'ಮಫ್ತಿ' ನಿರ್ದೇಶಕ ನರ್ತನ್ 'ಯಶ್ 19' ಕೈ ಬಿಟ್ಟಿದ್ದೇಕೆ? ರಾಕಿ ಬಾಯ್‌ಗೆ ಇನ್ನೂ ಸ್ಕ್ರಿಪ್ಟ್ ಮಾಡ್ತಿರೋದೇಕೆ?
'ಮಫ್ತಿ' ಸಿನಿಮಾ ಬಳಿಕ ನರ್ತನ್ ಕನ್ನಡದ ಸ್ಟಾರ್ ನಟನಾಗಿ ಹೊರಹೊಮ್ಮಿದ್ದರು. ಇತ್ತ 'ಕೆಜಿಎಫ್' ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬಂದರೆ ಹೇಗಿರುತ್ತೆ? ಅನ್ನುವಾಗಲೇ ಈ ಜೋಡಿ ಒಂದಾಗಿತ್ತು.
'ಕೆಜಿಎಫ್ 2' ಸಿನಿಮಾ ಬಳಿಕ ಯಶ್ 19ನೇ ಸಿನಿಮಾ ಆಕ್ಷನ್ ಕಟ್ ಹೇಳೋದೇ ನರ್ತನ್ ಅನ್ನುವ ಮಟ್ಟಿಗೆ ಸುದ್ದಿಯಾಗಿತ್ತು. ನರ್ತನ್ ಕೂಡ ರಾಕಿ ಭಾಯ್ 19ನೇ ಸಿನಿಮಾ ಮೂರು ವರ್ಷಗಳಿಂದ ಸ್ಕ್ರಿಪ್ಟ್ ಮಾಡುತ್ತಿದ್ದರು. ಆದರೆ, 'ಕೆಜಿಎಫ್ 2' ಬಳಿಕವೂ ನರ್ತನ್ ಹಾಗೂ ಯಶ್ ಸಿನಿಮಾ ಸೆಟ್ಟೇರಲೇ ಇಲ್ಲ.

ರಾಕಿ ಭಾಯ್ ಅಭಿಮಾನಿಗಳು ಈ ಸಿನಿಮಾಗಾಗಿ ಕಾದು ಕೂತಿದ್ದಷ್ಟೇ ಬಂದಿತ್ತು. ಇದ್ದಕ್ಕಿದ್ದಂತೆ ಯಶ್ 19ನೇ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುತ್ತಿಲ್ಲ ಅನ್ನೋ ಸುದ್ದಿ ವೈರಲ್ ಆಯ್ತು. ಆ ಬಳಿಕವೇ ನರ್ತನ್ 'ಭೈರತಿ ರಣಗಲ್' ಸಿನಿಮಾವನ್ನು ಟೇಕಾಫ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ 19 ಯಾಕೆ ಸೆಟ್ಟೇರಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ನರ್ತನ್ 'ಯಶ್ 19' ಕೈ ಬಿಟ್ಟಿದ್ದೇಕೆ?
'ಕೆಜಿಎಫ್ 2' ಬಳಿಕ ರಾಕಿ ಭಾಯ್ ರೇಂಜ್ ಬದಲಾಗಿತ್ತು. ನಿರೀಕ್ಷೆಗಳು ಗಗನಕ್ಕೆರಿತ್ತು. ಹೀಗಾಗಿ ಯಶ್ ನೆಕ್ಸ್ಟ್ ಲೆವೆಲ್ ಸಿನಿಮಾವನ್ನು ಎದುರು ನೋಡುತ್ತಿದ್ದರು. ಹೀಗಾಗಿ ಮೂರು ವರ್ಷದಿಂದ ನರ್ತನ್ ಮಾಡಿದ ಸ್ಕ್ರಿಪ್ಟ್ ಯಶ್‌ಗೆ ಇಷ್ಟ ಆಗುತ್ತಿಲ್ಲ ಅನ್ನೋ ಸುದ್ದಿ ಓಡಾಡಿತ್ತು. ಈಗ ಯಶ್ 19 ಸಿನಿಮಾವನ್ನು ನರ್ತನ್ ಯಾಕೆ ಮಾಡುತ್ತಿಲ್ಲ ಅನ್ನೋದನ್ನು 'ಭೈರತಿ ರಣಗಲ್' ಸಿನಿಮಾ ಮುಹೂರ್ತದ ವೇಳೆ ರಿವೀಲ್ ಮಾಡಿದ್ದಾರೆ.

ನರ್ತನ್ ಮಾಡಿಕೊಂಡಿದ್ದ ಸಿನಿಮಾ ಕಥೆ ಈಗಾಗಲೇ ಸಿನಿಮಾ ಆಗಿಬಿಟ್ಟಿದೆ. ಈ ಕಾರಣಕ್ಕೆ ಯಶ್ ಸ್ಟ್ರಿಪ್ಟ್ ಬದಲಾಯಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಮಾತನ್ನು 'ಭೈರತಿ ರಣಗಲ್' ಸಿನಿಮಾ ಸೆಟ್ಟೇರಿದ ವೇಳೆ ನರ್ತನ್ ಮಾಧ್ಯಮಗಳಿಗೆ ರಿವೀಲ್ ಮಾಡಿದ್ದಾರೆ.
"ಯಶ್ ಜೊತೆಗಿನ ಸಿನಿಮಾ ನಿಂತಿಲ್ಲ"
ಯಶ್ ಅಭಿಮಾನಿಗಳಿಗೆ ಖುಷಿ ವಿಷಯ ಏನಂದರೆ, ಇವರಿಬ್ಬರ ಸಿನಿಮಾ ನಿಂತಿಲ್ಲ. ರಾಕಿ ಭಾಯ್ ಸಿನಿಮಾಗೆ ಸ್ಕ್ರಿಪ್ಟ್ ಕೆಲಸ ಮುಂದುವರೆದಿದೆ. ಯಶ್ ಕೂಡ ನರ್ತನ್ ಜೊತೆ ಸಂಪರ್ಕದಲ್ಲಿ ಇರೋದಾಗಿ ಹೇಳಿದ್ದಾರೆ. ಓಟಿಟಿಗಳಲ್ಲಿ ದಿನಕ್ಕೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತವೆ. ಅದರಲ್ಲಿ ಯಾವುದೋ ಒಂದು ಸಿನಿಮಾ ನಮ್ಮ ಕಥೆಯನ್ನೇ ಹೋಲಿಕೆ ಆಗುತ್ತೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
'ಕೆಜಿಎಫ್ 2' ಬಳಿಕ ಯಶ್‌ಗೆ ಬೇರೆ ಲೆವೆಲ್‌ಗೆ ಸಿನಿಮಾ ಮಾಡಬೇಕಿದ್ದು, ಅದಕ್ಕೆ ತಕ್ಕಂತೆ ಕಥೆ ಸ್ಟ್ರೀಪ್ಟ್ ಅನ್ನು ತಿದ್ದುಪಡಿ ಮಾಡುತ್ತಿರುವುದಾಗಿ ನರ್ತನ್ ರಿವೀಲ್ ಮಾಡಿದ್ದಾರೆ. ಈ ಮೂಲಕ ಯಶ್ ಹಾಗೂ ನರ್ತನ್ ಸಿನಿಮಾ ನಿಂತಿಲ್ಲ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಯಶ್ 19ಗಿಂತ ಮುನ್ನ 'ಭೈರತಿ ರಣಗಲ್'
'ಮಫ್ತಿ' ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರುತ್ತಿದ್ದಂತೆ 'ಭೈರತಿ ರಣಗಲ್' ಸೆಟ್ಟೇರಬೇಕಿತ್ತು. ಅಷ್ಟರೊಳಗೆ ಯಶ್ 19 ಸಿನಿಮಾಗೆ ಕರೆ ಬಂದಿತ್ತು. ಆ ವೇಳೆ ಶಿವಣ್ಣ ಕೂಡ ಬ್ಯುಸಿಯಾಗಿದ್ದರು. ಹೀಗಾಗಿ ಅಂದು 'ಭೈರತಿ ರಣಗಲ್' ಪಕ್ಕಕ್ಕಿಟ್ಟು ಯಶ್ 19ಗೆ ಸ್ಟ್ರಿಪ್ಟ್ ಮಾಡಲು ಶುರುಮಾಡಿದ್ದರು.
'ಭೈರತಿ ರಣಗಲ್' ಸಿನಿಮಾ 'ಮಫ್ತಿ'ಯ ಪ್ರೀಕ್ವೆಲ್. ಹೀಗಾಗಿ ಶಿವಣ್ಣನ ಹೊಸ ರೂಪ ಈ ಸಿನಿಮಾದಲ್ಲಿ ಕಾಣಸಿಗಲಿದೆ. ಮತ್ತಷ್ಟು ಮಾಸ್ ಅವತಾರದಲ್ಲಿ ಸೆಂಚುರಿಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರೆ. 2024ರ ಮಾರ್ಚ್ ಹೊತ್ತಿಗೆ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ನಿರ್ದೇಶಕ ನಿರ್ಧರಿಸಿದ್ದಾರೆ. ಅಷ್ಟರೊಳಗೆ ಯಶ್ 19 ಸಿನಿಮಾ ಸೆಟ್ಟೇರುವ ಸಾಧ್ಯತೆಯದೆ.


Click it and Unblock the Notifications











