Bhairathi Ranagal Twitter Review: 'ಭೈರತಿ ರಣಗಲ್' ಸಿನಿಮಾ ಶಿವಣ್ಣನ ಫ್ಯಾನ್ಸ್ ಏನಂದ್ರು?
ಸೆಂಚುರಿ ಸ್ಡಾರ್ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಇಂದು (ನವೆಂಬರ್ 15) ಅದ್ಧೂರಿಯಾಗಿ ರಿಲೀಸ್ ಆಗಿದೆ. 'ಮಫ್ತಿ' ಬಳಿಕ ಮತ್ತೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ಕೂಡ ತುದಿಗಾಲಲ್ಲಿ ನಿಂತಿದ್ದರು. ಇದು 'ಮಫ್ತಿ' ಸಿನಿಮಾದ ಪ್ರೀಕ್ವೆಲ್ ಆಗಿದ್ದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಹುಟ್ಟಾಕಿತ್ತು.
'ಮಫ್ತಿ' ಸಿನಿಮಾದಲ್ಲಿ ಶಿವಣ್ಣ ಪಾತ್ರ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಆಗಿತ್ತು. ಸೆಂಚುರಿ ಸ್ಟಾರ್ ಮ್ಯಾನರಿಸಂ, ಕಣ್ಣಿನಲ್ಲೇ ಯುದ್ಧ ಸಾರುವ ಶಿವಣ್ಣನನ್ನು ನೋಡಿ ಪ್ರೇಕ್ಷಕರು ಕಳೆದು ಹೋಗಿದ್ದರು. ಭೈರತಿ ರಣಗಲ್ ಯಾರು? ಹಿಂದೆ 'ಭೈರತಿ ರಣಗಲ್' ಹೇಗಿದ್ದ? ಭೈರತಿ ರಣಗಲ್ ವೈಲೆಂಟ್ ಆಗಿದ್ದು ಯಾಕೆ? ಇಂತಹ ಹಲವು ಪ್ರಶ್ನೆಗಳಿಗೆ ಈ ಪ್ರೀಕ್ವೆಲ್‌ನಲ್ಲಿ ಉತ್ತರ ಕೊಡುವುದಕ್ಕೆ ಮುಂದಾಗಿದ್ದಾರೆ.

'ಭೈರತಿ ರಣಗಲ್' ಸಿನಿಮಾವನ್ನು ಕರ್ನಾಟಕದಲ್ಲಿ ಸುಮಾರು 365ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮೊದಲ ದಿನ ಫ್ಯಾನ್ಸ್‌ಗಳಿಗಾಗಿ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಸಿನಿಮಾ ಆರಂಭ ಆದಾಗಲೇ ಕ್ರೇಜ್ ಹುಟ್ಟಾಗಿದ್ದ ಈ ಸಿನಿಮಾವನ್ನು ನೋಡಿ ಪ್ರೇಕ್ಷಕರು ಏನಂದ್ರು? ಟ್ವಿಟರ್‌ನಲ್ಲಿ ಈ ಸಿನಿಮಾ ಬಗ್ಗೆ ಕ್ರೇಜ್ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಒನ್ ಮ್ಯಾನ್ ಶೋ"
ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ 'ಭೈರತಿ ರಣಗಲ್' ಸಿನಿಮಾ ಯಾವಾಗ ನೋಡುತ್ತೇವೋ ಅನ್ನೋ ಕಾತುರವಿತ್ತು. ಯಾಕಂದ್ರೆ 'ಮಫ್ತಿ' ಸಿನಿಮಾ ಆ ಮಟ್ಟಿಗೆ ಕ್ರೇಜ್ ಅನ್ನು ಹುಟ್ಟಾಕಿತ್ತು. ನಿರೀಕ್ಷೆಯಂತೆ ಕೊನೆಗೂ ಈ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ನೋಡಿ ಬಂದವರು ಟ್ವಿಟರ್ (ಎಕ್ಸ್)ನಲ್ಲಿ ಕ್ರೇಜಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಕ್ವಿಟ್ ರಿವ್ಯೂ ಕೊಡುತ್ತಿದ್ದಾರೆ. "ಯಪ್ಪಾ.. ಒನ್ ಮ್ಯಾನ್ ಶೋ ಇದು. ಇಂಟರ್‌ವಲ್‌ಗಾಗಿಯೇ ಸಿನಿಮಾ ನೋಡಬಹುದು. ಹೀರೋ ಹೀರೋ ಹ್ಯಾಟ್ರಿಕ್ ಹೀರೋ ಅಷ್ಟೇ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಫ್ಯಾಮಿಲಿ ಜೊತೆ ಸಿನಿಮಾ ನೋಡ್ಬಹುದು
"ಈ ಸಿನಿಮಾ ಬಹುತೇಕ ಡ್ರಾಮದ ಮೇಲೆ ಸಾಗುತ್ತೆ. ಈ ಸಿನಿಮಾದಲ್ಲಿ ಅದನ್ನು ನಿರೀಕ್ಷೆ ಮಾಡಬಹುದು. ಸೆಕೆಂಡ್ ಹಾಫ್‌ನಲ್ಲಿ ಎಲೆವೆಷನ್ ಸೀನ್‌ಗಳನ್ನು ನೋಡಬಹುದು. ಹಿನ್ನೆಲೆ ಸಂಗೀತ ಇನ್ನಷ್ಟು ಚೆನ್ನಾಗಿ ಕೊಡಬಹುದಿತ್ತು. ಕೆಲವು ಮಾಸ್ ಸೀನ್‌ಗಳು ಭಯಂಕರವಾಗಿದೆ. ಫ್ಯಾಮಿಲಿ ಜೊತೆ ಕೂಡ ಸಿನಿಮಾ ನೋಡಬಹುದು. ಒಂದೊಳ್ಳೆ ಡಿಸೆಂಟ್ ಸಿನಿಮಾ ಎನ್ನಬಹುದು. 3/5 ಅಂಕ" ಎಂದು ಮತ್ತೊಬ್ಬರ ನೆಟ್ಟಿಗರು ಹೇಳಿದ್ದಾರೆ.
"ಮೈಯಲ್ಲ ಜುಂ ಅಂತು"
"ಈಗತಾನೇ ಫಸ್ಟ್ ಹಾಫ್ ಮುಗಿದಿದೆ. ಉಫ್ ಏನ್ ಸಿನಿಮಾ ಗುರು. ಮೈಯಲ್ಲ ಜುಂ ಅಂದುಬಿಡ್ತು. ಹೊರಗೆ ಬಂದ್ರೂ ಮೈಯಲ್ಲ ಜುಂ ಅಂತಿದೆ. ಒಂದು ವಾರ ಆದರೂ ರಣಗಲ್ ಪಾತ್ರ ತಲೆಯಲ್ಲಿ ಗಿರಿಕಿ ಹೊಡೆಯುತ್ತಲೇ ಇರುತ್ತೆ. ಇಂತಹ ಸಿನಿಮಾವನ್ನು ಬೇರೆ ಯಾರೋ ಮಾಡುತ್ತಾರೆ ಅಂತ ಯಾವತ್ತೂ ಊಹೆ ಮಾಡಿಕೊಳ್ಳಬೇಡಿ." ಎಂದು ಶಿವಣ್ಣನ ಅಭಿಮಾನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಶಿವಣ್ಣ ಮತ್ತು ಲಾಂಗ್
"ಶಿವಣ್ಣ ಮತ್ತು ಲಾಂಗ್ ಎಂದೂ ಮುಗಿಯದ ಕಥೆ. ಲಾಂಗ್ ಹಿಡಿದ ದೃಶ್ಯಗಳಿಗೆ ಪ್ರೇಕ್ಷಕರು ಶಿಳ್ಳೆ ಹಾಕುತ್ತಾರೆ. ಈ ಸಿನಿಮಾ ಥಿಯೇಟರ್‌ನಲ್ಲಿ ವೈಬ್ಸ್ ಚೆನ್ನಾಗಿದೆ." ಎಂದು ಶಿವಣ್ಣನ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಕ್ವಿಕ್ ವಿಮರ್ಶೆ ಕೊಟ್ಟಿದ್ದಾರೆ.
ಫ್ಯಾನ್ಸ್ ಶೋಗೆ ಹೆಣ್ಮಕ್ಕಳನ್ನ ಕರೆಸೋ ಗಂಡಸು ಒಬ್ಬರೇ
ಶಿವರಾಜ್‌ಕುಮಾರ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಥಿಯೇಟರ್ ಮುಂದೆ ಸಂಭ್ರಮ ಮುಗಿಲು ಮುಟ್ಟುತ್ತೆ. ಶಿವಣ್ಣನ ಅಭಿಮಾನಿಗಳು ಥಿಯೇಟರ್ ಮುಂದೆ ಶಿಳ್ಳೆ ಹಾಗೂ ಕುಣಿದು ಸಂಭ್ರಮಿಸುತ್ತಾರೆ. ಅಷ್ಟೇ ಯಾಕೆ ಸ್ಕ್ರೀನ್ ಮುಂದೆ ಭರ್ಜರಿ ಸ್ಟೆಪ್ ಹಾಕುತ್ತಾರೆ. ಅದರಲ್ಲೂ 'ಭೈರತಿ ರಣಗಲ್' ಫ್ಯಾನ್ಸ್ ಶೋ ನೋಡಲು ಬಂದ ಫೀಮೇಲ್ ಫ್ಯಾನ್ಸ್ ಕೂಡ ಸಖತ್ ಸ್ಟೆಪ್ಸ್ ಹಾಕಿದ್ದಾರೆ. "ಫ್ಯಾನ್ ಶೋಗೆ ಸ್ಕ್ರೀನ್ ಮುಂದೆ ಹೆಣ್ಣುಮಕ್ಕಳನ್ನ ಕರೆಸೋ ಗಂಡಸು ಇವ್ರು ಒಬ್ರೇ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಹಾಕಿದ್ದಾರೆ.


Click it and Unblock the Notifications











