Ghost: "ಸಿನಿಮಾ ಮಾಡೋದಲ್ಲ.. ಚೆನ್ನಾಗಿ ಪ್ರಮೋಟ್ ಮಾಡ್ಬೇಕು.. 'ಘೋಸ್ಟ್' ನಿರ್ಮಾಪಕನ ವಿರುದ್ಧ ದೊಡ್ಮನೆ ಫ್ಯಾನ್ಸ್ ಕಿಡಿ

ದಕ್ಷಿಣ ಭಾರತದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕ್ರೇಜ್ ಹೆಚ್ಚಾಗಿದೆ. 'ಜೈಲರ್' ಸಿನಿಮಾ ಬಳಿಕ ಎಲ್ಲಿ ನೋಡಿದರೂ ನರಸಿಂಹ ಅಂತ ಕೂಗಿ ಕರೆಯುತ್ತಿದ್ದಾರೆ. ಇದೇ ಕ್ರೇಜ್ ಬೆನ್ನಲ್ಲೇ ಶಿವಣ್ಣನ ಮತ್ತೊಂದು ಸಿನಿಮಾ 'ಘೋಸ್ಟ್' ರಿಲೀಸ್‌ಗೆ ರೆಡಿಯಾಗಿದೆ. ಅಕ್ಟೋಬರ್ 19ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ.

'ಘೋಸ್ಟ್' ಪ್ಯಾನ್ ಇಂಡಿಯಾ ರಿಲೀಸ್ ಆಗಿರುವುದರಿಂದ ಈ ಸಿನಿಮಾ ಮೇಲೆ ನಿರೀಕ್ಷೆಯಿದೆ. 'ಜೈಲರ್'ನಿಂದ ಸಿಕ್ಕಿರೋ ಕ್ರೇಜ್ ಅನ್ನು ಹಾಗೇ ಮುಂದುವರೆಸಿಕೊಂಡು ಹೋಗಬೇಕಿದೆ. ಅದಕ್ಕಾಗಿ ಚಿತ್ರತಂಡ ಎಲ್ಲಾ ಕಡೆಗೂ ಹೋಗಿ ಪ್ರಚಾರ ಮಾಡುತ್ತಿದೆ. ಶಿವಣ್ಣ ಎಲ್ಲೆಲ್ಲಿ ನೀಡುವುದಕ್ಕೆ ಸಾಧ್ಯವೋ ಆ ಎಲ್ಲಾ ಕಡೆಗೂ ಸಂದರ್ಶನ ಕೊಡುತ್ತಿದ್ದಾರೆ.

Shivarajkumar fans are angry at Ghost Producer for not promoting the movie properly

'ಘೋಸ್ಟ್' ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ವಾರ ರಿಲೀಸ್ ಆಗುತ್ತಿದೆ. ಅದೇ ತೆಲುಗಿನಲ್ಲಿ ಮುಂದಿನ ವಾರ ರಿಲೀಸ್ ಆಗಲಿದೆ. ಹೀಗಿದ್ದರೂ 'ಘೋಸ್ಟ್' ಸಿನಿಮಾ ಪ್ರಚಾರ ಹಾಗೂ ಥಿಯೇಟರ್ ಸೆಟಪ್ ಅಭಿಮಾನಿಗಳಿಗೆ ಖುಷಿ ಕೊಟ್ಟಿಲ್ಲ. ಹೀಗಾಗಿ ದೊಡ್ಮನೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಪಕರ ವಿರುದ್ಧ ಕಿಡಿಕಾರುತ್ತಿದ್ದಾರೆ.

'ಘೋಸ್ಟ್' ಪ್ಯಾನ್ ಇಂಡಿಯಾ ರಿಲೀಸ್

ಶ್ರೀನಿ ನಿರ್ದೇಶಿಸುತ್ತಿರುವ 'ಘೋಸ್ಟ್' ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗೆ ಶಿವಣ್ಣ ಮುಂಬೈ ಹಾಗೂ ಕೇರಳಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಸಿನಿಮಾ ಬಗ್ಗೆ ಪ್ರಚಾರ ಮಾಡಿ ಬಂದಿದೆ. ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದಾರೆ. ಆದರೂ, ಶಿವಣ್ಣನ ಅಭಿಮಾನಿಗಳಿಗೆ ಇದು ಸಮಾಧಾನ ಕೊಟ್ಟಿಲ್ಲ. ಹೀಗಾಗಿ ನಿರ್ಮಾಪಕ ಸಂದೇಶ್ ನಾಗರಾಜ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಸಿನಿಮಾ ಮಾಡಿದ ಮೇಲೆ ಚೆನ್ನಾಗಿ ಪ್ರಮೋಟ್ ಮಾಡಬೇಕು ಎಂದು ಹೇಳುತ್ತಿದ್ದಾರೆ.

Shivarajkumar fans are angry at Ghost Producer for not promoting the movie properly

ತರಕಾರಿ ವ್ಯಾಪಾರಿನ ಪ್ರಡ್ಯೂಸರ್ ಆದಂಗಿದೆ

'ಘೋಸ್ಟ್' ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಶಿವಣ್ಣನೊಂದಿಗೆ ಕೆಲಸ ಮಾಡಿ ಅನುಭವವಿರುವ ನಿರ್ಮಾಪಕರು. ಹಲವು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಇಷ್ಟು ದಿನ ಮಾಡಿದ ಪ್ರಚಾರ, ದೊಡ್ಮನೆ ಅಭಿಮಾನಿಗಳಿಗೆ ಇಷ್ಟ ಆಗಿಲ್ಲ. ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ "ಸಿನಿಮಾ ಮಾಡೋದಲ್ಲ ಅದನ್ನು ಚೆನ್ನಾಗ್ ಪ್ರಮೋಟ್ ಮಾಡಬೇಕು.. ತರಕಾರಿ ವ್ಯಾಪಾರಿನ ಫಿಲಂ ಪ್ರೊಡ್ಯೂಸರ್ ಮಾಡಿದಂಗೆ ಇದೆ." ಎಂದು ಆಕ್ರೋಶ ಹೊರಹಾಕಿದ್ದಾರೆ. ಜೊತೆ ಏನೇನು ಚೆನ್ನಾಗಿಲ್ಲ ಅನ್ನೋದನ್ನು ಪಟ್ಟಿ ಮಾಡಿದ್ದಾರೆ.

ಫ್ಯಾನ್ಸ್ ಕೊಟ್ಟ 5 ಕಾರಣಗಳೇನು?

ಅಪ್ಪು ಡೈನಾಸ್ಟಿ ಅನ್ನೋ ಎಕ್ಸ್ (ಟ್ವಿಟರ್) ಪೇಜ್‌ನಲ್ಲಿ ಅಭಿಮಾನಿಗಳು 5 ಕಾರಣಗಳನ್ನು ಕೊಟ್ಟಿದ್ದಾರೆ. ಇದೂವರೆಗೂ 'ಘೋಸ್ಟ್'ಗೆ ಏನೇನು ಸಿಕ್ಕಿಲ್ಲ ಅನ್ನೋದನ್ನು ಹೇಳಿದ್ದಾರೆ. ಆ ಪಟ್ಟಿ ಹೀಗಿದೆ.

1 ಪ್ಯಾನ್ ಇಂಡಿಯಾ ಅಂದ್ರಿ, ನೆಟ್ಟಗೆ ರಿಲೀಸ್ ಇಲ್ಲ
2 ಬೆಂಗಳೂರು ಅಲ್ಲಿ ಒಳ್ಳೆ ಸೆಂಟರ್‌ಗಳಲ್ಲಿ ಬಾಡಿಗೆ ಕಟ್ಟಿಲ್ಲ, ಥಿಯೇಟರ್ ಸೆಟಪ್ ಸರಿ ಇಲ್ಲ
3 ಪ್ರಿ ರಿಲೀಸ್ ಇವೆಂಟ್ ಅಂದ್ರಿ ಅದು ಇಲ್ಲ
4 ತಳ ಮಟ್ಟದ ಪ್ರೊಮೋಷನ್ ಮಾಡಿಲ್ಲ
5 ಮುಂಜಾನೆ ಶೋಗಳು ಇಲ್ಲ..

ಇಷ್ಟೇ ಅಲ್ಲದೆ. "ನೀನು ಶಿವಣ್ಣಗೆ ಇನ್ನೊಂದ್ ಸಲ ಪ್ರೊಡ್ಯೂಸ್ ಮಾಡ್ಬೇಡ ಗುರು" ಎಂದು ಕೊನೆಯಲ್ಲಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದಲ್ಲಿ 'ಘೋಸ್ಟ್' Vs 'ಲಿಯೋ'

ಕರ್ನಾಟಕದಲ್ಲಿ 'ಘೋಸ್ಟ್' Vs 'ಲಿಯೋ' ಅನ್ನುವ ಹಾಗಾಗಿದೆ. ಎರಡೂ ಸಿನಿಮಾಗಳೂ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ 'ಲಿಯೋ'ಗೆ ಹೆಚ್ಚು ರೆಸ್ಪಾನ್ಸ್ ಸಿಕ್ಕಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ. ಇದು ಶಿವಣ್ಣ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, 'ಘೋಸ್ಟ್' ನಿರ್ದೇಶಕ ಶ್ರೀನಿ ಎಂಗೇಜಿಂಗ್ ಸ್ಟೋರಿಯೊಂದಿಗೆ ಶಿವಣ್ಣನನ್ನು ತೋರಿಸಲಿದ್ದಾರೆ ಅನ್ನೋ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ.

More from Filmibeat

English summary
Shivarajkumar fans are angry at Ghost Producer for not promoting the movie properly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X