'ಬೇಲ್' ತಂಡದಿಂದ ಟಿಬೆಟಿಯನ್ ಭೌದ್ಧಗುರು ದಲೈಲಾಮಾ ಭೇಟಿ; ಆಶೀರ್ವಾದ ಪಡೆದ ಸಾಯಿ ಕುಮಾರ್, ಜಯರಾಮ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೊಸ ಸಿನಿಮಾ 'ಬೇಲ್' ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಪವನ್ ಒಡೆಯರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ತಂಡ ಧರ್ಮಶಾಲಾದಲ್ಲಿ ಬೀಡು ಬಿಟ್ಟಿದೆ. ಸಿನಿಮಾದ ಚಿತ್ರೀಕರಣ ಸಂಬಂಧ ಧರ್ಮಶಾಲಾಗೆ ತೆರಳಿದ ಸಂದರ್ಭದಲ್ಲಿ ಟಿಬೆಟಿಯ್ ಧರ್ಮಗುರು ದಲೈಲಾಮಾ ಅವರನ್ನು ಭೇಟಿ ಮಾಡಿದ್ದಾರೆ.
'ಬೇಲ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಿರಿಯ ನಟ ಡೈಲಾಗ್ ಕಿಂಗ್ ಸಾಯಿ ಕುಮಾರ್, ಮಲಯಾಳಂ ನಟ ಜಯರಾಮ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಹಾಗೂ ತಂಡ ದಲೈಲಾಮಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಇದ್ದಾರೆ.

ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಸದ್ದಿಲ್ಲದೆ ಸಿನಿಮಾ ಶೂಟಿಂಗ್ ಮಾಡಿರುವ ಪವನ್ ಒಡೆಯರ್ ಕೊನೆಯ ಹಂತದ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಧರ್ಮಶಾಲಾದಲ್ಲಿ ಶೂಟಿಂಗ್ ನಡೆಯಲಿದ್ದು, ಈ ನಿಮಿತ್ತ ಅಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಟಿಬೆಟಿಯನ್ ಬೌದ್ಧಗುರು ದಲೈಲಾಮಾ ಅವರನ್ನು ಭೇಟಿ ಮಾಡಿದ್ದಾರೆ.
'ಕೆಡಿ ದಿ ಡೆವಿಲ್' ಬಳಿಕ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾವಿದು. ಅಣ್ಣಾವ್ರ ಹುಟ್ಟುಹಬ್ಬದಂದು 'ಬೇಲ್' ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಅನ್ನು ರಿವೀಲ್ ಮಾಡಲಾಗಿತ್ತು. ಅಲ್ಲಿವರೆಗೂ ಸಿನಿಮಾದ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಅಲ್ಲದೆ ಇದು ಪವನ್ ಒಡೆಯರ್ ಹಾಗೂ ಶಿವಣ್ಣ ಕಾಂಬಿನೇಷನ್‌ನ ಮೊದಲ ಸಿನಿಮಾ. ಹೀಗಾಗಿ ದೊಡ್ಮೆನೆ ಅಭಿಮಾನಿಗಳಲ್ಲಿ ನಿರೀಕ್ಷೆ ಅಷ್ಟೇ ದೊಡ್ಡದಿದೆ.
ಹೌದು, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 2 ಸಿನಿಮಾ ನಿರ್ದೇಶನ ಮಾಡಿದ್ದ ಪವನ್ ಒಡೆಯರ್ ಈಗ ಶಿವಣ್ಣಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಬೇಲ್' ಸಿನಿಮಾದ ಮೂಲಕ ಶಿವಣ್ಣನನ್ನು ವಿಶಿಷ್ಠ ಅವತಾರದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಕೊನೆಯ ಹಂತದ ಶೂಟಿಂಗ್ ಮಾಡುತ್ತಿದ್ದು, ಇಡೀ ತಂಡ ಧರ್ಮಶಾಲಾದಲ್ಲಿ ಬೀಡು ಬಿಟ್ಟಿದೆ.

ಶಿವಣ್ಣನ ಅವತಾರವನ್ನು ಪರಿಚಯಿಸುವುದಕ್ಕೆ ಪವನ್ ಒಡೆಯರ್ ಪ್ಲಾನ್ ಮಾಡಿದ್ದಾರೆ. ಶೀಘ್ರದಲ್ಲಿಯೇ 'ಬೇಲ್' ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡುವ ಸುಳಿವನ್ನು ನೀಡಿದ್ದಾರೆ. ಇಷ್ಟೇ ಅಲ್ಲದೆ ಶಿವಣ್ಣನೊಂದಿಗೆ ಸಾಯಿ ಕುಮಾರ್, ಮಲಯಾಳಂ ಸ್ಟಾರ್ ನಟ ಜಯರಾಮ್ 'ಘೋಸ್ಟ್' ಬಳಿಕ ಮತ್ತೆ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ದೊಡ್ಡ ಸ್ಟಾರ್‌ಕಾಸ್ಟ್ ಇರುವ ಈ ಸಿನಿಮಾ ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ.
ಶಿವರಾಜ್‌ಕುಮಾರ್ ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಬೇಲ್' ಜೊತೆಗೆ ಮತ್ತೊಂದು ಕನ್ನಡ ಸಿನಿಮಾ 'ಡ್ಯಾಡಿ' ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಇದರೊಂದಿಗೆ ಬಿಗ್ ಬಜೆಟ್ ಸಿನಿಮಾ 'ಜೈಲರ್ 2' ಶೂಟಿಂಗ್ ಮುಗಿದಿದೆ. 'ಜೈಲರ್'ನಲ್ಲಿ ನಟಿಸಿದ ಅತಿಥಿ ಪಾತ್ರ ಶಿವಣ್ಣನಿಗೆ ತಮಿಳು ಮಂದಿಯನ್ನು ಹೆಚ್ಚೆಬ್ಬಿಸಿತ್ತು. ಇನ್ನು 'ಗುಮ್ಮಡಿ ನರಸಿಂಹಯ್ಯ' ಶೂಟಿಂಗ್‌ನಲ್ಲೂ ಶಿವಣ್ಣ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇದೇ ಜೂನ್ 4 ರಂದು ರಾಮ್ ಚರಣ್ ಜೊತೆ ನಟಿಸಿರುವ 'ಪೆದ್ದಿ' ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications
