Bhairathi Ranagal Box Office Day 3: 3ನೇ ದಿನವೂ ಬಾಕ್ಸಾಫೀಸ್‌ ದೋಚಿದ 'ಭೈರತಿ ರಣಗಲ್'; ಕಲೆಕ್ಷನ್ ಎಷ್ಟು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಮತ್ತೊಂದು ಮೆಗಾ ಸಕ್ಸಸ್ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ನಿರ್ದೇಶಕ ನರ್ತನ್ ಹಾಗೂ ಶಿವಣ್ಣ ಜೋಡಿ ಮತ್ತೊಮ್ಮೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಕೊಟ್ಟಿದೆ. ಶಿವಣ್ಣನ 'ಮಫ್ತಿ' ಮ್ಯಾನರಿಸಂ, ಲುಕ್ ಕನ್ನಡಿಗರಿಗಂತೂ ಸಿಕ್ಕಾಪಟ್ಟೆ ಇಷ್ಟ ಆಗಿದೆ.

ನಿನ್ನೆ ಭಾನುವಾರ (ನವೆಂಬರ್ 17) 'ಭೈರತಿ ರಣಗಲ್' ರಿಲೀಸ್ ಆಗಿ ಮೂರನೇ ದಿನ. ಕಳೆದ ಮೂರು ದಿನಗಳಿಂದ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ನಿರೀಕ್ಷೆ ಮಾಡಿದಂತೆ ಪ್ರೇಕ್ಷಕರಿಂದ ಪಾಸಿಟಿವ್ ಸಿಕ್ಕಿದೆ. ಎರಡನೇ ದಿನದಿಂದ 320ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಭೈರತಿ ರಣಗಲ್' ಪ್ರದರ್ಶನ ಕಾಣುತ್ತಿದ್ದು, ಸಿನಿಮಾಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೊಂದು ಹಿಟ್ ಸಿನಿಮಾ ಕೊಡುವ ಲಕ್ಷಣಗಳು ಕಾಣಿಸುತ್ತಿದೆ.

Shivarajkumar Bhairathi Ranagal movie Karnataka Box office collection day 3 report

'ಭೈರತಿ ರಣಗಲ್' ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ. ಹೀಗಾಗಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಹೆಚ್ಚು ಸಿನಿಮಾಗಳನ್ನು ನಿರೀಕ್ಷೆ ಮಾಡಬಹುದು. ಸದ್ಯ ಮೂರು ದಿನಗಳು ಬಾಕ್ಸಾಫೀಸ್‌ನಲ್ಲಿ ಶಿವಣ್ಣನ ಸಿನಿಮಾ ಅಬ್ಬರಿಸಿ ಮುನ್ನುಗುತ್ತಿದೆ. ಹಾಗಿದ್ದರೆ, 3ನೇ ದಿನ 'ಭೈರತಿ ರಣಗಲ್' ಗಳಿಸಿದ್ದೆಷ್ಟು? ವೀಕೆಂಡ್‌ನಲ್ಲಿ ಕಲೆಕ್ಷನ್ ಹೇಗಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಭೈರತಿ ರಣಗಲ್' 3ನೇ ದಿನದ ಕಲೆಕ್ಷನ್ ಎಷ್ಟು?

ಈ ವರ್ಷದ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭೈರತಿ ರಣಗಲ್' ಉತ್ತಮ ಓಪನಿಂಗ್ ಪಡೆದುಕೊಂಡಿದೆ. 3ನೇ ದಿನವೂ ಈ ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿ ಇದೆ. ಮೊದಲ ಎರಡು ದಿನವೂ ಸಿನಿಮಾ ಕಲೆಕ್ಷನ್ ಅದ್ಭುತವಾಗಿತ್ತು. ಅದು ಮೂರನೇ ದಿನವೂ ಮುಂದುವರೆದಿದೆ. ಇಂಡಸ್ಟ್ರಿ ಟ್ರೇಡ್ ಎಕ್ಸ್‌ಪರ್ಟ್ sacnilk ಪ್ರಕಾರ, ಈ ಸಿನಿಮಾ 2.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ, ಡಿಸ್ಟ್ರಿಬ್ಯೂಟರ್ ಸೆಕ್ಟರ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ 2.30 ಕೋಟಿ ರೂಪಾಯಿಯಿಂದ 2.50 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಿದೆ ಎಂದು ಹೇಳುತ್ತಿದ್ದಾರೆ.

3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಭೈರತಿ ರಣಗಲ್' ಈ ವರ್ಷದಲ್ಲಿ ಕನ್ನಡದ ಅತ್ಯುತ್ತಮ ಗಳಿಕೆ ಕಂಡ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕೂಡ ಇವೆ. ನಿರ್ದೇಶಕ ನರ್ತನ್ ಹಾಗೂ ಶಿವಣ್ಣ ಕಾಂಬಿನೇಷನ್ ವರ್ಕ್‌ಔಟ್ ಆಗಿದ್ದು, ಕಳೆದ ಮೂರು ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲೂ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

Shivarajkumar Bhairathi Ranagal movie Karnataka Box office collection day 3 report

3 ದಿನಗಳ ಕಲೆಕ್ಷನ್

ಮೊದಲನೇ ದಿನ 2.10 ಕೋಟಿ ರೂಪಾಯಿ
ಎರಡನೇ ದಿನ 2.30 ಕೋಟಿ ರೂಪಾಯಿ
ಮೂರನೇ ದಿನ 2.85 ಕೋಟಿ ರೂಪಾಯಿ
ಒಟ್ಟು 7. 25 ಕೋಟಿ ರೂಪಾಯಿ

ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್?

ಶಿವಣ್ಣನ ಸಿನಿಮಾ 'ಭೈರತಿ ರಣಗಲ್' ಕರ್ನಾಟಕದ ಕೆಲವು ಏರಿಯಾಗಳಲ್ಲಿ ಉತ್ತಮ ಗಳಿಕೆ ಕಂಡಿದೆ. ಬೆಂಗಳೂರು, ಮೈಸೂರು, ತುಮಕೂರು, ಕುಂದಾಪುರ, ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಶೇ. 60ಕ್ಕಿಂತಲೂ ಅಧಿಕ ಥಿಯೇಟರ್‌ಗಳು ತುಂಬಿವೆ. ಹಾಗೆಯೇ ಮಣಿಪಾಲ್ ಹಾಗೂ ಹುಬ್ಬಳ್ಳಿಯಲ್ಲೂ ಈ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ.

'ಭೈರತಿ ರಣಗಲ್' ಬಾಕ್ಸಾಫೀಸ್ ಕಲೆಕ್ಷನ್ (Day 3)

ಬೆಂಗಳೂರು, ಕೋಲಾರ, ತುಮಕೂರು 1.5ಕೋಟಿ ರೂಪಾಯಿ
ಮೈಸೂರು, ಮಂಡ್ಯ, ಕೂರ್ಗ್, ಹಾಸನ್ 60 ಲಕ್ಷ ರೂಪಾಯಿ
ಶಿವಮೊಗ್ಗ, ದಕ್ಷಿಣ ಕನ್ನಡ 30 ಲಕ್ಷ ರೂಪಾಯಿ
ಚಿತ್ರದುರ್ಗ, ದಾವಣಗೆರೆ 20 ಲಕ್ಷ ರೂಪಾಯಿ
ಹೈದರಾಬಾದ್ ಕರ್ನಾಟಕ 10 ಲಕ್ಷ ರೂಪಾಯಿ
ಹುಬ್ಬಳ್ಳಿ 15 ಲಕ್ಷ ರೂಪಾಯಿ
ಒಟ್ಟು 2.85 ಕೋಟಿ ರೂಪಾಯಿ

ತೆಲುಗಿನಲ್ಲೂ ರಿಲೀಸ್

'ಭೈರತಿ ರಣಗಲ್' ಸಿನಿಮಾಗೆ ಕರ್ನಾಟಕದಲ್ಲಿ ಸಿಕ್ಕಿರುವ ರೆಸ್ಪಾನ್ಸ್‌ಗೆ ತೆಲುಗು ಮಂದಿ ಥ್ರಿಲ್ ಆಗಿದ್ದಾರೆ. ಅಲ್ಲದೆ ಬಿಡುಗಡೆಗೂ ಮುನ್ನವೇ ಸಿನಿಮಾ ತಂಡ 'ಭೈರತಿ ರಣಗಲ್' ಸಿನಿಮಾವನ್ನು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ರಿಲೀಸ್ ವೇಳೆ ಕನ್ನಡ ಒಂದೇ ಭಾಷೆಯಲ್ಲಿ ರಿಲೀಸ್ ಮಾಡಲಾಗಿತ್ತು. ಈಗ ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್‌ಗೆ ತೆಲುಗಿನಲ್ಲೂ ರಿಲೀಸ್ ಮಾಡುವುಕ್ಕೆ ಜನರು ಸಿನಿಮಾ ಮಂದಿ ಮುಂದೆ ಬಂದಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ.

More from Filmibeat

English summary
Shivarajkumar Bhairathi Ranagal movie Karnataka Box office collection day 3 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X