ಶಿವಣ್ಣನ ಹುಟ್ಟುಹಬ್ಬಕ್ಕೆ 127ನೇ ಸಿನಿಮಾದ ಪೋಸ್ಟರ್ ಲಾಂಚ್

ಜುಲೈ 12ರಂದು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಜೊತೆ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳದೆ ಇದ್ದರೂ, ಸಿನಿಮಾ ಮಂದಿ 60ನೇ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಶಿವರಾಜ್‌ಕುಮಾರ್ ಅಭಿನಯದ 123ನೇ ಸಿನಿಮಾ 'ಬೈರಾಗಿ' ಬಿಡುಗಡೆಯಾಗಿದೆ. ಇದರೊಂದಿಗೆ ಶಿವಣ್ಣನ ಹಲವು ಸಿನಿಮಾಗಳು ಶೂಟಿಂಗ್‌ ಹಂತದಲ್ಲಿವೆ. ಇನ್ನು ಕೆಲವು ಸಿನಿಮಾಗಳು ಟೇಕ್ ಆಫ್ ಆಗುತ್ತಿವೆ.

ಬರ್ತ್‌ಡೇಯಂದೇ 127ನೇ ಸಿನಿಮಾ ಟೈಟಲ್ ಲಾಂಚ್

ಸ್ಯಾಂಡಲ್‌ವುಡ್‌ನ ಯಂಗ್ ಅಂಡ್ ಎನರ್ಜಿಟಿಕ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈ ಸಿನಿಮಾಗಳಲ್ಲಿ ಶಿವಣ್ಣ 127ನೇ ಸಿನಿಮಾ ಬಗ್ಗೆನೇ ಟಾಕ್ ಆಗುತ್ತಿದೆ. ಯಾಕಂದ್ರೆ, ಜುಲೈ 12ರಂದೇ ಈ ಚಿತ್ರದ ಪೋಸ್ಟರ್ ಲಾಂಚ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.

Shivarajkumar Birthday: 127th Movie Title Will be launch On July 12th

127ನೇ ಸಿನಿಮಾವನ್ನು 'ಅವನೇ ಶ್ರೀಮನ್ನಾರಾಯಣ' ಚಿತ್ರದ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಣ್ಣನ 60ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡದ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಪೋಸ್ಟರ್ ರಿಲೀಸ್ ಮಾಡಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ.

ಆಗಸ್ಟ್ ನಲ್ಲಿ ಟೈಟಲ್ ಲಾಂಚ್

ಶಿವಣ್ಣ 127ನೇ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮಹಾಭಾರತದ ಕಥೆಯಲ್ಲಿ ಮಹಾವೀರರಲ್ಲಿ ಒಬ್ಬರಾದ ಅಶ್ವತ್ಥಾಮ ಸಿನಿಮಾದ ಸಾಹಸಗಾಥೆಯನ್ನಿಟ್ಟುಕೊಂಡ ಕಥೆ ಹೆಣೆಯಲಾಗಿದೆ. ಇದೇ ಕಥೆಯನ್ನೇ ಆಧಾರವಾಗಿಟ್ಟುಕೊಂಡೇ ಸಿನಿಮಾದ ಟೈಟಲ್ ಅನ್ನು ಇಡುವುದಕ್ಕೆ ಸಜ್ಜಾಗಿದ್ದಾರೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಟೈಟಲ್ ರಿವೀಲ್ ಆಗಲಿದೆ.

Shivarajkumar Birthday: 127th Movie Title Will be launch On July 12th

ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸ್ಟೋರಿ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಸೂಪರ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಚಿನ್ ಈ ಸಿನಿಮಾಗೆ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ತಮ್ಮದೇ ಹೋಮ್ ಬ್ಯಾನರ್ ಜೊತೆಗೆ ಕಾರ್ಪೊರೇಟ್ ಕಂಪನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

More from Filmibeat

English summary
Shivarajkumar Birthday: 127th Movie Title Will be launch On July 12th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X