'ಬಂದೂಕಿನ ಗುಂಡಲ್ಲ.. ಅದನ್ನಿಡಿದ ಗಂಡು ಅಪಾಯಕಾರಿ': ಶಿವಣ್ಣನ ಹೊಸ ಸಿನಿಮಾ!

ಸ್ಯಾಂಡಲ್‌ವುಡ್‌ನ ಮತ್ತೊಂದು ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣ ಆಗುತ್ತಿದೆ. ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಮತ್ಯಾರೂ ಅಲ್ಲ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್.

ಶಿವರಾಜ್‌ಕುಮಾರ್ ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶಿವಣ್ಣ ಒಪ್ಪಿಕೊಂಡ ಸಿನಿಮಾ ನಿರಂತರವಾಗಿ ಶೂಟಿಂಗ್ ಶುರುವಾಗಿದೆ. ಸದ್ಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ವೇದ' ಬಿಡುಗಡೆ ಸಜ್ಜಾಗುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾಗೆ ಶಿವಣ್ಣ ಜೈ ಅಂದಿದ್ದಾರೆ.

ಶಿವರಾಜ್‌ಕುಮಾರ್ ಈಗಾಗಲೇ ಒಪ್ಪಿಕೊಂಡಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಅನ್ನೋದು ವಿಶೇಷ. ಸದ್ಯ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ತೆಲುಗು ನಿರ್ದೇಶಕ ಸೆಂಚುರಿ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಮುಂದೆ ಓದಿ.

ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ

ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ

ಈಗಾಗಲೇ ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾವೊಂದು ಸಹಿ ಹಾಕಿದ್ದರು. ಆದರೆ, ಆ ಸಿನಿಮಾ ಬಗ್ಗೆ ಏನೂ ಸುಳಿವು ಇಲ್ಲ. ಆದ್ರೀಗ ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಈ ಸಿನಿಮಾಗೆ ಸೆಂಚುರಿ ಸ್ಟಾರ್ ಹೀರೊ. ಸದ್ಯ ಪ್ಯಾನ್ ಇಂಡಿಯಾ ಆಕ್ಷನ್ ಥ್ರಿಲ್ಲರ್ ಅಂತಷ್ಟೇ ಗೊತ್ತಾಗಿದೆ. ಆದರೆ, ಎಷ್ಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಅನ್ನೋದನ್ನು ಚಿತ್ರತಂಡ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ.

2023ಕ್ಕೆ ಸೆಂಚುರಿ ಸಿನಿಮಾ ಶುರು

2023ಕ್ಕೆ ಸೆಂಚುರಿ ಸಿನಿಮಾ ಶುರು

ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಶಿವಣ್ಣ ವಿಭಿನ್ನ ಲುಕ್ ಹಾಗೂ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಕಥೆ ಕೇಳಿ ಶಿವಣ್ಣ ಕೂಡ ಥ್ರಿಲ್ ಆಗಿದ್ದಾರಂತೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, 2023ಕ್ಕೆ ಸಿನಿಮಾ ಆರಂಭ ಆಗಲಿದೆ. " ಬಂದೂಕಿನ ಗುಂಡು ಅಪಾಯಕಾರಿ ಇಲ್ಲ. ಅದನ್ನು ಹಿಡಿದಿರುವ ಗಂಡು ಅಪಾಯಕಾರಿ. ಕರುನಾಡ ಚಕ್ರವರ್ತಿ ಜೊತೆ ಆಕ್ಷನ್ ಥ್ರಿಲ್ಲರ್ ಸಿನಿಮಾ ಶೂಟಿಂಗ್ 2023ರಿಂದ ಆರಂಭ." ಎಂದು ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿದೆ. ಅಂದ್ಹಾಗೆ ಈ ಸಿನಿಮಾವನ್ನು ಸುಧೀರ್ ಚಂದ್ರ ಪಡಿರಿ ನಿರ್ಮಾಣ ಮಾಡುತ್ತಿದ್ದಾರೆ.

ಕಾರ್ತಿಕ್ ಅದ್ವೈತ್ ಹಿನ್ನೆಲೆಯೇನು?

ಕಾರ್ತಿಕ್ ಅದ್ವೈತ್ ಹಿನ್ನೆಲೆಯೇನು?

ಅಂದ್ಹಾಗೆ ಡಾ.ಶಿವರಾಜ್ ಕುಮಾರ್‌ಗೆ ಆಕ್ಷನ್ ಕಟ್ ಹೇಳ್ತಿರೋ ಯುವ ನಿರ್ದೇಶಕ ತೆಲುಗಿನವರು. ಕಾರ್ತಿಕ್ ಅದ್ವೈತ್ ಈಗಾಗಲೇ ತಮಿಳಿನಲ್ಲಿ ವಿಕ್ರಂ ಪ್ರಭು ನಟನೆಯ 'ಪಾಯುಮ್ ಒಲಿ ನೀ ಎನಕ್ಕು' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಇದು ಇವರಿಗೆ ನಿರ್ದೇಶಕನಾಗಿ ಎರಡನೇ ಸಿನಿಮಾ. ಇವರಿಗೆ ಶಿವಣ್ಣ ನಟಿಸಿದ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಹಾಗೂ ತೆಲುಗಿನಲ್ಲಿ 'ಆಫೀಸರ್', 'ಗುಡ್ ಲಕ್ ಸಖಿ' ಸಿನಿಮಾ ನಿರ್ಮಿಸಿರುವ ಸುಧೀರ್ ಚಂದ್ರ ಪಡಿರಿ ಹಣ ಹೂಡುತ್ತಿದ್ದಾರೆ.

ಸಿಕ್ಕಾಪಟ್ಟೆ ಬ್ಯುಸಿ ಶಿವಣ್ಣ

ಸಿಕ್ಕಾಪಟ್ಟೆ ಬ್ಯುಸಿ ಶಿವಣ್ಣ

ಸ್ಯಾಂಡಲ್‌ವುಡ್‌ನಲ್ಲಿ ಸದಾ ಬ್ಯುಸಿಯಾಗಿರುವ ನಟ ಶಿವರಾಜ್‌ಕುಮಾರ್. ಸದ್ಯ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡಿರುವ 125ನೇ ಸಿನಿಮಾ 'ವೇದ' ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಎ ಹರ್ಷ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ 'ಫೋಸ್ಟ್', 'ನೀ ಸಿಗೋವರೆಗೂ', '45', 'ಕರಟಕ ದಮನಕ' ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆ ಪ್ಯಾನ್ ಇಂಡಿಯಾ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Shivarajkumar Next Action Thriller Movie With Telugu Director Karrthik Adwait, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X