Shivarajkumar40: ಶಿವಣ್ಣನ ಸಿನಿ ಜರ್ನಿಗೆ 40 ವರ್ಷ; ಸೆಂಚುರಿ ಸ್ಟಾರ್ ಕರಿಯರ್‌ನ ಟಾಪ್ 5 ಸಿನಿಮಾ ಇವೇ.. ನೀವು ಏನಂತೀರಾ?

ದೊಡ್ಮನೆಯ ಮೊದಲ ಮಗ ಶಿವರಾಜ್‌ಕುಮಾರ್ ಸಿನಿಪ್ರಿಯರ ಫೇವರಿಟ್. ವಯಸ್ಸು 60 ದಾಟಿದರೂ ಇನ್ನೂ ಎನರ್ಜಿ ಮಾತ್ರ ಕಮ್ಮಿಯಾಗಿಲ್ಲ. ಯುವ ನಟರಿಗೂ ಸೆಡ್ಡು ಹೊಡೆದು ಓಡುತ್ತಿದ್ದ ಶಿವಣ್ಣನನ್ನು ಕ್ಯಾನ್ಸರ್‌ ತಡೆದರೂ, ಅದಕ್ಕೆ ಟಕ್ಕರ್ ಕೊಟ್ಟು ಬಂದ ನಟ. ಅದಕ್ಕೆ ಶಿವಣ್ಣ ಈ ಎನರ್ಜಿಯನ್ನು ಯಾರೂ ಹಿಂದಿಕ್ಕುವುದಕ್ಕೆ ಆಗುವುದೇ ಇಲ್ಲ.

ಇನ್ನು ಶಿವಣ್ಣನ ಜರ್ನಿಯೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. 1986 ಶಿವರಾಜ್‌ಕುಮಾರ್ ಮೊದಲ ಬಾರಿಗೆ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಆನಂದ್' ಶಿವಣ್ಣ ನಟಿಸಿದ ಮೊದಲ ಸಿನಿಮಾ. ಇಲ್ಲಿಂದ ಬ್ಯಾಕ್ ಟು ಬ್ಯಾಕ್ ಯಶಸ್ವಿ ಸಿನಿಮಾಗಳಲ್ಲಿ ಗೆದ್ದು ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು. ನೂರು ಸಿನಿಮಾಗಳಲ್ಲಿ ನಟಿಸಿ ಸೆಂಚುರಿ ಸ್ಟಾರ್ ಆಗಿಬಿಟ್ಟರು. ಈಗ ಮುಂದಿನ ಟಾರ್ಗೆಟ್ 150 ಸಿನಿಮಾ.

Shivarajkumar celebrating 40 years of Cinema Journey and here is his top 5 movies

ಕನ್ನಡ ಚಿತ್ರರಂಗಕ್ಕೆ ಪ್ರತಿವರ್ಷ ಕನಿಷ್ಠ ಎರಡು ಸಿನಿಮಾಗಳನ್ನು ಕೊಡುವ ಏಕೈಕ ನಟ. ಸೂಪರ್‌ಸ್ಟಾರ್‌ಗಳು ಮೂರು ವರ್ಷಕ್ಕೆ ಒಂದೊಂದು ಸಿನಿಮಾ ಮಾಡುವ ಕಾಲದಲ್ಲಿ ಶಿವಣ್ಣ ವರ್ಷಕ್ಕೆ ಎರಡು ಸಿನಿಮಾ ಕೊಡುತ್ತಿದ್ದಾರೆ. ಈ ವರ್ಷ ಕೂಡ ಎರಡು ಸಿನಿಮಾ ರಿಲೀಸ್ ಮಾಡುವ ಉತ್ಸಹದಲ್ಲಿ ಇದ್ದಾರೆ. ಪರಭಾಷೆಯ ಸಿನಿಮಾ ಮಂದಿಗೂ ಶಿವಣ್ಣ ಲುಕ್ ಕಿಕ್ ಕೊಡುತ್ತಿದೆ. ಸ್ಯಾಂಡಲ್‌ವುಡ್‌ನಿಂದ ಶುರುವಾದ ಜರ್ನಿ ಸೌತ್ ಸೂಪರ್‌ ಸ್ಟಾರ್ ಆಗುವವರೆಗೂ ಮುಂದುವರೆದಿದೆ. ಹಾಗಿದ್ದರೆ, ಶಿವಣ್ಣನ 40 ವರ್ಷಗಳ ಈ ಸಿನಿ ಜರ್ನಿಯಲ್ಲಿ ಎವರ್‌ಗ್ರೀನ್ ಟಾಪ್ 5 ಸಿನಿಮಾಗಳು ಇವೇನೆ.


1 ಓಂ (1995)

ನಿರ್ದೇಶಕ: ಉಪೇಂದ್ರ

ಶಿವಣ್ಣನ ವೃತ್ತಿ ಬದುಕಿಗೆ ಹೊಸ ಇಮೇಜ್ ಕೊಟ್ಟ ಸಿನಿಮಾವಿದು. ಸ್ಯಾಂಡಲ್‌ವುಡ್‌ನಲ್ಲಿ ಅಂಡರ್‌ವರ್ಲ್ಡ್ ಸಿನಿಮಾಗಳಿಗೆ ಅಡಿಪಾಯ ಹಾಕಿಕೊಟ್ಟ ಸಿನಿಮಾ. ಬೆಂಗಳೂರಿನ ಅಂಡರ್‌ವರ್ಲ್ಡ್‌ ಹಿನ್ನೆಲೆಯನ್ನು ಇಟ್ಟುಕೊಂಡು ಉಪೇಂದ್ರ ಕಥೆಯನ್ನು ಹೆಣೆದಿದ್ದರು. ಎರಡು ಶೇಡ್‌ಗಳಲ್ಲಿ ಶಿವಣ್ಣನ ಚಿಂದಿ ಉಡಾಯಿಸಿದ್ದರು. ಬಿಡುಗಡೆಯಾದಲ್ಲಿಂದ ಅದೆಷ್ಟೋ ಬಾರಿ ಈ ಸಿನಿಮಾ ರಿಲೀಸ್ ಆಗಿದೆ. ಮರುಬಿಡುಗಡೆ ಆದಾಗಲೆಲ್ಲ ಹೊಸ ಚರಿತ್ರೆಯನ್ನೇ ಬರೆದಿದೆ. 'ಓಂ' ಶಿವಣ್ಣನ ಕರಿಯರ್‌ಗೆ ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ ದಿಕ್ಕನೇ ಬದಲಿಸಿದ ಸಿನಿಮಾ ಆಯ್ತು.

2. ಜೋಗಿ (2005)

ನಿರ್ದೇಶಕ: ಪ್ರೇಮ್

ಪ್ರತಿ 10 ವರ್ಷ ಶಿವಣ್ಣ ಕರಿಯರ್‌ ಟರ್ನಿಂಗ್ ಪಾಯಿಂಟ್ ಆಗುವಂತೆ ಒಂದೊಂದು ಸಿನಿಮಾ ಸಿಕ್ಕಿದೆ. ಅದರಲ್ಲಿ ಪ್ರೇಮ್ ನಿರ್ದೇಶಿಸಿದ ಜೋಗಿ ಕೂಡ ಒಂದು. ಅಂಡರ್‌ವರ್ಲ್ಡ್ ಹಿನ್ನೆಲೆಯನ್ನು ಇಟ್ಟುಕೊಂಡು ಅಮ್ಮ-ಮಗನ ಸೆಂಟಿಮೆಂಟ್ ಕಥೆಯನ್ನು ತೆರೆಮೇಲೆ ತಂದಿದ್ದರು. ಶಿವಣ್ಣ ನಟನೆ, ಸಿನಿಮಾ ಹಾಡುಗಳು, ಆಕ್ಷನ್, ಸೆಂಟಿಮೆಂಟ್‌ ವರ್ಕ್ ಔಟ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಹೊಸ ದಾಖಲೆಯನ್ನು ಬರೆದಿತ್ತು.

3. ಮಫ್ತಿ (2017)

ನಿರ್ದೇಶಕ: ನರ್ತನ್

ನರ್ತನ್ ನಿರ್ದೇಶಿಸಿದ ಚೊಚ್ಚಲ ಸಿನಿಮಾ 'ಮಫ್ತಿ' ಶಿವಣ್ಣನ ಮಾಸ್ ಇಮೇಜ್‌ಗೆ ಹೊಸ ರೂಪ ಕೊಟ್ಟಿತ್ತು. ಈ ಸಿನಿಮಾದಲ್ಲಿ ಶಿವಣ್ಣ ಪಾತ್ರ ಕೇವಲ ಕಣ್ಣುಗಳಲ್ಲಿಯೇ ಮಾತಾಡಿದ್ದು ಹೆಚ್ಚು. ಪವರ್‌ಫುಲ್ ಡಾನ್ ಪಾತ್ರದಲ್ಲಿ ಶಿವಣ್ಣ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದರು. ಇಲ್ಲಿಂದ ಶಿವಣ್ಣನಿಗೆ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿತ್ತು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು.

Shivarajkumar celebrating 40 years of Cinema Journey and here is his top 5 movies


4 AK 47 (1999)

ನಿರ್ದೇಶಕ: ಓಂ ಪ್ರಕಾಶ್ ರಾವ್

1999ರಲ್ಲಿ ರಿಲೀಸ್ ಆದ ಈ ಸಿನಿಮಾ ಆ ವರ್ಷದ ಅತೀ ದೊಡ್ಡ ಹಿಟ್‌ಗಳಲ್ಲಿ ಒಂದಾಗಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶಿಸಿದ ಈ ಸಿನಿಮಾ ದೇಶ ಭಕ್ತಿಯ ಹಿನ್ನೆಲೆಯನ್ನು ಹೊಂದಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಆಗಿದ್ದಲ್ಲದೆ, ಶಿವಣ್ಣ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ.


5 ನಮ್ಮೂರ ಮಂದಾರ ಹೂವೆ (1996)

ನಿರ್ದೇಶಕ: ಸುನೀಲ್ ಕುಮಾರ್ ದೇಸಾಯಿ

ಇಷ್ಟೊಂದು ಆಕ್ಷನ್ ಸಿನಿಮಾಗಳ ಮಧ್ಯೆ ವಿಶಿಷ್ಟವಾಗಿ ನಿಲ್ಲುವ ಸಿನಿಮಾ 'ನಮ್ಮೂರ ಮಂದಾರ ಹೂವೆ'. ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರಲ್ಲಿ ಸುನೀಲ್ ಕುಮಾರ್ ದೇಸಾಯಿ ಕೂಡ ಒಬ್ಬರು. ಇವರ ನಿರ್ದೇಶನದಲ್ಲಿ ಬಂದ 'ನಮ್ಮೂರ ಮಂದಾರ ಹೂವೆ' ಶಿವಣ್ಣ ಕರಿಯರ್‌ಗೆ ಹೊಸ ತಿರುವು ಕೊಟ್ಟಿತ್ತು. ಶಿವಣ್ಣ, ರಮೇಶ್ ಅರವಿಂದ್, ಪ್ರೇಮ ನಟನೆಯ ಸಿನಿಮಾ ಅತೀ ಹೆಚ್ಚು ದಿನ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿತ್ತು.

More from Filmibeat

English summary
Shivarajkumar celebrating 40 years of Cinema Journey and here is his top 5 movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X