ಮಾಸ್ ಮಹಾರಾಜನ ಜೊತೆ ಕೈ ಜೋಡಿಸಿದ ಶಿವಣ್ಣ: 'ಟೈಗರ್ ನಾಗೇಶ್ವರ್ ರಾವ್'ಗೆ 'ಸಿಂಹದ ಮರಿ' ಬಲ
ಟಾಲಿವುಡ್‌ನ ಮಾಸ್ ಮಹಾರಾಜ ರವಿತೇಜ.. ಕರುನಾಡ ಚಕ್ರವರ್ತಿ ಶಿವಣ್ಣ ಇವರಿಬ್ಬರೂ ಜೊತೆಯಾದರೆ ಆ ಪವರೇ ಬೇರೆ. ರವಿತೇಜ ಹಾಗೂ ಶಿವಣ್ಣ ಇಬ್ಬರೂ ಮಾಸ್ ಹೀರೊಗಳೇ. ಇವರಿಬ್ಬರು ಒಂದೇ ಸಿನಿಮಾಗೆ ಸೇರಿದರೆ ಆ ಖದರ್ ಬೇರೆ ಇರುತ್ತೆ.
ರವಿತೇಜ ನಟಿಸುತ್ತಿರುವ ಹೊಸ ಸಿನಿಮಾ 'ಟೈಗರ್ ನಾಗೇಶ್ವರ್ ರಾವ್' ಪ್ರಚಾರ ಆರಂಭಿಸಿದೆ. ಇದೇ ಮೇ 24ರಂದು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಇದಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ.

'ಟೈಗರ್ ನಾಗೇಶ್ವರ್ ರಾವ್' ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಹೌದು. ಹೀಗಾಗಿ ಎಲ್ಲಾ ಭಾಷೆಯಲ್ಲೂ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಿವಣ್ಣ ವಾಯ್ಸ್ ಕೊಟ್ಟಿರೋದೇ ಇದರ ಮೊದಲ ಪ್ರಯತ್ನ.
'ಟೈಗರ್'ಗೆ 'ಸಿಂಹದ ಮರಿ' ಬಲ
ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ 'ಟೈಗರ್ ನಾಗೇಶ್ವರ್ ರಾವ್' ರಿಲೀಸ್‌ಗೆ ಪೂರ್ವ ತಯಾರಿ ನಡೆಯುತ್ತಿದೆ. ಇದರ ಮೊದಲ ಹೆಜ್ಜೆನೇ ಫಸ್ಟ್ ಲುಕ್. ರವಿತೇಜ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಫಸ್ಟ್ ಲುಕ್ ಐದು ಭಾಷೆಗಳಲ್ಲಿ ರಿವೀಲ್ ಆಗುತ್ತಿದೆ. ಹೀಗಾಗಿ ಕನ್ನಡದ ಸೂಪರ್‌ಸ್ಟಾರ್ ಶಿವಣ್ಣ ಮಾಸ್ ಮಹಾರಾಜನಿಗೆ ಸಾಥ್ ನೀಡಿದ್ದಾರೆ.

'ಟೈಗರ್ ನಾಗೇಶ್ವರ್ ರಾವ್' ಫಸ್ಟ್ ಲುಕ್‌ಗೆ ಸೆಂಚುರಿ ಸ್ಟಾರ್ ಧ್ವನಿ ನೀಡಿದ್ದಾರೆ. ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಮ್ಯಾಜಿಕಲ್ ವಾಯ್ಸ್‌ನಿಂದ 'ಟೈಗರ್ ನಾಗೇಶ್ವರ್ ರಾವ್' ಪ್ರಪಂಚಕ್ಕೆ ಪೇಕ್ಷಕರನ್ನು ಕರೆದುಕೊಂಡು ಹೋಗಲಿದ್ದಾರೆ.
ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ
'ಟೈಗರ್ ನಾಗೇಶ್ವರ್ ರಾವ್' 70ರ ಕಾಲಘಟ್ಟದ ಸಿನಿಮಾ. ಹೈದರಾಬಾದ್‌ಮ ಸ್ಟುವರ್ಟ್ ಪುರಂ ಅನ್ನೋ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನವನ್ನು ಈ ಕಥೆ ಆಧರಿಸಿದೆ. ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತಲೂ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರುತ್ತೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ಮಾಸ್ ಮಹಾರಾಜ ರವಿತೇಜಾಗೆ ಹೀರೊಯಿನ್ಸ್.
ರವಿತೇಜ ಅವರ 'ಟೈಗರ್ ನಾಗೇಶ್ವರ್ ರಾವ್' ಸಿನಿಮಾವನ್ನು ವಂಶಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು 'ದಿ ಕಾಶ್ಮೀರಿ ಫೈಲ್ಸ್' ಹಾಗೂ 'ಕಾರ್ತಿಕೇಯ-2' ನಂತಹ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿರೋ ಅಭಿಷೇಕ್ ಅರ್ಗವಾಲ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಇದೇ ವೇಳೆ ಕನ್ನಡದಲ್ಲಿ ಶಿವಣ್ಣ ಬಲ ಕೊಟ್ಟಿರೋದು ಹೇಗೆ ವರ್ಕ್ ಆಗುತ್ತೆ ಅನ್ನೋ ಕುತೂಹಲವಿದೆ.
'ವಜ್ರಕಾಯ'ಗಾಗಿ ಬಂದಿದ್ದ ಮಾಸ್ ಮಹಾರಾಜ
ಶಿವರಾಜ್‌ಕುಮಾರ್ ಅಭಿನಯದ 'ವಜ್ರಕಾಯ' ಸಿನಿಮಾದ ಹಾಡಿಗೆ ಶಿವಣ್ಣನ ಜೊತೆ ರವಿತೇಜ ಹೆಜ್ಜೆ ಹಾಕಿದ್ದರು. ಹೀಗಾಗಿ ಶಿವಣ್ಣ ಹಾಗೂ ರವಿತೇಜ ನಡುವೆ ಉತ್ತಮ ಭಾಂಧವ್ಯವಿದೆ. ಇದೇ ಕಾರಣಕ್ಕೆ ಶಿವಣ್ಣ ಈಗ ರವಿತೇಜಾ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ.
'ಟೈಗರ್ ನಾಗೇಶ್ವರ್ ರಾವ್' ದಸರಾ ಹಬ್ಬಕ್ಕೆ ಬಾಕ್ಸಾಫೀಸ್ ಬೇಟೆಗೆ ಇಳಿಯುತ್ತಿದೆ. ಇದೇ ವರ್ಷ ಅಕ್ಟೋಬರ್ 22ರಂದು ವಿಶ್ವದಾದ್ಯಂತ ರವಿತೇಜ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಹಬ್ಬಕ್ಕೆ ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಸ್ ಗಳಿಕೆ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ.


Click it and Unblock the Notifications











