ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ 2025: ಶಿವಣ್ಣ, ದುನಿಯಾ ವಿಜಯ್, ಗಣೇಶ್‌ಗೆ ಯಾವ್ಯಾವ ಪ್ರಶಸ್ತಿ?
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. ಈ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜರು ಭಾಗವಹಿಸಿದ್ದರು. ಕನ್ನಡದ ಸಿನಿಮಾ ಪತ್ರಕರ್ತರೇ ಸೇರಿ ನಡೆಸುವ ಈ ಪ್ರಶಸ್ತಿ ಸಮಾರಂಭದ ಆರನೇ ಆವೃತ್ತಿ ಇದಾಗಿದೆ. ಈ ಪ್ರಶಸ್ತಿ ಸಮಾರಂಭದಲ್ಲಿ ಶಿವರಾಜ್‌ಕುಮಾರ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
2024 ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಇದೇ ಮೊದಲ ಬಾರಿಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ. ಹಂಸಲೇಖ ಅವರ ಐದನಿ ಸಂಸ್ಥೆಯಿಂದ ಚಿನ್ನದ ಪದಕ ಮತ್ತು ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಗಿದೆ. ಇವರೊಂದಿಗೆ 'ದುನಿಯಾ' ವಿಜಯ್ ಅವರ 'ಭೀಮ' ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಅಭಿನಯಕ್ಕಾಗಿ 'ಗೋಲ್ಡನ್ ಸ್ಟಾರ್' ಗಣೇಶ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ. 'ಮರ್ಫಿ' ಚಿತ್ರಕ್ಕಾಗಿ ರೋಶನಿ ಪ್ರಕಾಶ್ ಅತ್ಯುತ್ತಮ ನಟಿ, ಪೃಥ್ವಿ ಕೋಣನೂರು ನಿರ್ದೇಶನದ 'ಹದಿನೇಳೆಂಟು' ಸಿನಿಮಾವನ್ನು ವಿಮರ್ಶಕರು 2024ರ ಅತ್ಯುತ್ತಮ ಚಿತ್ರವೆಂದು ಪರಿಗಣಿಸಿದ್ದಾರೆ.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್‌ಗಳಿಗೆ ಒಟ್ಟು 29 ಪ್ರಶಸ್ತಿಗಳನ್ನು ಐದು ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದೆ. ಚೊಚ್ಚಲ ಪ್ರಶಸ್ತಿಗಳು, ತಾಂತ್ರಿಕ ಪ್ರಶಸ್ತಿಗಳು, ಸಂಗೀತ ಪ್ರಶಸ್ತಿಗಳು, ನಟನೆ ಮತ್ತು ನಿರ್ದೇಶನ ಪ್ರಶಸ್ತಿಗಳು ಮತ್ತು ವಿಶೇಷ ತೀರ್ಪುಗಾರರ ಪ್ರಶಸ್ತಿಗಳೆಂದು ವಿಂಗಡನೆ ಮಾಡಲಾಗಿದೆ. ಈ ಪ್ರಶಸ್ತಿಗಳನ್ನು ಹಿರಿಯ ಸಂಗೀತ ಸಂಯೋಜಕ ಹಂಸಲೇಖ, ಹಿರಿಯ ನಿರ್ದೇಶಕರಾದ ನಾಗಾಭರಣ, ನಟಿ ಸುಮನ್ ನಗರ್ಕರ್ ಮತ್ತು ಪದ್ಮಶ್ರೀ ಪುರಸ್ಕೃತ ಡಾ.ಕಾಮಿನಿ ರಾವ್ ವಿಜೇತರಿಗೆ ನೀಡಿ ಗೌರವಿಸಿದ್ದಾರೆ.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪಡೆದ ಗಣ್ಯರ ಪಟ್ಟಿ ಇಲ್ಲಿದೆ.
ಜೀವಮಾನ ಸಾಧನೆ ಪ್ರಶಸ್ತಿ
ಡಾ. ಶಿವರಾಜಕುಮಾರ್
ಅತ್ಯುತ್ತಮ ನಿರ್ದೇಶನ
ವಿಜಯ ಕುಮಾರ್ / ದುನಿಯಾ ವಿಜಯ್ (ಚಿತ್ರ: ಭೀಮ)
ಅತ್ಯುತ್ತಮ ಸಿನಿಮಾ
ಹದಿನೇಳೆಂಟು
ಅತ್ಯುತ್ತಮ ನಟ
ಗಣೇಶ್ (ಚಿತ್ರ: ಕೃಷ್ಣಂ ಪ್ರಣಯ ಸಖಿ)
ಅತ್ಯುತ್ತಮ ಚಿತ್ರಕಥೆ
ಪೃಥ್ವಿ ಕೊಣನೂರು (ಚಿತ್ರ: ಹದಿನೇಳೆಂಟು)
ಅತ್ಯುತ್ತಮ ನಟಿ
ರೋಶಿನಿ ಪ್ರಕಾಶ್ (ಚಿತ್ರ: ಮರ್ಫಿ)
ಅತ್ಯುತ್ತಮ ಪೋಷಕ ನಟಿ
ರೇಖಾ ಕುಡ್ಲಿಗಿ (ಚಿತ್ರ: ಹದಿನೇಳೆಂಟು)
ಅನು ಪ್ರಭಾಕರ್ (ಚಿತ್ರ: ಭೈರಾದೇವಿ)
ಅತ್ಯುತ್ತಮ ಪೋಷಕ ನಟ
ಗೋಪಾಲಕೃಷ್ಣ ದೇಶಪಾಂಡೆ (ಚಿತ್ರ: ಶಾಖಾಹಾರಿ)

ಅತ್ಯುತ್ತಮ ಬಾಲನಟಿ/ನಟ
ಋತುಸ್ಪರ್ಷ (ಚಿತ್ರ: ಟೀಕ್ವಾಂಡೋ ಗರ್ಲ್)
ಅತ್ಯುತ್ತಮ ಸಂಗೀತ ನಿರ್ದೇಶಕ
ಚರಣ್ ರಾಜ್ (ಭೀಮ)
ಅತ್ಯುತ್ತಮ ಗಾಯಕಿ
ಇಂದು ನಾಗರಾಜ್ (ಚಿತ್ರ: ಕೃಷ್ಣಂ ಪ್ರಣಯ ಸಖಿ, ಹಾಡು: ಚಿನ್ನಮ್ಮ)
ಅತ್ಯುತ್ತಮ ಗಾಯಕ
ರಾಹುಲ್ ಮತ್ತು ಎಂ.ಸಿ ಬಿಜ್ಜು (ಚಿತ್ರ: ಭೀಮ, ಹಾಡು: ಬ್ಯಾಡ್ ಬಾಯ್ಸ್)
ಅತ್ಯುತ್ತಮ ಚಿತ್ರಸಾಹಿತಿ
ಡಾ.ನಾಗೇಂದ್ರ ಪ್ರಸಾದ್ (ಚಿತ್ರ: ಕೃಷ್ಣಂ ಪ್ರಣಯ ಸಖಿ, ಹಾಡು: ದ್ವಾಪರ)
ಅತ್ಯುತ್ತಮ ಹಿನ್ನೆಲೆ ಸಂಗೀತ
ರವಿ ಬಸ್ರೂರು (ಚಿತ್ರ: ಭೈರತಿ ರಣಗಲ್)
ಅತ್ಯುತ್ತಮ ನೃತ್ಯ ನಿರ್ದೇಶನ
ಮದನ್ ಹರಿಣಿ (ಗೀತೆ: ಶ್ರೀ ಕೃಷ್ಣಂ ಜಗತ್ ಕರ್ಣಂ, ಚಿತ್ರ: ಕೃಷ್ಣಂ ಪ್ರಣಯ ಸಖಿ)
ಅತ್ಯುತ್ತಮ ಚೊಚ್ಚಲ ನಟ (ಸಂಚಾರಿ ವಿಜಯ್ ಪ್ರಶಸ್ತಿ)
ಸಮರ್ಜಿತ್ ಲಂಕೇಶ್ (ಚಿತ್ರ: ಗೌರಿ)
ಅತ್ಯುತ್ತಮ ಚೊಚ್ಚಲ ನಟಿ (ತ್ರಿಪುರಾಂಭ ಪ್ರಶಸ್ತಿ)
ಶೆರ್ಲಿನ್ ಭೋಸ್ಲೆ (ಚಿತ್ರ: ಹದಿನೇಳೆಂಟು)
ಅತ್ಯುತ್ತಮ ಚೊಚ್ಚಲ ಬರಹಗಾರ (ಚಿ.ಉದಯಶಂಕರ್ ಪ್ರಶಸ್ತಿ)
ಜೈ ಶಂಕರ್ (ಚಿತ್ರ: ಶಿವಮ್ಮ)
ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜ್ ಕುಮಾರ್ ಪ್ರಶಸ್ತಿ)
ರಾಜೇಶ್ ಕೀಳಂಬಿ ಮತ್ತು ರಂಜನಿ ಪ್ರಸನ್ನ (ಚಿತ್ರ: ಶಾಖಾಹಾರಿ)
ಅತ್ಯುತ್ತಮ ಚೊಚ್ಚಲ ನಿರ್ದೇಶನ (ಶಂಕರ್ ನಾಗ್ ಪ್ರಶಸ್ತಿ)
ಉತ್ಸವ್ ಗೊನ್ವಾರ್ (ಚಿತ್ರ: ಫೋಟೋ)
ಅತ್ಯುತ್ತಮ ವಿಎಫ್ ಎಕ್ಸ್
ನಿರ್ಮಲ ಕುಮಾರ್ (ಚಿತ್ರ: ಬಘೀರ)
ಅತ್ಯುತ್ತಮ ಸಾಹಸ ನಿರ್ದೇಶನ
ಚೇತನ್ ಡಿಸೋಜ್ (ಮ್ಯಾಕ್ಸ್)
ಅತ್ಯುತ್ತಮ ಕಲಾ ನಿರ್ದೇಶನ
ಜಿ. ಶಿವಕುಮಾರ್ (ಚಿತ್ರ: ಯುಐ)
ಅತ್ಯುತ್ತಮ ಸಂಕಲನ
ಉಜ್ವಲ್ ಚಂದ್ರ (ಚಿತ್ರ: ಶಾಲಿವಾಹನ ಶಕೆ)
ಅತ್ಯುತ್ತಮ ಸಂಭಾಷಣೆಕಾರ
ನಾಗರಾಜ್ ಸೋಮಯಾಜಿ (ಮರ್ಯಾದೆ ಪ್ರಶ್ನೆ)
ಅತ್ಯುತ್ತಮ ಛಾಯಾಗ್ರಹಣ
ಶೇಖರ್ ಚಂದ್ರ (ಮ್ಯಾಕ್ಸ್)
ಜ್ಯೂರಿ ಪ್ರಶಸ್ತಿಗಳು
1. ಮಮತಾ ರಾಹುತ್ (ಚಿತ್ರ: ತಾರಿಣಿ)
2. ಪಳನಿ ಡಿ ಸೇನಾಪತಿ (ಸೌಂಡ್ ಎಂಜಿನೀಯರಿಂಗ್)
3. ಡಾ.ಪೂಜಾ ರಾವ್ (ಮಾಸ್ಟರ್ ಕ್ಲಾಸ್ ಸೀರೀಸ್)
4. ಡ್ರಾಗನ್ ಮಂಜು (ಪ್ರತಿನಾಯಕನಾಗಿ ಅತ್ಯುತ್ತಮ ಚೊಚ್ಚಲ ಚಿತ್ರ - ಭೀಮ)


Click it and Unblock the Notifications











