ಶಿವಣ್ಣ- ಗೀತಕ್ಕ ವಿರುದ್ಧ ಕಿಡಿಕಾರಿದ್ದ ಕುಮಾರ್ ಬಂಗಾರಪ್ಪ; ಸದಾಶಿವನಗರದ ಮನೆಗೆ ಫ್ಯಾನ್ಸ್ ಮುತ್ತಿಗೆ:
ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಮಕ್ಕಳ ನಡುವೆ ವೈಮನಸ್ಸು ಮುಂದುವರೆದಿದೆ. ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್‌ಕುಮಾರ್ ನಡುವಿನ ಸಂಬಂಧ ಸರಿಯಿಲ್ಲ ಅನ್ನೋದು ಗೊತ್ತಿರುವ ವಿಷಯವೇ. ಆದರೆ, ಲೋಕಸಭೆ ಚುನಾವಣೆ ವೇಳೆ ಇದು ತಾರಕ್ಕೇರಿತ್ತು.
ಗೀತಾ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಜೊತೆಗೆ ಶಿವಣ್ಣ ವಿರುದ್ಧವೂ ಕುಮಾರ್ ಬಂಗಾರಪ್ಪ ಸಮರಸಾರಿದ್ದರು. ಲೋಕಸಭೆ ಚುನಾವಣೆ ವೇಳೆ ತನ್ನ ತಂಗಿ ಗೀತಾ ಶಿವರಾಜ್‌ಕುಮಾರ್ ಮನೆ ಬಾಗಿಲು ಮುಚ್ಚಿರುತ್ತೆ ಎಂದು ಟೀಕೆ ಮಾಡಿದ್ದರು. ಈ ವೇಳೆ ಶಿವಣ್ಣ ಅವರನ್ನು ಟೀಕೆ ಮಾಡಿದ್ದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಗೀತಾ ಶಿವರಾಜ್‌ಕುಮಾರ್ ಸೋಲನ್ನು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಟೀಕಿಸಿದ್ದರು. "ಶಿವರಾಜ್ ಕುಮಾರ್ ನಿರುದ್ಯೋಗಿಯಾಗಬೇಕಿಲ್ಲ. ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು" ಎಂದು ಕುಮಾರ್ ಬಂಗಾರಪ್ಪ ಸೋಶಿಯಲ್ ಮೀಡಿಯಾದಲ್ಲಿ ವ್ಯಂಗ್ಯ ಮಾಡಿದ್ದರು. ಇದು ಶಿವಣ್ಣ ಅಭಿಮಾನಿಗಳನ್ನು ಕೆರಳಿಸಿತ್ತು. ಹೀಗಾಗಿ ಬೆಂಗಳೂರಿನಲ್ಲಿರುವ ಕುಮಾರ್ ಬಂಗಾರಪ್ಪ ಮನೆಗೆ ಮುತ್ತಿಗೆಗೆ ಹಾಕಿದ್ದರು.
ಶಿವಣ್ಣ ಹಾಗೂ ರಾಜ್‌ಕುಟುಂಬವನ್ನು ಟೀಕೆ ಮಾಡಿದ್ದಕ್ಕೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ಮನೆಗೆ ಇಂದು (ಜೂನ್ 8) ಮುತ್ತಿಗೆ ಹಾಕಿದ್ದರು. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಶಿವಣ್ಣನನ್ನು ಟೀಕೆ ಮಾಡಿದ್ದಕ್ಕೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದರು. ಸೊರಬದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೊರಗೆ ಬಂದು ಕ್ಷಮೆ ಕೇಳಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದರು.

ಕುಮಾರ್ ಬಂಗಾರಪ್ಪ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಂದಿದ್ದ ಅಭಿಮಾನಿಗಳು ಮನೆಯ ಒಳಗೆ ನುಗ್ಗುವುದಕ್ಕೆ ಪ್ರಯತ್ನ ಪಟ್ಟಿದ್ದರು. ಈ ಕ್ಷಣವೇ ಬಂದ ಪೊಲೀಸರು ಶಿವಣ್ಣನ ಅಭಿಮಾನಿಗಳನ್ನು ತಡೆದಿದ್ದಾರೆ. ಈ ವೇಳೆ ಶಿವಣ್ಣ ಅಭಿಮಾನಿಗಳು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಕೂಡ ನಡೀತು. ಕೂಡಲೇ ಶಿವಣ್ಣನ ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಗೆಲುವಿನ ಬಳಿಕ ಅಭಿನಂದನೆ ಸಲ್ಲಿಸಿ ಕುಮಾರ್ ಬಂಗಾರಪ್ಪ ಪೋಸ್ಟ್ ಮಾಡಿದ್ದರು. ಈ ವೇಳೆ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರನ್ನು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದರು. ಈ ಪೋಸ್ಟ್‌ನಲ್ಲಿ "ನನ್ನ ತಂಗಿಯ ಗಂಡ ಡಾ. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ. ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು. ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಡ ಮನೆಯ ವ್ಯವಹಾರ ಸಾಕಷ್ಟಿರುತ್ತದೆ. ಬೇರೆಯವರಿಗೆ ಅವಕಾಶ ಸಿಗಲಾರದು." ಎಂದಿದ್ದರು. ಇದು ಶಿವಣ್ಣ ಅಭಿಮಾನಿಗಳನ್ನು ಕೆರಳಿಸಿತ್ತು.


Click it and Unblock the Notifications











