Shivarajkumar: ಅಮೆರಿಕದಲ್ಲಿ ಪಂಚೆಯುಟ್ಟು ಶಿವಣ್ಣ ಡ್ಯಾನ್ಸ್.. ಎನರ್ಜಿ ಕಂಡು ಫಿದಾ ಆದ ಟೆಕ್ಸಾಸ್ ಕನ್ನಡಿಗರು

ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಎನರ್ಜಿ ಇರೋ ನಟ ಯಾರು ಅಂದ್ರೆ ಮೊದಲಿಗೆ ನೆನಪಾಗೋ ಹೆಸರು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್. ವಯಸ್ಸು 60 ದಾಟಿದ್ರೂ ಶಿವಣ್ಣನ ಉತ್ಸಾಹ, ಎನರ್ಜಿ ಮುಂದೆ ಹದಿಹರೆಯದವ್ರೂ ಸಪ್ಪೆ ಅಂತಲೇ ಅನಿಸಿಬಿಡುತ್ತೆ. ಇದಕ್ಕೆ ಹೊಸದೊಂದು ನಿದರ್ಶನವೊಂದು ಸಿಕ್ಕಿಬಿಟ್ಟಿದೆ.

ಅಮೆಕಾದ ಟೆಕ್ಸಾಸ್‌ನಲ್ಲಿ 7ನೇ ನಾವಿಕ ವಿಶ್ವ ಕನ್ನಡ ಸಮಾವೇಶ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್‌ಕುಮಾರ್‌ರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆ ಮೇಲೆ ಶಿವಣ್ಣ ಭರ್ಜರಿಯಾಗಿ ಕುಣಿದು ರಂಜಿಸಿದ್ದಾರೆ.

Shivarajkumar dance in America texas event high energy steps fans bold watch video

ಶಿವಣ್ಣ ಪಂಚೆ ತೊಟ್ಟು ಡ್ಯಾನ್ಸ್ ಮಾಡಿದ ಪರಿಗೆ ನೆರೆದಿದ್ದ ಅಭಿಮಾನಿಗಳೆಲ್ಲಾ ಫಿದಾ ಆಗಿ ಹೋಗಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದ್ದು ಶಿವರಾಜ್‌ಕುಮಾರ್ ಅಭಿಮಾನಿಗಳು ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ.

ನಾವಿಕ ವಿಶ್ವ ಸಮಾವೇಶದಲ್ಲಿ ಶಿವಣ್ಣ

ನಾವಿಕ ವಿಶ್ವ ಸಮಾವೇಶ ಅಮೆರಿಕದ ಕನ್ನಡಿಗರ ಪಾಲಿಗೆ ಬಹಳ ಮಹತ್ವದ ಸಮಾರಂಭ. ಇಂದು (ಸೆಪ್ಟೆಂಬರ್ 3) ಸೆಪ್ಟೆಂಬರ್ 1ರಿಂದ ನಡೆಯುತ್ತಿರುವ ಮೂರು ದಿನಗಳ ಈ ಕಾರ್ಯಕ್ರಮದ ಕೊನೆಯ ದಿನ. ಮುಖ್ಯ ಅತಿಥಿಗಳಾಗಿ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್‌ಕುಮಾರ್ ಆಹ್ವಾನಿಸಲಾಗಿತ್ತು. ದಂಪತಿಯನ್ನು ಮೆರವಣಿಗೆಯಲ್ಲಿ ಸಮಾರಂಭ ನಡೆವ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ದೂರದೇಶದ ಕನ್ನಡಿಗರೆಲ್ಲಾ ಒಟ್ಟಾಗಿ ಸೇರಿ ಶಿವಣ್ಣ ದಂಪತಿಯನ್ನು ಖುಷಿಯಿಂದ ಬರಮಾಡಿಕೊಂಡಿದ್ದರು.

ಜೋಷ್‌ನಲ್ಲಿ ಕುಣಿದ ಶಿವರಾಜ್‌ಕುಮಾರ್

ನಾವಿಕ ವಿಶ್ವ ಸಮಾವೇಶದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಡುವೆ ಅಲ್ಲಿನ ಕಲಾವಿದರು ಹುಲಿವೇಷ ಧರಿಸಿ ನೃತ್ಯ ಮಾಡುತ್ತಿದ್ರು. ಆ ಕುಣಿತದ ಬೀಟ್ಸ್‌ಗೆ ಮನಸೋತ ಶಿವಣ್ಣ ಸಖತ್ ಜೋಷ್‌ನಲ್ಲಿ ಹೆಜ್ಜೆ ಹಾಕಿದ್ರು. ಯಾವುದೇ ಹಾಡಿಲ್ಲದೇ ಕೇವಲ ಬೀಟ್ಸ್‌ಗೆ ಶಿವಣ್ಣ ಕುಣಿದ ಪರಿ ಕಂಡು ಅಭಿಮಾನಿಗಳಂತೂ ಫುಲ್ ಫಿದಾ ಆದರು. ಜೋರಾದ ಶಿಳ್ಳೆ ಚಪ್ಪಾಳೆ ಸುರಿಮಳೆಯೇ ಆಯ್ತು.

ಶಿವಣ್ಣ ಮಸ್ತ್ ಡ್ಯಾನ್ಸ್

ಕರುನಾಡ ಚಕ್ರವರ್ತಿಯ ಡ್ಯಾನ್ಸ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಶಿವರಾಜ್‌ಕುಮಾರ್ ತಮ್ಮ ಕೆರಿಯರ್ ಆರಂಭದಿಂದಲೂ ಅದ್ಭುತವಾಗಿ ನೃತ್ಯ ಮಾಡ್ತಿದ್ದು ಅವ್ರ ಡ್ಯಾನ್ಸ್‌ಗೆ ಫಿದಾ ಆಗಿರೋ ಅಭಿಮಾನಿಗಳ ಬಳಗ ದೊಡ್ಡದೇ ಇದೆ. ಇನ್ನು ಅಮೆರಿಕದ ವೇದಿಕೆ ಮೇಲಿನ ಅವರ ನೃತ್ಯ ನೋಡಿದ್ಮೇಲಂತೂ ಶಿವಣ್ಣನ ವಯಸ್ಸು 60 ದಾಟಿದೆ ಅಂದ್ರೆ ನಂಬೋಕೇ ಆಗಲ್ಲ ಅನ್ನೋ ಮಾತೇ ಹೆಚ್ಚು ಚರ್ಚೆಯಾಗ್ತಿದೆ.

'ಘೋಸ್ಟ್' ಸಿನಿಮಾದಲ್ಲಿ ಶಿವಣ್ಣ ಬ್ಯುಸಿ

ಇನ್ನು ಶಿವಣ್ಣನ ಮುಂದಿನ ಎರಡು ಚಿತ್ರಗಳು ಎಲ್ಲೆಡೆ ಭಾರೀ ನಿರೀಕ್ಷೆ ಹುಟ್ಟಿಸಿವೆ. ಎಂ ಜಿ ಶ್ರೀನಿವಾಸ್ ನಿರ್ದೇಶನದ 'ಘೋಸ್ಟ್' ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ಕಲಾವಿದ ಅನುಪಮ್ ಖೇರ್ ಶಿವಣ್ಣನ ಜೊತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ದರೋಡೆ ಸುತ್ತ ಹೆಣೆಯಲಾದ ಥ್ರಿಲ್ಲರ್ ಕತೆ ಎನ್ನಲಾಗಿದೆ. ಈ ಚಿತ್ರ ಶಿವಣ್ಣನ ಕೆರಿಯರ್ನಲ್ಲಿ ವಿಭಿನ್ನ ಎನಿಸಿಕೊಳ್ಳುವ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.

ಟ್ರೆಂಡಿಂಗ್‌ನಲ್ಲಿದೆ 'ಕರಟಕ ದಮನಕ'

ಇನ್ನು ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರ್ತಿರೋ 'ಕರಟಕ ದಮನಕ' ಕೂಡಾ ಬಹಳ ಕುತೂಹಲ ಹುಟ್ಟಿಸಿದೆ. ಇದೇ ಮೊದಲ ಬಾರಿ ಶಿವಣ್ಣ ಜೊತೆ ಬಹುಭಾಷಾ ನಟ ಪ್ರಭುದೇವ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಜರಾಜ್ ಭಟ್ ಶಿವಣ್ಣಗೆ ಆಕ್ಷನ್ ಕಟ್ ಹೇಳ್ತಾ ಇರೋದು ಕೂಡಾ ಇದೇ ಮೊದಲ ಬಾರಿ. ಶಿವಣ್ಣ ಮತ್ತು ಪ್ರಭುದೇವ ಇಬ್ಬರೂ ಒಂದೇ ಚಿತ್ರದಲ್ಲಿ ಇದ್ದಾರೆ ಅಂದ್ಮೇಲೆ ಇಲ್ಲಿ ಡ್ಯಾನ್ಸ್ ಅಭಿಮಾನಿಗಳಿಗಂತೂ ರಸದೌತಣವೇ ಸಿಕ್ಕಂತಾಗೋದು ಪಕ್ಕಾ. ಪಂಚತಂತ್ರದಲ್ಲಿ ಬರುವ ಕತೆಯೊಂದರಲ್ಲಿ ಎರಡು ನರಿಗಳ ಹೆಸರು ಕರಟಕ-ದಮನಕ. ಇದೇ ಹೆಸರನ್ನು ಭಟ್ರು ಚಿತ್ರಕ್ಕೆ ಇಟ್ಟಿದ್ದಾರೆ. ಸಮಾನ ತೂಕದ ಪಾತ್ರಗಳಲ್ಲಿ ಶಿವಣ್ಣ ಮತ್ತು ಪ್ರಭುದೇವ ನಟಿಸುತ್ತಿರೋದು ಅಭಿಮಾನಿಗಳು ಚಿತ್ರವನ್ನು ಕಾತರತೆಯಿಂದ ಕಾಯುವಂತೆ ಮಾಡಿದೆ.

More from Filmibeat

English summary
Shivarajkumar dance in Dothi in America:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X