Bhairathi Ranagal Box Office Day 4: ಸೋಮವಾರದ ಅಗ್ನಿ ಪರೀಕ್ಷೆ ಗೆದ್ದನೇ 'ಭೈರತಿ ರಣಗಲ್'? 4ನೇ ದಿನ ಗಳಿಸಿದ್ದೆಷ್ಟು?

2024ರ ಕೊನೆಯಲ್ಲಿ ಕನ್ನಡ ಚಿತ್ರರಂಗ ಹೊಸ ಹರುಪು ಬಂದಿದೆ. ಇಲ್ಲಿವರೆಗೂ ನಿರಂತರ ಸೋಲನ್ನು ಕಂಡಿರುವ ಕನ್ನಡ ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್ ಸಿನಿಮಾ ಸಿಗುವ ಎಲ್ಲ ಸೂಚನೆಗಳು ಸಿಗುತ್ತಿವೆ. ಐದು ದಿನಗಳ ಹಿಂದಷ್ಟೇ ರಿಲೀಸ್ ಆಗಿರುವ 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಓಟವನ್ನು ಮುಂದುವರೆಸಿದೆ. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಸ್ಯಾಂಡಲ್‌ವುಡ್ ಮಂದಿಯಲ್ಲಿ ಕಿರು ನಗೆ ಬೀರಿದೆ.

ಈ ವರ್ಷ ಕೂಡ ಸೋಲಿನ ಕಹಿಯಲ್ಲೇ ಮುಗಿಸಬೇಕು ಅಂತಿದ್ದ ಸಿನಿಮಾ ಮಂದಿಗೆ ಶಿವಣ್ಣ ಮತ್ತೆ ಉತ್ಸಾಹ ತುಂಬಿದ್ದಾರೆ. ಸೆಂಚುರಿ ಸ್ಟಾರ್ ನಟಿಸಿದ 'ಭೈರತಿ ರಣಗಲ್' ಕಳೆದ ನಾಲ್ಕು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ಸೋಮವಾರ ಕೂಡ ಸರ್ಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಲೆಕ್ಷನ್ ಕೂಡ ಚೆನ್ನಾಗಿ ಆಗಿದೆ. ಇನ್ನೊಂದು ವಾರದಲ್ಲಿ ಇನ್ನೂ ಒಳ್ಳೆಯ ಗಳಿಕೆ ಕಾಣಬಹುದೆಂಬ ನಿರೀಕ್ಷೆಯಿದೆ.

Shivarajkumar Bhairathi Ranagal movie Karnataka Box office collection day 4 report

'ಭೈರತಿ ರಣಗಲ್' ಭಾನುವಾರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಮೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಅನ್ನೋ ವರದಿ ಬಂದಿದ್ದವು. ಆದರೆ, ಸೋಮವಾರ ಅಗ್ನಿ ಪರೀಕ್ಷೆಯನ್ನು 'ಭೈರತಿ ರಣಗಲ್' ಹೇಗೆ ಎದುರಿಸಬಹುದು ಅನ್ನುವ ಕುತೂಹಲ ಸಿನಿಮಾ ಮಂದಿಯಲ್ಲಿತ್ತು. ಹಾಗಿದ್ದರೆ, ಸೋಮವಾರ 'ಭೈರತಿ ರಣಗಲ್' ಗಳಿಸಿದ್ದೆಷ್ಟು? ಅಗ್ನಿ ಪರೀಕ್ಷೆಯಲ್ಲಿ ಶಿವಣ್ಣ ಗೆದ್ದರೇ? ತಿಳಿಯಲು ಮುಂದೆ ಓದಿ.

'ಭೈರತಿ ರಣಗಲ್' 4ನೇ ದಿನದ ಗಳಿಕೆ ಎಷ್ಟು?

ಶಿವಣ್ಣನ 'ಭೈರತಿ ರಣಗಲ್' ಮ್ಯಾನರಿಸಂ ಮತ್ತೊಮ್ಮೆ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಸಿನಿಮಾ ನಾಲ್ಕನೇ ದಿನವೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಅನ್ನೋ ಲೆಕ್ಕ ಸಿಗುತ್ತಿದೆ. ಸುಮಾರು 320 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಆದರೆ, ಸಿನಿಮಾಗೆ ಸಿಕ್ಕಿದ ಪಾಸಿಟಿವ್ ರೆಸ್ಪಾನ್ಸ್‌ನಿಂದ ಸ್ಕ್ರೀನ್ ಸಂಖ್ಯೆಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅಲ್ಲದೆ ಸೋಮವಾರ ಅಗ್ನಿ ಪರೀಕ್ಷೆಯಲ್ಲಿ 'ಭೈರತಿ ರಣಗಲ್' ಗೆದ್ದಿದ್ದು, ನಾಲ್ಕನೇ ದಿನ 1.60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು sacnilk ವರದಿ ಮಾಡಿದೆ. ಇನ್ನು ವಿತರಕರ ವಲಯದಲ್ಲಿ 1.50 ಕೋಟಿಯಿಂದ 1.80 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಿದೆ ಎನ್ನುತ್ತಿವೆ.

Shivarajkumar Bhairathi Ranagal movie Karnataka Box office collection day 4 report

4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಭೈರತಿ ರಣಗಲ್' ಸೋಮವಾರ ಕಲೆಕ್ಷನ್ ಹೊಸ ಭರವಸೆ ಕೊಟ್ಟಿದೆ. ಆದರೆ, ನಿನ್ನೆ ರಜೆ ಇದ್ದ ಹಿನ್ನೆಲೆಯಲ್ಲಿ ಕಲೆಕ್ಷನ್ ಕೂಡ ಉತ್ತಮವಾಗಿದೆ. ಇಂದಿನಿಂದ (ನವೆಂಬರ್ 19) ಸಿನಿಮಾ ಕಲೆಕ್ಷನ್ ಹೇಗಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಇಲ್ಲಿವರೆಗೂ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಒಟ್ಟು ನಾಲ್ಕು ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್ ಇಲ್ಲಿವರೆಗೂ ಹೀಗಿದೆ.

4 ದಿನಗಳ ಕಲೆಕ್ಷನ್

ಮೊದಲನೇ ದಿನ 2.10 ಕೋಟಿ ರೂಪಾಯಿ
ಎರಡನೇ ದಿನ 2.30 ಕೋಟಿ ರೂಪಾಯಿ
ಮೂರನೇ ದಿನ 3.40 ಕೋಟಿ ರೂಪಾಯಿ
ನಾಲ್ಕನೇ ದಿನ 1.60 ಕೋಟಿ ರೂಪಾಯಿ
ಒಟ್ಟು 10.00 ಕೋಟಿ ರೂಪಾಯಿ

ಯಾವ್ಯಾವ ಏರಿಯಾದಲ್ಲಿ ಹೇಗಿದೆ ಕಲೆಕ್ಷನ್?

'ಭೈರತಿ ರಣಗಲ್' ಸಿನಿಮಾಗೆ ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ಮೂರು ದಿನಗಳಂತೆ ನಾಲ್ಕನೇ ದಿನವೂ ಕೂಡ ಬೆಂಗಳೂರು, ಮೈಸೂರು, ತುಮಕೂರು, ಕುಂದಾಪುರ, ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಶೇ. 40ಕ್ಕಿಂತಲೂ ಅಧಿಕ ಥಿಯೇಟರ್‌ಗಳು ತುಂಬಿವೆ. ಹಾಗೆಯೇ ತುಮಕೂರು, ರಾಯಚೂರು ಸೇರಿದಂತೆ ಹಲವು ಏರಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡಿದೆ.

'ಭೈರತಿ ರಣಗಲ್' ಕಲೆಕ್ಷನ್ (Day 4)

ಬೆಂಗಳೂರು, ಕೋಲಾರ, ತುಮಕೂರು 90 ಲಕ್ಷ ರೂಪಾಯಿ
ಮೈಸೂರು, ಮಂಡ್ಯ, ಕೂರ್ಗ್, ಹಾಸನ್ 20 ಲಕ್ಷ ರೂಪಾಯಿ
ಶಿವಮೊಗ್ಗ, ದಕ್ಷಿಣ ಕನ್ನಡ 20 ಲಕ್ಷ ರೂಪಾಯಿ
ಚಿತ್ರದುರ್ಗ, ದಾವಣಗೆರೆ 10 ಲಕ್ಷ ರೂಪಾಯಿ
ಹೈದರಾಬಾದ್ ಕರ್ನಾಟಕ 10 ಲಕ್ಷ ರೂಪಾಯಿ
ಹುಬ್ಬಳ್ಳಿ 10 ಲಕ್ಷ ರೂಪಾಯಿ
ಒಟ್ಟು 1.60 ಕೋಟಿ ರೂಪಾಯಿ

ವಿದೇಶದಲ್ಲೂ ಸಿನಿಮಾ ರಿಲೀಸ್

'ಭೈರತಿ ರಣಗಲ್' ಸಿನಿಮಾ ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ವೀಕ್‌ಡೇಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಹೇಗಿರುತ್ತೆ ಅನ್ನೋದು ಕುತೂಹಲ ಕೆರಳಿಸಿದೆ. ಹಾಗೇ ಇನ್ನೊಂದು ಕಡೆ 'ಭೈರತಿ ರಣಗಲ್' ಈ ವಾರ ವಿದೇಶದಲ್ಲಿಯೂ ರಿಲೀಸ್ ಆಗಲಿದೆ. ಜೊತೆಗೆ ತೆಲುಗಿನಲ್ಲಿಯೂ ಇದೇ ರಿಲೀಸ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಚಿತ್ರತಂಡ ಈಗಾಗಲೇ ಸುಳಿವು ನೀಡಿದೆ.

More from Filmibeat

English summary
Shivarajkumar Bhairathi Ranagal movie Karnataka Box office collection day 4 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X