ ರಜೆ ಆಗಿರುವುದರಿಂದ ಈ ಸಿನಿಮಾಗೆ ಅಡ್ವಾಂಟೇಜ್ ಅಂತಾನೇ ಹೇಳಬಹುದು. ಶಿವಣ್ಣನ ಸಿನಿಮಾ ಮೊದಲ ದಿನ 2.20 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ 2.30 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಒಟ್ಟು ಎರಡು ದಿನಕ್ಕೆ 4.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ತೆಲುಗಿನಲ್ಲೂ ಶೀಘ್ರವೇ ರಿಲೀಸ್ ?
'ಭೈರತಿ ರಣಗಲ್' ಸಿನಿಮಾ ಮೊದಲ ದಿನ ಸಿಕ್ಕಿದ ರೆಸ್ಪಾನ್ಸ್ ಸಿನಿಮಾ ಮಂದಿಗೆ ಕಿಕ್ ಕೊಟ್ಟಿದೆ. ಸಿನಿಮಾ ಶುರುವಾದ ಆರಂಭದಲ್ಲಿ ಈ ಸಿನಿಮಾವನ್ನು ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಈಗ 'ಭೈರತಿ ರಣಗಲ್' ಸಿಕ್ಕಿರುವ ರೆಸ್ಪಾನ್ಸ್‌ಗೆ ಮನಗಂಡು ತೆಲುಗಿನಲ್ಲಿ ರಿಲೀಸ್ ಮಾಡುವುದಕ್ಕೆ ಅಲ್ಲಿನ ವಿತರಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಸೂಚನೆ: ಈ ಸಿನಿಮಾ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಇನ್ನೂ 'ಭೈರತಿ ರಣಗಲ್' ಚಿತ್ರತಂಡ ಅಧಿಕೃತವಾಗಿ ಸಿನಿಮಾದ ಗಳಿಕೆಯನ್ನು ರಿವೀಲ್ ಮಾಡಬೇಕಿದೆ.


Click it and Unblock the Notifications











